News Kannada
Friday, December 09 2022

ಮಂಗಳೂರು

ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆ ಮಾಡಲಾಗುವುದು : ಸಚಿವ ಸುನೀಲ್ ಕುಮಾರ್

Photo Credit :

ಮಂಗಳೂರು :   ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆಯ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಶೀಘ್ರವೇ ನಿಗಮದ ಘೋಷಣೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಸೋಮವಾರ ರಾಜ್ಯ ಮಟ್ಟದ ಶ್ರೀನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಾರಾಯಣ ಗುರು ನಿಗಮದ ಸ್ವರೂಪದ ಬಗ್ಗೆ ಶೀಘ್ರವೇ ಚರ್ಚಿಸುತ್ತೇವೆ. ಅದೇ ರೀತಿ ನಿಗಮದ ವ್ಯಾಪ್ತಿ, ಅನುದಾನ ವಿಚಾರ ನಿರ್ಧರಿಸುತ್ತೇವೆ. ಶೀಘ್ರ ನಿಗಮ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಅಧಿವೇಶನದೊಳಗೆ ಜಯಂತಿ ಆಚರಣೆಗೆ ಅಂತಿಮ ರೂಪ ವಿವಿಧ ಜಯಂತಿಗಳ ಆಚರಣೆ ಬಗ್ಗೆ ಶುಕ್ರವಾರ ಕನ್ನಡ ಸಂಸ್ಕೃತಿ ಇಲಾಖೆಯ ಸಭೆ ಇದೆ. ಅದರಲ್ಲಿ ವಿವಿಧ ಜಯಂತಿಗಳನ್ನು ಸೀಮಿತಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ, ಯುವಜನಸೇವೆ ಮತ್ತು ಶಿಕ್ಷಣ ಇಲಾಖೆ ಒಟ್ಟಾಗಿ ಜಯಂತಿಗಳನ್ನು ಆಚರಿಸಬಹುದು. ಹೆಚ್ಚು ಅರ್ಥಪೂರ್ಣ ಜಯಂತಿಗಳ ಆಚರಣೆಗೆ ಒತ್ತು ನೀಡಲಾಗುವುದು ಎಂದ ಸಚಿವರು, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನೂ ಸಂಭ್ರಮದಿಂದ ಆಚರಿಸಬೇಕು. ನಾಡಿನಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಅಧಿವೇಶನದ ಒಳಗಾಗಿ ಕಾರ್ಯಕ್ರಮದ ರೂಪುರೇಷೆ ಅಂತಿಮ ಸ್ವರೂಪ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

See also  ರಸ್ತೆ ವಿಸ್ತರಣೆಗೆ ವಿರೋಧ ಬೇಡ: ಶಾಸಕ ಕೆ.ಜಿ.ಬೋಪಯ್ಯ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು