News Kannada
Monday, November 28 2022

ಮಂಗಳೂರು

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ರಘುಪತಿ ಭಟ್ - 1 min read

Photo Credit :

ಬೆಳ್ತಂಗಡಿ : ಉಡುಪಿ ಶಾಸಕ ರಘುಪತಿ ಭಟ್, ಪುತ್ತೂರು ಶಾಸಕ ಸಂಜೀವ ಮಠಂದೂರು ಭಾನುವಾರ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾದಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕ ರಘುಪತಿ ಭಟ್, ಸಾವಿರಾರು ವರ್ಷಗಳ ಇತಿಹಾಸವಿರುವ ಚಾತುರ್ಮಾಸ್ಯ ಸ್ವಾಮೀಜಿಗಳಿಗೆ ಪವಿತ್ರ ಕಾಲ.ಚಾತುರ್ಮಾಸ್ಯ ಸಂದರ್ಭ ಪಡೆಯುವ ದಿವ್ಯಶಕ್ತಿಯು ಲೋಕದ ಕಲ್ಯಾಣಕ್ಕೆ ಕಾರಣವಾಗುತ್ತದೆ. ಇಲ್ಲಿನ ಸಂಸ್ಥಾನವನ್ನು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ದೂರದೃಷ್ಟಿಯಿಂದ ಪುನರುಜ್ಜೀವನಗೊಳಿಸಿದರು‌. ವಿಸ್ತಾರ ಮಾಡಲು ಈಗಿನ ಸ್ವಾಮೀಜಿ ಪಣತೊಟ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಸಮಾಜ ಒಂದಿಷ್ಟು ಆತಂಕ ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಾಧು-ಸಂತರ ಮಾರ್ಗದರ್ಶನದ ಅಗತ್ಯವಿದೆ. ಸಮಾಜಕ್ಕೆ ಉಂಟಾಗುವ ಆಪತ್ತನ್ನು ತಪ್ಪಿಸಲು ಸಂಸ್ಕಾರವನ್ನು ರೂಪಿಸುವ ಕಾರ್ಯಗಳು ಮಠಾಧೀಶರುಗಳಿಂದ ನಡೆಯುತ್ತಿವೆ. ಪ್ರಥಮ ಹಂತದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಇಲ್ಲಿನ ಶ್ರೀರಾಮ ಕ್ಷೇತ್ರದ ಸಮಿತಿಗಳನ್ನು ರಚಿಸಿ ಬಳಿಕ ಜಿಲ್ಲೆಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ನಾವೆಲ್ಲರೂ ಒಂದೇ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣಬೇಕು ಎಂಬ ನಾರಾಯಣಗುರುಗಳ ಸಂದೇಶವನ್ನು ಕನ್ಯಾಡಿ ಮಹಾಸಂಸ್ಥಾನದಲ್ಲಿ ಪಾಲಿಸಲಾಗುತ್ತಿದೆ. ಇಲ್ಲಿ ಯಾವುದೇ ಮೇಲು-ಕೀಳು ಎಂಬ ಭಾವನೆ ಇಲ್ಲ.ಇದು ಮಠದ ಅಭಿವೃದ್ಧಿ ಮತ್ತು ಜನಪ್ರಿಯತೆಗೆ ಕಾರಣವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸತ್ಯ-ಧರ್ಮದ ನಡೆ, ದೈನಂದಿನ ಕರ್ಮಗಳು ನೆಮ್ಮದಿಗೆ ಮೂಲವಾಗಿವೆ. ಧರ್ಮದ ಜಾಗೃತಿ ಮೂಲಕ ಸಂತರ ಉದ್ದೇಶ ಜಗತ್ತಿಗೆ ದಿಕ್ಸೂಚಿಯಾಗಿ ಮೂಡಬೇಕು. ಧಾರ್ಮಿಕ ಜಾಗೃತಿ ಮೂಡಿದರೆ ಕೆಟ್ಟ ವಿಚಾರಗಳಿಗೆ ಅವಕಾಶವಿರುವುದಿಲ್ಲ. ಶಾಲೆಗಳಲ್ಲಿ ಶಿಕ್ಷಣದ ಜತೆ ಭಾರತೀಯ ಸಂಸ್ಕೃತಿಯ ಬೋಧನೆಯನ್ನು ಅನಾವರಣಗೊಳಿಸಿದರೆ ತತ್ವಗಳು ಜಾಗೃತಗೊಳ್ಳುತ್ತವೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಶ್ರೀ ರಾಮ ಕ್ಷೇತ್ರ ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಉಂಗಿಲ ಬೈಲು,ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಗುರುದೇವ ಮಠದ ಟ್ರಸ್ಟಿ ತುಕಾರಾಮ್ ಸಾಲಿಯಾನ್, ಸಹಕಾರಿ ಭಾರತಿ ತಾಲೂಕು ಅಧ್ಯಕ್ಷ ಸುಂದರ ಹೆಗ್ಡೆ, ವಿ. ಎನ್. ನಾಯಕ್ ಸಿದ್ಧಾಪುರ, ಜಿಲ್ಲಾ ಬಿ ಜೆ ಪಿ ಹಿಂದುಳಿದ ಘಟಕದ ಉಪಾಧ್ಯಕ್ಷ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ತಾ.ಪಂ. ಮಾಜಿ ಸದಸ್ಯರು ಗಳಾದ ಶಶಿಧರ ಎಂ., ಕೊರಗಪ್ಪ ಗೌಡ, ಪ್ರಶಾಂತ್ ಎಂ. ಪಾರೆಂಕಿ, ಸೀತಾರಾಮ್ ಬೆಳಾಲು,ಕೃಷ್ಣಪ್ಪ ಗುಡಿಗಾರ, ರವೀಂದ್ರ ಪೂಜಾರಿ ಆರ್ಲ, ವಿವಿಧ ಭಜನಾ ಮಂಡಳಿ ಸದಸ್ಯರು ಹಾಜರಿದ್ದರು

See also  ಚಾರ್ಮಾಡಿ ಘಾಟಿಯಲ್ಲಿ ಸಿಕ್ಕಿಹಾಕಿಕೊಂಡ ಬೃಹತ್ ಗಾತ್ರದ ಲಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು