NewsKarnataka
Tuesday, January 18 2022

ಮಂಗಳೂರು

ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯಿಂದ ಉರ್ವ-ಮಾರಿಗುಡಿ ರಸ್ತೆಯಲ್ಲಿ ‘ಅದಿರಾ’ ವಸತಿ ಸಮುಚ್ಛಯಕ್ಕೆ ಚಾಲನೆ

ಮಂಗಳೂರು:ತಮ್ಮ ದ್ವಿತೀಯ ಗಗನಚುಂಬಿ ಯೋಜನೆಯಾದ ‘ಅಲ್ಟುರಾ’ ಪ್ರಾರಂಭದ ಬೆನ್ನಲ್ಲೇ, ನಗರದ ಪ್ರತಿಷ್ಠಿತ ಪ್ರಾಪರ್ಟಿ ಡೆವಲಪರ್ ಸಂಸ್ಥೆ ಲ್ಯಾಂಡ್ ಟ್ರೇಡ್ಸ್ ಈಗ ಮಂಗಳೂರು ಉರ್ವಾ-ಮಾರಿಗುಡಿ ರಸ್ತೆಯಲ್ಲಿ ಪ್ರೀಮಿಯಂ ವಸತಿ ಅಪಾರ್ಟ್ಮೆಂಟ್ ಸಂಕೀರ್ಣವಾದ ‘ಅದಿರಾ’ ಗೆ ಚಾಲನೆ ನೀಡಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ. ಶ್ರೀನಾಥ್ ಹೆಬ್ಬಾರ್ ಅವರ ಉಪಸ್ಥಿತಿಯಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಭೂಮಿ ಪೂಜೆಯೊಂದಿಗೆ ಈ ಯೋಜನೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಯಿತು. ಸ್ಥಳೀಯ ವಾರ್ಡಿನ ಕಾರ್ಪೊರೇಟರ್ ಶ್ರೀ ಗಣೇಶ್ ಕುಲಾಲ್ ಶಿಲಾನ್ಯಾಸ ನೆರವೇರಿಸಿದರು. ಭೂಮಿಪೂಜೆಯನ್ನು ಶ್ರೀ ಸುದರ್ಶಣ ಮಯ್ಯ ನೆರವೇರಿಸಿದರು.
ಶ್ರೀ ಮೋಹನ್ ಅಮೀನ್, ಶ್ರೀ ಯು. ಚಂದ್ರಹಾಸ್, ಶ್ರೀ ಸುಮನ್ ಕುಮಾರ್, ಶ್ರೀ ಅನಿಲ್ ಹೆಗ್ಡೆ, ವಾಸ್ತುಶಿಲ್ಪಿ ಗೋಕುಲ್ ರಾಜ್, ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಸಿಇಒ ಶ್ರೀ ರಮೀತ್ ಕುಮಾರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಈ ರೇರಾ ಅನುಮೋದಿತ ಯೋಜನೆಗೆ ಮುಂಗಡ ಬುಕ್ಕಿಂಗ್ ಲಭ್ಯ. ಆಸಕ್ತ ಗ್ರಾಹಕರು ಸೈಟ್ ವಿಸಿಟ್ ಮತ್ತು ಹೆಚ್ಚಿನ ಮಾಹಿತಿಗಾಗಿ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು.

