News Kannada
Tuesday, October 04 2022

ಕಾಸರಗೋಡು

ಕಾಸರಗೋಡು: ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಭಾರೀ ಮೌಲ್ಯದ ನಿಷೇಧಿತ ಪಾನ್ ಮಸಾಲ ಉತ್ಪನ್ನ ವಶ - 1 min read

Banned pan masala product of high value seized from illegally stored
Photo Credit : By Author

ಕಾಸರಗೋಡು: ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಭಾರೀ ಮೌಲ್ಯದ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ವಿದ್ಯಾನಗರ ಠಾಣಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಮುಟ್ಟತ್ತೋಡಿ ಚೆಟ್ಟುಂಗುಯಿ ಪಳ್ಳಂ ಹೌಸ್ ನ ಪಿ.ಎಚ್ ಕಮರುದ್ದೀನ್ ( ೩೬) ಮತ್ತು ಚೆಟ್ಟುಂಗುಯಿಯ ರಿಷಾದ್ ಎಂ.ಸಿ ( ೨೬) ಬಂಧಿತರು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಚೆಟ್ಟುಂಗುಯಿ ಯಲ್ಲಿ ನ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದಾಗ ಪಾನ್ ಮಸಾಲ ಉತ್ಪನ್ನಗಳ ದಾಸ್ತಾನು ಪತ್ತೆಯಾಗಿದೆ.

ಹತ್ತಕ್ಕೂ ಅಧಿಕ ಪ್ಲಾಸ್ಟಿಕ್ ಗೋಣಿಗಳಲ್ಲಿ ತುಂಬಿಸಿಡಲಾಗಿತ್ತು. ಇದನ್ನು ಜಿಲ್ಲೆಯ ವಿವಿದೆಧೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಕರ್ನಾಟಕದಿಂದ ತಂದು ಈ ಬಾಡಿಗೆ ಮನೆಯಲ್ಲಿ ದಾಸ್ತಾನಿಟ್ಟು ಬಳಿಕ ಹಲವೆಡೆ ಮಾರಾಟ ಮಾಡುತ್ತಿದ್ದರು. ವಶಪಡಿಸಿಕೊಂಡ ಉತ್ಪನ್ನಗಳ ಮೌಲ್ಯ ಸುಮಾರು ಮೂರುವರೆ ಲಕ್ಷ ರೂ . ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಹೊಸದಿಲ್ಲಿ: ರ‍್ಯಾಲಿ ಚುನಾವಣೆಗಾಗಿ ಅಲ್ಲ, ಹಣದುಬ್ಬರ, ಆರ್ಥಿಕ ಅಸಮಾನತೆಯ ವಿರುದ್ಧಎಂದ ಕಾಂಗ್ರೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು