News Kannada
Thursday, December 08 2022

ಮಂಗಳೂರು

ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ: ಬಿಜೆಪಿ ರಾಜ್ಯಾಧ್ಯಕ್ಷ

Photo Credit :

ಮಂಗಳೂರು: ಹೆಚ್ ಡಿ ಕುಮಾರಸ್ವಾಮಿ ಕುರುಡು ಕಣ್ಣಿನಿಂದ ಆರ್​ಎಸ್​ಎಸ್​ ನೋಡಿದ್ದಾರೆ ಅಂತ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸಂಘದ ಕಚೇರಿಗೆ ಬಂದು ನೋಡಲಿ. ಆ ನಂತರ ಆರ್​ಎಸ್​ಎಸ್​ ಸಂಘಟನೆಯ ಬಗ್ಗೆ ಮಾತನಾಡಿ. ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬೇಡಿ. ಅಧಿಕಾರ ಇಲ್ಲದಾಗ ಆ ವ್ಯಕ್ತಿಗಳು ಸ್ಥಿಮಿತ ಕಳೆದುಕೊಳ್ಳುತ್ತಾರೆ. ಅಧಿಕಾರ ಕಳೆದುಕೊಂಡು ಅವರಿಗೆ ಹುಚ್ಚು ಹಿಡಿದಿದೆ ಅಂತ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಕಟೀಲು ವಾಗ್ದಾಳಿ ನಡೆಸಿದ್ದಾರೆ.

ಸಂಘ ಏನು ಅನ್ನೊದನ್ನು ಹೊರಗಿನಿಂದ ಅಳತೆ ಮಾಡಿದರೆ ಮೂರ್ಖರಾಗುತ್ತಾರೆ. ಕುರುಡರು ಆನೆ ಚಿತ್ರಣ ಕೊಟ್ಟಂತೆ. ಪ್ರಣಬ್ ಮುಖರ್ಜಿಯವರೆ ಸಂಘದ ಶಾಖೆಗೆ ಬಂದು ಮೆಚ್ಚಿದ್ದಾರೆ. ದೇಶದ ಎಲ್ಲಾ ವ್ಯವಸ್ಥೆಯಲ್ಲಿ ಅವರು ರಾಜಕೀಯವನ್ನೇ ಮಾಡುತ್ತಾರೆ. ಮುಂದಿನ ಚುನಾವಣೆ ದೃಷ್ಟಿಯಿಂದ, ಅಲ್ಪಸಂಖ್ಯಾತರ ಮತಗಳ ಆಸೆಯಿಂದ ಹೀಗೆ ಮಾಡಿದ್ದಾರೆ. ಸಂಘದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಯುವಕರು ಇದ್ದಾರೆ. ಇಲ್ಲಿನ ಸಂಸ್ಕಾರವನ್ನು ಪಡೆದು ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂಬ ಶ್ರೇಷ್ಠ ಸ್ಥಾನದಲ್ಲಿರುವ ನೀವು ಚಿಲ್ಲರೆ ರಾಜಕಾರಣ ಮಾಡಿ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳಬೇಡಿ ಅಂತ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಆರ್ ಎಸ್ ಎಸ್  ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತದೆ. ವ್ಯಕ್ತಿ ನಿರ್ಮಾಣ ಮಾಡಿ ದೇಶದ ಪರ ಕೆಲಸ ಮಾಡಲು ಉತ್ತೇಜಿಸುತ್ತದೆ. ಮಹಾತ್ಮಾ ಗಾಂಧಿ ಆರ್ ಎಸ್ ಎಸ್  ಶಿಬಿರಕ್ಕೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಿ ಆರ್ ಅಂಬೇಡ್ಕರ್ ಕೂಡಾ ಆರ್​ಎಸ್ಎಸ್​ ಶಿಬಿರಕ್ಕೆ ಬಂದಿದ್ದರು. ನೆಹರೂ ಸಂಘದ ಸ್ವಯಂಸೇವಕರಿಗೆ ಗಣರಾಜ್ಯೋತ್ಸವದ ಪಥಸಂಚಲನಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಕಾಂಗ್ರೆಸ್​ನ ಉಗ್ರಪ್ಪ ಸಂಘ ಶಿಕ್ಷಣವನ್ನು ಪಡೆದಿದ್ದಾರೆ. ಜೆಡಿಎಸ್ನ ಸಿಂಧ್ಯಾರವರೂ ಸಂಘದ ಶಿಕ್ಷಣವನ್ನು ಪಡೆದಿದ್ದಾರೆ ಅಂತ ನಳೀನ್ ಕುಮಾರ್ ಹೇಳಿದರು.

See also  ನಾವೆಂದು ಭೂತಕಾಲದಲ್ಲಿ ಬಂಧಿಯಾಗದೆ, ಭವಿಷ್ಯದ ಪ್ರವರ್ತಕರಾಗುವರೆಡೆಗೆ ಶ್ರಮಿಸಬೇಕು : ಅರವಿಂದ್ ಕೆಪಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು