News Kannada
Sunday, December 04 2022

ಕಾಸರಗೋಡು

ಕಾಸರಗೋಡು: ಕೆಲ ಘಟನೆಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ಉಂಟು ಮಾಡಿದೆ

Some incidents have brought disrepute to the entire police department.
Photo Credit : By Author

ಕಾಸರಗೋಡು: ಪೊಲೀಸ್ ಇಲಾಖೆಯಿಂದ ಹಲವು ಒಳ್ಳೆಯ ಕಾರ್ಯಗಳು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಇಲಾಖೆಗೆ ಕಳಂಕ ತರುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಕಾಸರಗೋಡು ಮಹಿಳಾ ಪೊಲೀಸ್ ಠಾಣೆ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮೇಲ್ಪರಂಬ ಪೊಲೀಸ್ ಠಾಣೆ ಹಾಗೂ ಬೇಕಲ ಉಪ ವಿಭಾಗೀಯ ಪೊಲೀಸ್ ಕಛೇರಿಯ ಶಂಕುಸ್ಥಾಪನೆ ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೆಲ ಘಟನೆಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ಉಂಟು ಮಾಡಿದೆ. ಆದರೆ ಕೇರಳದ ಪೊಲೀಸ್ ವ್ಯವಸ್ಥೆ ಮಾದರಿ ಯಾಗಿದೆ. ಇದರಿಂದ ಪೊಲೀಸ್ ಇಲಾಖೆ ಬಗ್ಗೆ ಆರೋಪ ಹೊರಿಸುವುದು ಸರಿ ಅಲ್ಲ. ಪೊಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸುವ ಅನೇಕ ಮಾದರಿ ಕಾರ್ಯಗಳು ನಡೆಯುತ್ತಿದ್ದರೂ ಬೆರಳೆಣಿಕೆಯಷ್ಟು ಜನರ ಕಾರ್ಯಗಳು ಇಡೀ ಪೊಲೀಸ್ ಇಲಾಖೆಗೆ ಕಳಂಕ ತಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಸಮಾಜಕ್ಕೆ, ಪೊಲೀಸ್ ಇಲಾಖೆಗೆ ಹಿತವಲ್ಲದ ಕೆಲಸ ಮಾಡುವವರ ಮೇಲೆ ಕರುಣೆ, ದಯೆ ತೋರಲು ಸಾಧ್ಯವಿಲ್ಲ ಎಂದರು.

ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಕೇಂದ್ರ ಕಛೇರಿಯ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ವಹಿಸಿದ್ದರು. ಅಪರಾಧ ತನಿಖೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕೇರಳ ಪೊಲೀಸರು ಸೂಕ್ಷ್ಮ ತನಿಖಾ ಕೌಶಲ್ಯದಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಶಿಲಾಫಲಕ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆ ಯನ್ನು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು. ಡಿವೈಎಸ್ಪಿ ವಿಶ್ವಂಭರನ್ ನಾಯರ್,ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಪಿ.ಕೆ.ಸುಧಾಕರನ್, ಸೈಬರ್ ಪೊಲೀಸ್ ಠಾಣೆ ಎಸ್.ಎಚ್. ಓ.ಕೆ.ಪ್ರೇಮ್ ಸದನ್, ಕಾಸರಗೋಡು ಮಹಿಳಾ ಪೊಲೀಸ್ ಠಾಣೆ ಎಸ್‌ಎಚ್‌ಒ ಪಿ.ಚಂದ್ರಿಕಾ, ಮಧೂರು ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ಜಾಸ್ಮಿನ್ ಕಬೀರ್, ಮಧೂರು ಪಂಚಾಯತ್ ಸದಸ್ಯೆ ಎಂ.ಸ್ಮಿತಾ, ಕ್ರೈಂ ಬ್ರಾಂಚ್ ಡಿವೈಎಸ್‌ಪಿ ಸತೀಶ್ ಕುಮಾರ್ ಅಳಕಲ್,ಎಂ.ಸದಾಶಿವನ್, ಎ.ಪಿ.ಸುರೇಶ್ಮೊದಲಾದವರು ಮಾತನಾಡಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೆ.ರಾಜು ಸ್ವಾಗತಿಸಿ, ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ ಡಿವೈಎಸ್ಪಿ ಸಿಎ ಅಬ್ದುಲ್ ರಹೀಮ್

See also  ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1736 ಮಂದಿಗೆ ಕೊರೋನಾ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು