ಕಾಸರಗೋಡು: ಬಸ್ಸು ಪ್ರಯಾಣಿಕನ ಹಣ ಕಳವು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕಾಞ೦ಗಾಡ್ ನ ಪ್ರಬೀಷ್ ( ೩೧) ಮತ್ತು ಸಜಿತ್ ( ೩೨) ಬಂಧಿತರು ಕಾಸರಗೋಡು ಬ್ಯಾಂಕೊಂದರ ಕಾವಲುಗಾರ ವಿಜಯನ್ ರವರ ಹಣವನ್ನು ಕಳವುಗೈದ ಪ್ರಕರಣದ ಆರೋಪಿಗಳಾಗಿದ್ದಾರೆ. ಎರಡು ದಿನಗಳ ಹಿಂದೆ ಕೆ ಎಸ್ ಅರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತಲಪಾಡಿ ಬಳಿ ಐದು ಸಾವಿರ ರೂ . ನಗದನ್ನು ಎಗರಿಸಿದ್ದರು.
ವಿಜಯನ್ ಬೊಬ್ಬೆ ಹಾಕಿದಾಗ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಭಿಷ್ ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು . ನಂತರ ಪರಾರಿಯಾಗಿದ್ದ ಸಜಿತ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ವಿರುದ್ಧ ಹಲವಾರು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.