News Kannada
Monday, October 03 2022

ಮಂಗಳೂರು

ಅಪೆಕ್ಸ್ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯಗಳ ನಡುವೆ ತಾಂತ್ರಿಕ ಒಪ್ಪಂದ - 1 min read

Photo Credit :

ಮೂಡುಬಿದಿರೆ: ಅಕಾಡೆಮಿ ಇನ್ ಪರ್ಸ್ಯೂಟ್ ಆಫ್ ಇಂಜಿನಿಯರಿಂಗ್ಎಕ್ಸಲೆನ್ಸ್ (ಅಪೆಕ್ಸ್) ಮತ್ತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದಿರೆ ನಡುವೆ ತಾಂತ್ರಿಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಯಿತು. ಉದಯೋನ್ಮುಖ ಇಂಜಿನಿಯರುಗಳಿಗೆ ಗೇಟ್ ಪರೀಕ್ಷೆಯ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು IISc  IIT ಯಂತಹ ಪ್ರತಿಷ್ಠಿತ ಮಹಾವಿದ್ಯಾಲಯಗಳಿಂದ ಎಂ.ಟೆಕ್ ಹಾಗೂ ಪಿ.ಎಚ್.ಡಿ ಪದವಿ ಪಡೆದ ನುರಿತ ಪರಿಣಿತರನ್ನು ಒಳಗೊಂಡ ಅಪೆಕ್ಸ್ ಸಂಸ್ಥೆಯ ಮುಖೇನ ಗೇಟ್ ತರಬೇತಿಯನ್ನು ಆರಂಭಿಸಿದೆ.

ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಈ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರವು ಇದೇ ನವಂಬರ್ 28 ರಿಂದ ತರಗತಿಗಳನ್ನು ಆರಂಭಿಸುತ್ತಿದ್ದು ತರಬೇತಿಗಾಗಿ ದೂರದ ಹೈದರಾಬಾದ್ ಅಥವಾ ದೆಹಲಿಯವರೆಗೆ ತೆರಳುವ ಅನಿವಾರ್ಯತೆಯನ್ನು ನೀಗಿಸಲಿದೆ.

ದೇಶದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಹಾಗೂ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಗೇಟ್ ಪರೀಕ್ಷಾಕಾಂಕ್ಷಿಗಳು ಈ ತರಬೇತಿಯ ಸೌಲಭ್ಯನ್ನು ಪಡೆದುಕೊಳ್ಳಬಹುದಾಗಿದೆ. ದೂರದ ಊರಿನ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಕಾಲೇಜಿನ ಆವರಣದಲ್ಲಿಯೇ ವಿಷಯ ತಜ್ಞರುಗಳು ಹಾಗೂ ವಸತಿ ಸೌಕರ್ಯವು ಲಭ್ಯವಿರುವುದು ಆಳ್ವಾಸ್ ಗೇಟ್ ತರಬೇತಿ ಶಿಕ್ಷಣ ಕೇಂದ್ರದ ವೈಶಿಷ್ಟ್ಯವಾಗಿದೆ. ಪ್ರತಿಷ್ಠಿತ ಸಂಸ್ಥೆಗಳಾದ IISc  IIT ಗಳಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಪದವಿಗಳಿಗೆ ಅಗತ್ಯ. MRPL, IOCL, DRDO, ONGC ,  KIOCL ಗಳಂತಹ ಸರಕಾರಿ ಅಥವಾ ಸಾರ್ವಜನಿಕ ಉದ್ಯಮ ವಲಯಗಳಲ್ಲಿ ಇಂಜಿನಿಯರಿAಗ್ ಉದ್ಯೋಗಾವಕಾಶಗಳನ್ನು ಪಡೆಯಲು ಕಡ್ಡಾಯ. CSIR, ISRO, DRDO, IISc , IIT ಯಂತಹ ಸಂಸ್ಥೆಗಳಲ್ಲಿ ಫೆಲೋಶಿಪ್ ಪಡೆಯಲು ಸಹಕಾರಿ.

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ನೆರವಾಗುತ್ತದೆ ಅಲ್ಲದೆ ಸರಕಾರಿ ಉದ್ಯೋಗಗನ್ನು ಪಡೆಯಲು ಗೇಟ್ ಉತ್ತೀರ್ಣತೆಯು ಸಹಕಾರಿಯಾಗಲಿದೆ. ಇದರೊಂದಿಗೆ, ಕ್ಯಾಂಪಸ್ ನೇಮಕಾತಿಗಳಿಗೂ ಗೇಟ್ ಪರೀಕ್ಷೆಯ ತಯಾರಿ ಬಹಳಷ್ಟು ಪ್ರಯೋಜನವಾಗಲಿದೆ.

ಒಡಂಬಡಿಕಾ ಕಾರ್ಯಕ್ರಮದಲ್ಲಿ ಅಪೆಕ್ಸ್ ಸಂಸ್ಥೆಯ ಸಂಸ್ಥಾಪಕರಾದ ಡಾ| ಅನಂತ ಪೈ ಎಸ್., ಪ್ರಾಂಶುಪಾಲರು ಡಾ| ಪೀಟರ್ ಫೆರ್ನಾಂಡಿಸ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ| ಅಜಿತ್ ಹೆಬ್ಬಾರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ| ಸತ್ಯನಾರಾಯಣ ಮತ್ತು ಸಂಯೋಜಕರಾದ ಸಿವಿಲ್ ವಿಭಾಗದ ಪ್ರೊ| ಶಂಕರಗಿರಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಯನ್ನು  https://apexacademics.co.in ಅಂತರ್ಜಾಲದಲ್ಲಿ ಪಡೆಯಬಹುದಾಗಿದೆ.

See also  ವಿಧಾನ ಪರಿಷತ್ ಚುನಾವಣೆ: ಕಣದಲ್ಲಿ ಮೂವರು ಅಭ್ಯರ್ಥಿಗಳು - 4 ಉಮೇದುವಾರಿಕೆ ವಾಪಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು