NewsKarnataka
Friday, November 26 2021

ಮಂಗಳೂರು

ಹಿರಿಯ ಹೋಟೆಲ್ ಉದ್ಯಮಿ ಸದಾಶಿವ ಶೆಟ್ಟಿ ನಿಧನ

ಬಂಟ್ವಾಳ:  ಹಿರಿಯ ಹೋಟೆಲ್ ಉದ್ಯಮಿ, ಪ್ರಗತಿಪರ ಕೃಷಿಕ, ಸೆರ್ಕಳ ಮಲರಾಯಿ ಬಂಟ ದೈವಸ್ಥಾನದ ಅಧ್ಯಕ್ಷರಾದ ಸದಾಶಿವ ಶೆಟ್ಟಿ(70) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಸುಮಾರು ಐವತ್ತು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಸೆರ್ಕಳ ಸದಾಶಿವ ಶೆಟ್ಟರು ಕಳೆದ ಮೂವತ್ತು ವರ್ಷಗಳಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪದ ರಾವ್ & ರಾವ್ ಸರ್ಕಲ್ ರಸ್ತೆಯ ಕ್ಯಾಂಪ್ಕೋ ಪಕ್ಕದ ಕೀರ್ತಿ ಲಾಡ್ಜಿಂಗಲ್ಲಿ ತಾಜಾ ಮೀನಿನ ಊಟದ ಹೋಟೇಲು ನಡೆಸುವ ಮೂಲಕ ಚಿರಪರಿಚಿತರಾಗಿದ್ದರು. ಇದೇ ಕಾರಣಕ್ಕಾಗಿ ಹೋಟೇಲ್ ಸದಾಶಿವಣ್ಣ ಎಂದೇ ಸಾರ್ವಜನಿಕವಾಗಿ ಗುರುತಿಸಿದ್ದರು. ಕೊಡುಗೈದಾನಿಯಾಗಿದ್ದ ಶೆಟ್ಟರು ಕೊಳ್ನಾಡು ಗ್ರಾಮದ ಸೆರ್ಕಳದ ಧೂಮಾವತಿ ಬಂಟ ದೈವಸ್ಥಾನದ ಅಧ್ಯಕ್ಷರಾಗಿ ಜೀರ್ಣೋದ್ಧಾರ ಕಾರ್ಯ ನೆರವೇರಿಸುವ ಮೂಲಕ ಧಾರ್ಮಿಕ ಮುಂದಾಳುವಾಗಿ ಗುರುತಿಸಿದ್ದರು. ಸೆರ್ಕಳ ಶ್ರೀ ಮಾರಿಯಮ್ಮ ಯುವಕ ಸಂಘದ ಪ್ರತಿಯೊಂದೂ ಸಮಾಜಸೇವೆಯ ಬೆನ್ನೆಲುಬಾಗಿದ್ದ ಶೆಟ್ಟರು,  ಪ್ರಗತಿಪರ ಕೃಷಿಕರೂ,  ಸಾಲೆತ್ತೂರು ವಲಯ ಬಂಟರ ಸಂಘದ ಮಹಾ ಪೋಷಕರು ಹಾಗೂ ಮಾರ್ಗ ದರ್ಶಕರಾಗಿದ್ದರು. ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸದಾಶಿವ ಶೆಟ್ಟರು ಅಲ್ಪ ಕಾಲದ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು(ಬುಧವಾರ) ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಶೆಟ್ಟರು ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!