ಕಾಸರಗೋಡು: ಚಲಿಸುತ್ತಿದ್ದ ಎರಡು ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಚೇರಂಗೈಯಲ್ಲಿ ನಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿಘಟನೆ ನಡೆದಿದೆ. ಶುಕ್ರವಾರ ಸಂಜೆ ಮಂಗಳೂರಿನಿಂದ ಕಣ್ಣೂರಿಗೆ ಹಾಗೂ ಕಣ್ಣೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲುಗಳ ಮೇಲೆ ಕಲ್ಲೆಸೆಯಲಾಗಿದೆ.
ಕೃತ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಸ್ಥಳಗಳಲ್ಲಿ ದಿನಂಪ್ರತಿ ಹತ್ತಕ್ಕೂ ಅಧಿಕ ಮಕ್ಕಳು ಸುತ್ತಾಡುತ್ತಿದ್ದು , ಈ ಪೈಕಿ ಕೆಲವರು ಮಾದಕ ವ್ಯಸನಿಗಳು ಇದ್ದಾರೆ ಎನ್ನಲಾಗಿದೆ ಇವರೇ ಕೃತ್ಯ ನಡೆಸಿದ್ದಾರೆಯೇ ಅಥವಾ ಬೇರೆ ಯಾರಾದರೂ ಕೃತ್ಯದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ .