News Kannada
Monday, March 20 2023

ಕಾಸರಗೋಡು

ಕಾಸರಗೋಡು : ಹುಟ್ಟುಹಬ್ಬದ ದಿನದಂದೇ  ಅಪಘಾತಕ್ಕೆ ಸಿಲುಕಿ ಬಾಲಕಿ ಮೃತ

acccident
Photo Credit :

ಕಾಸರಗೋಡು : ಹುಟ್ಟುಹಬ್ಬದ ದಿನದಂದೇ  ಅಪಘಾತಕ್ಕೆ ಸಿಲುಕಿ ಬಾಲಕಿ ಮೃತಪಟ್ಟ  ದಾರುಣ ಘಟನೆ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬಂಗ್ರಮಂಜೇಶ್ವರ  ಕಟ್ಟೆಬಜಾರಿನ  ರವಿಚಂದ್ರ ಹೆಗ್ಡೆ ರವರ ಪುತ್ರಿ ದೀಪಿಕಾ ( 11) ಮೃತಪಟ್ಟವರು.

ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಾಮಾಗ್ರಿ ತರಲೆಂದು  ಮಂಜೇಶ್ವರಕ್ಕೆ ತಂದೆ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಜೇಶ್ವರ ಒಳರಸ್ತೆಯ ಗಿಳಿವಿಂಡು ಸಮೀಪ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ  ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಡಿಕ್ಕಿಯಿಂದ ಇಬ್ಬರು ರಸ್ತೆ  ಬದಿಗೆ ಬಿದ್ದಿದ್ದು , ಗಂಭೀರ ಗಾಯಗೊಂಡ  ದೀಪಿಕಾ ಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು . ತಂದೆ ರವಿಚಂದ್ರ ಗಾಯಗೊಂಡಿದ್ದು  ಕಾಸರಗೋಡು  ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಳು  ತಾಯಿ ಮಂಗಳ, ಸಹೋದರಿ ದೀಕ್ಷಾ ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.. ದೀಪಿಕಾ ಬಂಗ್ರ ಮಂಜೇಶ್ವರ ಜಿ ಎಚ್ ಎಸ್ ಎಸ್ ನ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಕಾರು ಮತ್ತು ಎರಡು ಬೈಕ್ ಮೇಲೆ ಹರಿದ ಟ್ರಕ್: ಐವರು ಸಾವು, ಐವರಿಗೆ ಗಂಭೀರ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು