ಕಾಸರಗೋಡು: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸುಮಾರು ಎಂಟು ಪವನ್ ಚಿನ್ನಾಭರಣ ಮತ್ತು 45 ಸಾವಿರ ರೂ . ನಗದು ಕಳವು ಗೈದ ಘಟನೆ ಉಪ್ಪಳದಲ್ಲಿ ನಡೆದಿದೆ.
ಹಿದಾಯತ್ ಬಜಾರ್ ನ ಮುಹಮ್ಮದ್ ಸಲೀಂ ರವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸಲೀಂ ಗಲ್ಫ್ ನಲ್ಲಿದ್ದು , ತಾಯಿ ಸಫಿಯಾ ಮನೆಗೆ ಬೀಗ ಹಾಕಿ ಸಾಲೆತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದರು.
ಗಲ್ಫ್ ನಲ್ಲಿರುವ ಸಲೀಂ ಮೊಬೈಲ್ ಫೋನ್ ಮೂಲಕ ಮನೆಯಲ್ಲಿರುವ ಸಿ ಸಿ ಟಿ ವಿ ದ್ರಶ್ಯ ಗಳನ್ನು ಗಮನಿಸಿದಾಗ ತಡರಾತ್ರಿ ಮನೆಯೊಳಗೆ ಓರ್ವ ಮುಸುಕುಧಾರಿಯಾಗಿ ತೆರಳುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮನೆಗೆ ಬಂದು ಗಮನಿಸಿದಾಗ ಮುಂಭಾಗದ ಬಾಗಿಲು ಮುರಿದಿರುವುದು ಕಂಡು ಬಂದಿದೆ.
ಮೇಲಂತಸ್ತಿನ ಲ್ಲಿದ್ದ ಒಂದು ಮತ್ತು ಕೆಳಗಡೆ ಇದ್ದ ಮೂರು ಕಪಾಟುಗಳನ್ನು ಒಡೆದು ವಸ್ತ್ರಗಳನ್ನು ಎಸೆದಿರುವುದು ಕಂಡು ಬಂದಿದೆ ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.