ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮೀ೦ಜ , ಪೈವಳಿಕೆ ಪಂಚಾಯತ್ ನ್ನು ಸಂಪರ್ಕಿಸುವ ಮುನ್ನಿಪ್ಪಾಡಿ ಸೇತುವೆಗೆ ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಜ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ .ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಮೀ೦ಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ , ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಕೆ. ಜಯಂತಿ , ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ, ನಾರಾಯಣ ನಾಯ್ಕ್ , ಮೀ೦ಜ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಳ್ಳಂಕೂಡಲ್, ಮೀ೦ಜ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರಾದ ರುಖಿಯಾ ಸಿದ್ದಿಕ್, ಬಾಬು ಸಿ. ಕೂಳೂರು, ಸರಸ್ವತಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಎಂ.ಎಲ್ ಅಶ್ವಿನಿ, ಸರೋಜಾ ಆರ್. ಬಲ್ಲಾಳ್, ಕೆ. ವಿ ರಾಧಾಕೃಷ್ಣ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಶೆಟ್ಟಿ , ಪಂಚಾಯತ್ ಸದಸ್ಯರಾದ ಮಿಸ್ರಿಯಾ, ನಾರಾಯಣ ತುಂಗ, ಜ್ಯೋತಿ ಪಿ . ರೈ , ಕುಸುಮಾ ಮೋಹನ್ , ಚಂದ್ರಶೇಖರ, ಜನಾರ್ಧನ , ಪಿ.ಎಂ ಆಶಾಲತಾ , ರೇಖಾ ಶರತ್, ವಿನೋದ್ ಜಿ. ಬೆಜ್ಜ , ಅಬ್ದುಲ್ ರಜಾಕ್ ಕಳಿಯೂರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಕೆ.ವಿ ಕುಂಞರಾಮನ್, ಬಿ.ವಿ ರಾಜನ್, ಇಕ್ಬಾಲ್ ಕಳಿಯೂರ್, ವಾಹಿದಾ ಕೂಡಲ್, ರಾಘವ ಚೇರಾಲ್, ಬಿ.ಎಂ ಆದರ್ಶ, ಜಯಕುಮಾರ್ ಮೀಯಪದವು, ಎಂ. ಮುಹಮ್ಮದ್ ಕುಂಞ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ ರಾಜಮೋಹನ್ ಸ್ವಾಗತಿಸಿ, ಮೀ೦ಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ. ನಂದ ಗೋಪಾಲ್ ವಂದಿಸಿದರು.