ಕಾಸರಗೋಡು: ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೊಲೀಸ್ ಗಾಯಗೂಂಡ ಘಟನೆ ಇಂದು ಮುಂಜಾನೆ ವಿದ್ಯಾನಗರ ಪಾರೆ ಕಟ್ಟೆಯಲ್ಲಿ ನಡೆದಿದೆ.
ವಿದ್ಯಾನಗರ ಠಾಣಾ ಪೊಲೀಸ್ ಬಿಜು ( ೪೩) ಗಾಯ ಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ .ರಾತ್ರಿ ಕರ್ತ್ಯವ್ಯ ಮುಗಿಸಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಜೀಪಿನಲ್ಲಿದ್ದ ವಿದ್ಯಾನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಕುಮಾರ್ ಹಾಗೂ ಇನ್ನೋರ್ವ ಪೊಲೀಸ್ ಅಪಾಯದಿಂದ ಪಾರಾಗಿದ್ದರಷ್ಟೇ.
ಡಿಕ್ಕಿ ಹೊಡೆದ ಬಳಿಕ ಜೀಪು ಅಗ್ನಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.