News Kannada
Monday, November 28 2022

ಮಂಗಳೂರು

ವಿವಿಧ ವಿಷಯಗಳ ಕುರಿತು ಸಭೆ ಸ್ವಚ್ಛತೆ- ಸೇವೆಗಾಗಿ ಪಂಚ ನಿರ್ಣಯ - 1 min read

Photo Credit :
ಮಂಗಳೂರು :  ನಗರದ ಅಭಿವೃದ್ಧಿಯ, ತೆರಿಗೆ ಸಂಗ್ರಹಣೆ, ಕಟ್ಟಡ ಪರವಾನಿಗೆ, ಏಕಗವಾಕ್ಷಿ ಯೋಜನೆ, ಕಸ ನಿರ್ವಹಣೆ, ಎಸ್.ಟಿ.ಪಿ ಅಳವಡಿಕೆ ಮತ್ತು ನಿರ್ವಹಣೆ, ಒಳಚರಂಡಿ ಜಾಲಕ್ಕೆ ಮಳೆನೀರು ಬಿಡುವ ಸಮಸ್ಯೆ, ಒಳಚರಂಡಿ ಜೋಡಣೆ ಸೇರಿದಂತೆ ಮಹತ್ವದ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸುಧಾರಣೆ ತರುವ ನಿಟ್ಟಿನಲ್ಲಿ ಪಂಚ ನಿರ್ಣಯಗೊಳ್ಳಲಾಗಿದೆ.
 ನಗರದಲ್ಲಿ ಆಯುಕ್ತ  ಅಧ್ಯಕ್ಷತೆಯಲ್ಲಿ ಮಂಗಳವಾರ   ಮಹಾನಗರಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ನಡೆದ‌ ಸಭೆ ಪ್ರಮುಖ ವಿಷಯಗಳ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಹಲವು ಮಹತ್ವದ ಅಂಶಗಳು ಗಮನ ಸೆಳೆದಿವೆ.
ಸಭೆ ನಡೆಸಿದರು.
1.ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‍ಮೆಂಟ್, ವಾಣಿಜ್ಯ ಕಟ್ಟಡಗಳ ಮಾಹಿತಿಯನ್ನೊಳಗೊಂಡ ಆಸ್ತಿಗಳ ದಾಖಲಾತಿ ಅಭಿವೃದ್ದಿಪಡಿಸುವ ಸಂಬಂಧ ಪಾಲಿಕೆಯಿಂದ ನಿಗಧಿಪಡಿಸಿದ ನಮೂನೆಯಲ್ಲಿ ಭರ್ತಿ ಮಾಡಿ ನಿಗಧಿತ ಸಮಯದೊಳಗೆ ಸಂಪೂರ್ಣ ಮಾಹಿತಿಯನ್ನು, ಕಟ್ಟಡ ಅಭಿವೃದ್ಧಿದಾರರು/ಕಟ್ಟಡದ ಮಾಲೀಕರು ನೀಡುವ ಬಗ್ಗೆ ಕ್ರಮವಹಿಸಬೇಕು.
2.ಘನತ್ಯಾಜ್ಯ ಸಮರ್ಪಕ ನಿರ್ವಹಣೆಯ ಕುರಿತು ಇರುವ ವಿವಿಧ ಮಾದರಿಯ ತಂತ್ರಜ್ಞಾನದ ಬಗ್ಗೆ ಕಾರ್ಯಾಗಾರ ಪ್ರದರ್ಶನ ನಡೆಸಿಕೊಂಡು, ಆಸಕ್ತದಾರರಿಗೆ ಸೂಕ್ತ ಮಾಹಿತಿ ನೀಡಲು ಆರೋಗ್ಯ ವಿಭಾಗದಿಂದ ಕ್ರಮ ವಹಿಸುವುದು.
3.ಕಟ್ಟಡ ಪರವಾನಿಗೆಗೆ ಸಂಬಂಧಪಟ್ಟಂತೆ ಏಕಗವಾಕ್ಷಿ ಯೋಜನೆಯ ನಿರ್ಮಾಣ (II) ರ ತಂತ್ರಾಂಶದ ಮೂಲಕ ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಇರುವ ಅಡಚಣೆಗಳ ಕುರಿತು ಚರ್ಚಿಸಲಾಯಿತು. ಅನೇಕರು ಸಮಸ್ಯೆಗಳನ್ನು ತಿಳಿಸಿದ್ದರಿಂದ
 ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯ ಬಗ್ಗೆ ತಜ್ಞ-ಆರ್ಕಿಟೆಕ್ಟ್-ಇಂಜಿನಿಯರರು
ಸಹಭಾಗಿತ್ವದೊಂದಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.
4.ಪಾಲಿಕೆ ವ್ಯಾಪ್ತಿಯ ವಸತಿ/ಬಹುಮಹಡಿ/ವಾಣಿಜ್ಯ/ಕೈಗಾರಿಕೆ/ಇತರೆ ಕಟ್ಟಡಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಪಾಲಿಕೆಯ ಒಳಚರಂಡಿ ಜಾಲಕ್ಕೆ ಸಂಪರ್ಕಿಸುತ್ತಿರುವುದರಿಂದ ಪಾಲಿಕೆಯ ಒಳಚರಂಡಿ ಜಾಲದ ನಿರ್ವಹಣೆ ಮಾಡಲು ತೊಂದರೆಯಾಗುತ್ತಿರುವುದರಿಂದ ಕಟ್ಟಡಗಳಲ್ಲಿಯೇ ಸೂಕ್ತವಾಗಿ ನಿರ್ವಹಣೆ ಮಾಡಲು ತೀರ್ಮಾನಿಸಲಾಯಿತು.
5: ನಗರದಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಉದ್ಯಾನವನ, ವೃತ್ತ, ಕೆರೆಗಳ ಅಭಿವೃದ್ಧಿ ಪಡಿಸಿ ಸುಂದರಿಕರಣಕ್ಕೆ ಒತ್ತು ನೀಡುವುದು. ನಿರ್ವಹಣೆ ಸಮರ್ಪಕವಾಗಿ ಮಾಡುವ ಬಗ್ಗೆ  ವಿನ್ಯಾಸ, ಅಂದಾಜು ವೆಚ್ಚು, ವಾರ್ಷಿಕ‌‌ ನಿರ್ವಹಣೆ ಬಗ್ಗೆ‌ ಖರ್ಚು , ವೆಚ್ಚ ವಿವರ ನೀಡಿದಲ್ಲಿ ಈ ಬಗ್ಗೆ ಗಮನ ಹರಿಸಲಾಗುವುದು ಬಿಲ್ಡರ್ಸ ಅಸೋಸಿಯೇಷನ್ ತಿಳಿಸಿದರು. ಒಟ್ಟಾರೆ ‌ನಗರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪಾಲಿಕೆಯು ಪಂಚ ನಿರ್ಣಯ ತೆಗೆದುಕೊಂಡಿದೆ.
See also  ಅನ್ನ ದಾಸೋಹದ ಮೂಲಕ ಲೋಕದ ಪಿಡುಗುಗಳನ್ನು ದೂರೀಕರಿಸಲು ಚಾತುರ್ಮಾಸ್ಯ ಕಾರ್ಯಕ್ರಮ ಸಹಕಾರಿ : ಶಾಸಕ ಹರೀಶ್ ಪೂಂಜಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು