ಕಾಸರಗೋಡು: ಗೃಹಿಣಿಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕೊಕ್ಕೆಚ್ಚಾಲ್ ಪೊನ್ನೆತ್ತೋಡು ಎಂಬಲ್ಲಿ ನಡೆದಿದೆ.
ಪೊನ್ನೆತ್ತೋಡಿನ ತಾರಾನಾಥ ಶೆಟ್ಟಿ ರವರ ಪತ್ನಿ ಅನಿತಾ ಶೆಟ್ಟಿ ( ೪೨) ಮೃತಪಟ್ಟವರು.
ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅನಿತಾರವರನ್ನು ಸಂಬಂಧಿಕರು ಶೋಧ ನಡೆಸಿದಾಗ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಂಬಳೆ ಪೊಲೀಸರು ಮಹಜರು ನಡೆಸಿದರು.