News Kannada
Thursday, December 08 2022

ಮಂಗಳೂರು

16 ನೇ ಕನ್ನಡ ವಿಜ್ಞಾನ ಸಮ್ಮೇಳನಕ್ಕೆ ಮಂಗಳೂರು ವಿವಿಯಲ್ಲಿ ಚಾಲನೆ

Photo Credit :

ಮಂಗಳೂರು :ವಿಜ್ಞಾನಕ್ಕೆ ಆಂಗ್ಲ ಬಾಷೆ ಅನಿವಾರ್ಯವಲ್ಲ, ಅದೊಂದು ಮನಸ್ಥಿತಿಯಷ್ಟೇ. ವಿಜ್ಞಾನದ ಹೆಚ್ಚಿನ ಆವಿಷ್ಕಾರಗಳು ಆಂಗ್ಲಬಾಷೆಯಲ್ಲಿವೆ. ಅವೆಲ್ಲವೂ ಮಾತೃಬಾಷೆಯ ಮೂಲಕ ಜನಸಾಮಾನ್ಯರನ್ನು ತಲುಪುವ ಅಗತ್ಯವಿದೆ, ಎಂದು ಡಿಆರ್ಡಿಓ ಡೆಬೆಲ್ ನಿರ್ದೇಶಕ ಡಾ. ಟಿ. ಎಂ. ಕೊಟ್ರೇಶ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಸ್ವದೇಶಿ ವಿಜ್ಞಾನ ಆಂದೋಳನ (ಕರ್ನಾಟಕ) ಆಯೋಜಿಸಿರುವ ಮೂರು ದಿನಗಳ 16 ನೇ ಕನ್ನಡ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಕಳುಹಿಸಿದ ತಮ್ಮ ವೀಡಿಯೋ ಸಂದೇಶದಲ್ಲಿ ಅವರು, ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ ಮಾತೃಭಾಷೆಗೆ ಹೆಚ್ಚಿನ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ವಿಜ್ಞಾನ ಬರಹಗಾರರು ಹೆಚ್ಚಾಗಬೇಕು, ಅದಕ್ಕೂ ಮಿಗಿಲಾಗಿ ಮಾತೃಬಾಷೆಯಲ್ಲಿ ಹೇಳುವಾಗ ಮಾಹಿತಿ ಸತ್ವ ಕಳೆದುಕೊಳ್ಳಬಾರದು, ಎಂಬ ಕಾಳಜಿ ವ್ಯಕ್ತಪಡಿಸಿದರು.

ಉದ್ಘಾಟನಾ ಬಾಷಣ ನೆರವೇರಿಸಿದ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮಾನಂದ ಸ್ವಾಮೀಜಿ, ಭಾರತ ವೈಜ್ಞಾನಿಕವಾಗಿ ಅತ್ಯಂತ ಮುಂದುವರಿದ ದೇಶವಾಗಿತ್ತು ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ನಮ್ಮ ದೇಶದಲ್ಲಿ ಬೆರಗು ಮೂಡಿಸುವ ವೈಜ್ಞಾನಿಕ ರಚನೆಗಳಿವೆ. ಅವುಗಳು ಜನಸಾಮಾನ್ಯರಿಗೆ, ಮಕ್ಕಳಿಗೆ ತಿಳಿಯಬೇಕು. ಅವರೂ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಪೂರ್ವಿಕರನ್ನು ಮರೆಯುವುದು ವಿನಾಶಕ್ಕೆ ದಾರಿ, ಎಂದು ಎಚ್ಚರಿಸಿದರು.

ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಶ್ವಥ್ ನಾರಾಯಣ ತಮ್ಮ ವೀಡಿಯೋ ಸಂದೇಶದಲ್ಲಿ, ವಿಜ್ಞಾನ ನಮ್ಮ ಪರಂಪರೆಯ ಭಾಗ, ಋಷಿಮುನಿಗಳು ಧರ್ಮದ ಜೊತೆ ವಿಜ್ಞಾನವನ್ನೂ ಬೆಳೆಸಿದವರು. ಮಾತೃಬಾಷೆಯಲ್ಲಿ ವಿಜ್ಞಾನ ತಲುಪಿಸುವುದು ಬೆಲೆಕಟ್ಟಲಾಗದ ಕೊಡುಗೆ. ವಿವಿಧ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಈ ಕಾರ್ಯದ ವಿಸ್ತರಣೆಯಾಗಬೇಕು. ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ, ಎಂಬ ಭರವಸೆ ನೀಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಸ್ವದೇಶಿ ವಿಜ್ಞಾನ ಆಂದೋಲನವನ್ನು ಸ್ಥಾಪಿಸಿದ ಕೆ ಐ ವಾಸು ಅವರನ್ನು ನೆನೆದರು. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಪರಸ್ಪರ ಬೆಸೆದುಕೊಂಡಿವೆ. ಜೀವಿಸಲು ನಮಗೆ ಎರಡೂ ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಸಿ.ಓ.ಇ.ಇನ್ ಹೈಪರ್ಸಾನಿಕ್ಸ್ ಮುಖ್ಯಸ್ಥ ಪ್ರೊ. ಜಿ ಜಗದೀಶ್ ಅವರಿಗೆ ʼಭಾರತರತ್ನ ಡಾ. ಸರ್ ಎಂ ವಿಶ್ವೇಶ್ವರಯ್ಯ ವಿಜ್ಞಾನ ಪ್ರಶಸ್ತಿʼ, ಹಿರಿಯ ಸಂಗೀತ ವಿದ್ವಾಂಸ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ ಅವರಿಗೆ ʼಭಾರತರತ್ನ ಡಾ. ಭೀಮ್ಸೇನ್ ಜೋಷಿ ಸಾಂಸ್ಕೃತಿಕ ವಿಜ್ಞಾನ ಪ್ರಶಸ್ತಿʼ ಮತ್ತು ಸಿಐಐಆರ್ಸಿ ನಿರ್ದೇಶಕ ಡಾ. ಕೃಷ್ಣ ವೆಂಕಟೇಶ್ ಅವರಿಗೆ ʼಭಾರತರತ್ನ ಡಾ. ಸಿ ಎನ್ ಆರ್ ರಾವ್ ವಿಜ್ಞಾನ ಪ್ರಶಸ್ತಿʼ ನೀಡಿ ಗೌರವಿಸಲಾಯಿತು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರಸ್ವತಿ ಎಸ್. ರಾವ್ ಅವರು ಬರೆದ ʼನಮ್ಮ ಹೆಮ್ಮೆಯ ಭಾರತೀಯ ವಿಜ್ಞಾನಿಗಳುʼ ಮತ್ತು ʼವಿಜ್ಞಾನ ವಿಸ್ಮಯʼ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

See also  ಪೊಲೀಸ್ ಅಧಿಕಾರಿ - ಸಿಬ್ಬಂದಿಯವರಿಗೆ ತುಳು ಭಾಷಾ ಕಲಿಕಾ ಕಾರ್ಯಾಗಾರ

ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ) ರಾಜ್ಯಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್ ಅತಿಥಿಗಳನ್ನು ಸ್ವಾಗತಿಸಿದರು. ಆಂದೋಲನದ ಕಾರ್ಯಾಧ್ಯಕ್ಷ ಡಾ. ಸಿ ರೇಣುಕಾಪ್ರಸಾದ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಚ್, ಕರಾವಳಿ ಜಿಲ್ಲಾ ಘಟಕದ ಮುಖ್ಯಸ್ಥ ಡಾ. ಎಸ್ ಎಂ ಶಿವಪ್ರಕಾಶ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿಕೆ, ವಿಜ್ಞಾನ ವಿಭಾಗದ ಡೀನ್ ಡಾ. ಮಂಜುನಾಥ ಪಟ್ಟಾಭಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಡಾ. ಸರ್ ಎಂ ವಿಶ್ವೇಶ್ವರಯ್ಯ ಅವರ 161 ನೇ ಜನ್ಮದಿನೋತ್ಸವದ ಪ್ರಯುಕ್ತ ಅತಿಥಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕರಾವಳಿ ಚಿತ್ರಕಲಾ ಚಾವಡಿ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನಕ್ಕೆ ಕುಲಪತಿಗಳು ಚಾಲನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು