News Kannada
Monday, December 05 2022

ಮಂಗಳೂರು

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಮಂಗಳೂರಿನ ತಂಡ.

Photo Credit :

 ಮಂಗಳೂರು :  ಸೆಪ್ಟೆಂಬರ್ 27, 2021ರಂದು ಜಗತ್ತಿನ “Highest Battle Field” ಎಂದೇ ಖ್ಯಾತಿಯಾಗಿರುವ ಲಢಾಕ್ ಪ್ರಾಂತ್ಯದ ಸಿಯಾಚಿನ್ ಮಿಲಿಟರಿ ಬೇಸ್ ಪ್ರವಾಸಿಗರ ವೀಕ್ಷಣೆಗೆ ಉದ್ಘಾಟನೆಗೊಂಡಿದ್ದು, ಉದ್ಘಾಟನೆ ಸಂಧರ್ಭದಲ್ಲಿ ಮಂಗಳೂರಿನ ಮತ್ತು ಕರ್ನಾಟಕದ ಏಕೈಕ ಪ್ರವಾಸಿಗರ ತಂಡವಾಗಿ “ಯೂಥ್ ಆಫ್ ಜಿ ಎಸ್ ಬಿ” ತಂಡ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಉದ್ಘಾಟನೆ ಮಾಡಿದ ಲಢಾಕ್ ಸಂಸದರಾಗಿರುವ ಜಮ್ಯಾಂಗ್ ತ್ಸೆರಿಂಗ್ ಅವರು ಭಾರತದ ಕೊನೆಯ ಹಳ್ಳಿಯಾಗಿರುವ ವಾರ್ಷಿ ಯಲ್ಲಿ ಮಾತನಾಡುತ್ತಾ ಮೋದಿಜೀ ನೇತೃತ್ವದ ಕೇಂದ್ರ ಸರಕಾರ ಇಂದು ಅಭೂತಪೂರ್ವ ನಿರ್ಧಾರ ತೆಗೆದುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ, ಲಡಾಕ್ ಪ್ರದೇಶದ ಆರ್ಥಿಕವಾಗಿ ಅಭಿವೃದ್ಧಿ ಜೊತೆಗೆ ತನ್ನ ಜೀವವನ್ನೂ ಲೆಕ್ಕಿಸದೇ ಜಗತ್ತಿನ ಅತ್ಯಂತ ದುರ್ಗಮ ಯುದ್ಧ ಪ್ರದೇಶವಾಗಿರುವ ಸಿಯಾಚಿನ್ ಮಿಲಿಟರಿ ಪ್ರದೇಶಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಂಡು ಭಾರತೀಯ ಸೈನಿಕರಿಗೆ ಮತ್ತಷ್ಟು ಮನೋಸ್ಥೈರ್ಯ ತುಂಬಿಸುವ ಕಾರ್ಯ ಮಾಡಿದೆ.

ಸ್ವಾತಂತ್ರ್ಯ ಬಳಿಕ ಹಲವು ಸರಕಾರ ಆಢಳಿತ ನಡೆಸಿದ್ದು ಇಂತಹ ನಿರ್ಧಾರ ಯಾರೂ ತೆಗೆದುಕೊಂಡಿಲ್ಲ. ಉದ್ಘಾಟನೆ ಸಮಯದಲ್ಲಿ ಆಗಮಿಸಿ ಐತಿಹಾಸಿಕ ಕ್ಷಣಕ್ಕೆ ಭಾಗಿಯಾದ ಮಂಗಳೂರಿನ ತಂಡ ಸಮೇತ ನಾನಾ ಭಾಗಗಳಿಂದ ಆಗಮಿಸಿದ ಪ್ರವಾಸಿಗರಿಗೆ ಹೃದಯ ಪೂರ್ವಕ ಧನ್ಯವಾದ ಸಮರ್ಪಿಸಿದರು. ಯೂಥ್ ಆಫ್ ಜಿ ಎಸ್ ಬಿ ಮುಖ್ಯಸ್ಥರಾಗಿರುವ ಮಂಗಲ್ಪಾಡಿ ನರೇಶ ಶೆಣೈ ಹಾಗೂ ತಂಡದ ಇತರ ಸದಸ್ಯರು ಉಪಸ್ಥಿತರಿದ್ದರು.

See also  ಭಜರಂಗದಳ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಸಿರೋಡಿನಲ್ಲಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು