ಕಾಸರಗೋಡು: ಉದುಮ ಮಾಜಿ ಶಾಸಕ ಹಾಗೂ ಸಿಪಿಐಎಂ ಮುಖಂಡ ಪಿ. ರಾಘವನ್ (77) ಇಂದು ಮುಂಜಾನೆ ಬೇಡಡ್ಕದಲ್ಲಿರುವ ಸ್ವಗೃಹ ದಲ್ಲಿ ನಿಧನರಾದರು. 1991 ಮತ್ತು 1996 ರಲ್ಲಿ ಉದುಮ ವಿಧಾನಸಭಾ ಕ್ಷೇತ್ರದಿಂದ ಸಿಪಿಐಎಂ ಶಾಸಕರಾಗಿ ಆಯ್ಕೆಯಾಗಿದ್ದರು.
ಸಿಪಿಐಎಂ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ 37 ವರ್ಷಗಳಿಂದ ಸದಸ್ಯರಾಗಿದ್ದರು. ಎಲ್ ಡಿ ಎಫ್ ಜಿಲ್ಲಾ ಸಂಚಾಲಕ ಅಲ್ಲದೆ ದಿನೇಶ್ ಬೀಡಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ, ಕಾಸರಗೋಡು ಜಿಲ್ಲಾಧ್ಯಕ್ಷ, ಜಿಲ್ಲಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಾಘವನ್ ರವರ ನಿಧನಕ್ಕೆ ಉದುಮ ಶಾಸಕ ಸಿ. ಎಚ್ ಕುಞ೦ಬು, ಮಾಜಿ ಸಂಸದ ಪಿ. ಕರುಣಾಕರನ್ , ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.