ಆದಿರಾ – ಐಷಾರಾಮಿ ಜೀವನದ ಪ್ರತೀಕ
ಲ್ಯಾಂಡ್ ಟ್ರೇಡ್ಸ್ರವರ ಅದಿರಾ ವಸತಿ ಸಮುಚ್ಛಯವು ಶ್ರೀ ಮಾರಿಗುಡಿ ದೇವಸ್ಥಾನದ ಸಮೀಪದ ಶಾಂತಿಯುತ ಪ್ರದೇಶದಲ್ಲಿ ನೆಲೆಗೊಂಡಿದೆ. ನೆಲ+ನಾಲ್ಕು ಅಂತಸ್ತಿನ ಈ ವಸತಿ ಕಟ್ಟಡದಲ್ಲಿ 1695, 1720 ಮತ್ತು 1845 ಚದರ ಅಡಿ ವಿಸ್ತೀರ್ಣದ ಹದಿನಾರು ಮೂರು ಬೆಡ್‌ರೂಮ್ ಅಪಾರ್ಟ್ಮೆಂಟ್‌ಗಳಿರಲಿವೆ, ನೆಲ ಅಂತಸ್ತಿನ ರಸ್ತೆ ಪಕ್ಕದ ಮುಂಭಾಗವು ಅಂಗಡಿ / ವಾಣಿಜ್ಯ ಸಂಸ್ಥೆಗಳಿಗೆ ಮೀಸಲಿಡಲಾಗಿದೆ. ನಿವಾಸಿಗಳ ಗರಿಷ್ಠ ಸುರಕ್ಷತೆಗಾಗಿ ಕಟ್ಟಡದ ವಸತಿ ಮತ್ತು ವಾಣಿಜ್ಯ ವಿಭಾಗಗಳನ್ನು ಸ್ಪಷ್ಟವಾಗಿ ವಿಂಗಡಿಸಲಾಗಿವೆ.
ಲ್ಯಾಂಡ್ ಟ್ರೇಡ್ಸ್ ಪ್ರಸಿದ್ಧಿಗನುಗುಣವಾಗಿ ಎಲ್ಲಾ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಅದಿರಾ ಹೊಂದಿದೆ. ಪ್ರತಿ ವಿಶಾಲವಾದ ಅಪಾರ್ಟ್ಮೆಂಟ್ ಅನ್ನು ನಾಜೂಕಾಗಿ ವಿನ್ಯಾಸಗೊಳಿಸಲಾಗಿದೆ. ಜಾಗದ ಅತ್ಯುತ್ತಮ ಬಳಕೆ, ನೈಸರ್ಗಿಕ ವಾತಾಯನ ಮತ್ತು ಸೂರ್ಯನ ಬೆಳಕಿನ ಹರಿವಿನೊಂದಿಗೆ ಗರಿಷ್ಠ ಸೌಕರ್ಯಕ್ಕಾಗಿ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲಾ ಅವಶ್ಯಕತೆಗಳಿಗೆ ಉತ್ತಮ ಶ್ರೇಣಿಯ ಬ್ರಾಂಡ್ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಗಟ್ಟಿಮರದ ಮುಖ್ಯ ಪ್ರವೇಶ ದ್ವಾರಗಳನ್ನು ಸ್ಮಾರ್ಟ್ ಡೋರ್ ಲಾಕ್‌ಗಳೊಂದಿಗೆ ಸುರಕ್ಷಿತಗೊಳಿಸಲಾಗಿದೆ. ಲಿವಿಂಗ್ ರೂಮ್, ಬೆಡ್‌ರೂಮ್, ಸ್ನಾನಗೃಹಗಳು, ಅಡುಗೆಕೋಣೆ ಮತ್ತು ಬಾಲ್ಕನಿಗಳು ನಿಮ್ಮ ಜೀವನೋಲ್ಲಾಸವನ್ನು ಹೆಚ್ಚಿಸುವಂತೆ ಪರಿಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಪರಿಣತ ವಾಸ್ತು ಪಂಡಿತರು ನೀಡಿದ ಸಲಹೆಯಂತೆ ಕಟ್ಟಡ ವಿನ್ಯಾಸದಲ್ಲಿ ಎಲ್ಲಾ ರೀತಿಯಲ್ಲಿ 100% ವಾಸ್ತು ಅನುಸರಣೆಯಾಗಿದೆ. “ಜೀವನದ ಎಲ್ಲಾ ಅಗತ್ಯತೆಗಳಿಗೆ, ಅನುಕೂಲತೆಗಳಿಗೆ ಹತ್ತಿರವಿದ್ದು ಗರಿಷ್ಠ ಭದ್ರತೆ, ಸುರಕ್ಷತೆಯೊಂದಿಗೆ ಶಾಂತಿದಾಯಕ ಜೀವನವನ್ನು ಬಯಸುವ ಕುಟುಂಬಗಳ ಆಶಯವನ್ನು ಪೂರೈಸಲು ನಾವು ನಿರ್ದಿಷ್ಟವಾಗಿ ಅದಿರಾ ವಸತಿ ಅಪಾರ್ಟ್ಮೆಂಟ್‌ಗಳನ್ನು ರಚಿಸಿದ್ದೇವೆ,” ಎಂದು ಹೇಳುತ್ತಾರೆ ಲ್ಯಾಂಡ್ ಟ್ರೇಡ್ಸ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ. ಶ್ರೀನಾಥ್ ಹೆಬ್ಬಾರ್.
ವಿಶಾಲವಾದ ಸುಭದ್ರ ಪಾರ್ಕಿಂಗ್ ವ್ಯವಸ್ಥೆ (ಇ-ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳೊAದಿಗೆ), ಸಂದರ್ಶಕರ ಆವರಣ, ಮಕ್ಕಳ ಆಟದ ಅಂಗಣ ಮತ್ತು ರೂಫ್‌ಟಾಪ್‌ನಲ್ಲಿ ಮುಚ್ಚಿದ ಸಮುದಾಯ ಭವನದಂತಹ ಸೌಲಭ್ಯಗಳನ್ನು ನೀಡುವ ಮೂಲಕ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವೇಗದ ಎಲಿವೇಟರ್, ಅತ್ಯಾಧುನಿಕ ಸುರಕ್ಷಾ ವ್ಯವಸ್ಥೆ, ವಿದ್ಯುತ್ ಜನರೇಟರ್, ನಿರಂತರ ನೀರು ಸರಬರಾಜು, ಪರಿಸರ ಸ್ನೇಹಿ ಮಳೆ ನೀರು ಕೊಯ್ಲು, ಕೊಳಚೆನೀರು ಸಂಸ್ಕರಣಾ ಘಟಕ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಹಲವಾರು ಇತರ ಸೌಲಭ್ಯಗಳನ್ನು ಹೊಂದಿರುವ ಈ ಸಮುಚ್ಛಯವು ಎಲ್ಲಾ ರೀತಿಯಲ್ಲೂ ಪರಿಪೂರ್ಣ ಜೀವನಶೈಲಿಯನ್ನು ನೀಡಲಿದೆ.

ಅನುಕೂಲಕರ ನೆರೆಹೊರೆ
ಉರ್ವಾ-ಮಾರಿಗುಡಿ ದೇವಸ್ಥಾನದ ರಸ್ತೆಯಲ್ಲಿ ನೆಲೆಗೊಂಡಿರುವ ಅದಿರಾದಲ್ಲಿ ವಾಸಿಸುವುದರಿಂದ ನಗರದ ಹೃದಯಭಾಗದಲ್ಲಿದ್ದು ಶಾಂತಿಯುತ ವಾತಾವರಣದಲ್ಲಿ ವಾಸಿಸುವ ಅನುಭವವನ್ನು ನೀಡುತ್ತದೆ. ಕಟ್ಟಡವು ಮಾರಿಗುಡಿ ದೇವಸ್ಥಾನದ ಪಕ್ಕದಲ್ಲಿದ್ದು, ಉರ್ವಾ ಮಾರುಕಟ್ಟೆ ಮತ್ತು ಉರ್ವಾ ಮೈದಾನಗಳಿಗೆ ನಡೆದು ಹೋಗಬಹುದಷ್ಟು ಹತ್ತಿರದಲಿದೆ. ಐತಿಹಾಸಿಕ ಸ್ಮಾರಕವಾದ ಸುಲ್ತಾನ್ ಬತ್ತೇರಿ, ಪ್ರಶಾಂತವಾದ ಗುರುಪುರ ನದಿ,  ತಣ್ಣೀರುಬಾವಿ ಕರಾವಳಿಗೆ ಸಂಪರ್ಕಿಸುವ ದೋಣಿ ವ್ಯವಸ್ಥೆ ಹತ್ತಿರದಲ್ಲಿವೆ. ಸುಲ್ತಾನ್ ಬತ್ತೇರಿ ಬೋಟ್ ಕ್ಲಬ್, ಗಾಂಧಿನಗರ ಪಾರ್ಕ್, ಲೇಡಿಹಿಲ್ ಜಂಕ್ಷನ್, ಉರ್ವಾ ಚರ್ಚ್ ಮತ್ತು ಮದುವೆ ಹಾಲ್, ಮಂಗಳ ಕ್ರೀಡಾಂಗಣ, ಈಜುಕೊಳ, ಲೇಡಿಹಿಲ್ ವಿಕ್ಟೋರಿಯಾ ಕಾನ್ವೆಂಟ್ ಶಾಲೆ, ಉರ್ವ ಸಂತ ಅಲೋಶಿಯಸ್ ಶಾಲೆ ಮತ್ತು ಉರ್ವಾ ಕೆನರಾ ಪ್ರೌಢಶಾಲೆ ಸಹ ವ್ಯಾಪ್ತಿಯಲ್ಲಿವೆ. ಹತ್ತು ನಿಮಿಷಗಳಲ್ಲಿ ತಲುಪಬಹುದಾದ ಇತರ ಪ್ರಮುಖ ಸ್ಥಳಗಳೆಂದರೆ  ಸ್ಯಾಬೀನ್ ಕಾಂಪ್ಲೆಕ್ಸ್, ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್, ಬಿಗ್ ಬಜಾರ್ / ಭಾರತ್ ಮಾಲ್ ಮತ್ತು ಮಲ್ಟಿಪ್ಲೆಕ್ಸ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಜೆ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮತ್ತು ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ #66.

ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಬಗ್ಗೆ:
ಪ್ರಥಮ ತಲೆಮಾರಿನ ಉದ್ಯಮಿಯಾಗಿ ಕೆ.ಶ್ರೀನಾಥ್ ಹೆಬ್ಬಾರ್ ಅವರು 1992 ರಲ್ಲಿ ಲ್ಯಾಂಡ್ ಟ್ರೇಡ್ಸ್ ಸ್ಥಾಪಿಸಿದರು. ಆರಂಭದಲ್ಲಿ ವಸತಿ ಬಡಾವಣೆ ನಿರ್ಮಾಣ, 2008 ರ ಬಳಿಕ ವಸತಿ ಸಮುಚ್ಚಯ ನಿರ್ಮಾಣ, ವಾಣಿಜ್ಯ ಸಂಕೀರ್ಣಗಳು ಹೀಗೆ ವಿಶ್ವಾಸಾರ್ಹ ಪರಂಪರೆಯ ಮೂಲಕ ಸಂಸ್ಥೆಯು ಗ್ರಾಹಕರ ಮನ ಗೆದ್ದಿತು. ಸಾಯಿ ಗ್ರ್ಯಾಂಡಿಯರ್, ಮೌರಿಷ್ಕ ಪ್ಯಾಲೇಸ್, ಅಟ್ಲಾಂಟೀಸ್, ಸಾಲಿಟೇರ್, ಹ್ಯಾಬಿಟಟ್ ವನ್54 ಮುಂತಾದ ಲ್ಯಾಂಡ್ ಮಾರ್ಕ್ ಕಟ್ಟಡಗಳನ್ನು ನಗರಕ್ಕೆ ಅರ್ಪಿಸಿದೆ.
ಸಂಸ್ಥೆಯು ಇದುವರೆಗೆ 38 ವಸತಿ ಯೋಜನೆಗಳನ್ನು, 3,000+ ಮನೆಗಳನ್ನು ಮತ್ತು 41.32 ಲಕ್ಷ ಚದರ ಅಡಿ ವಿಸ್ತೀರ್ಣದ ವಸತಿ ಸೌಲಭ್ಯವನ್ನು ನಿರ್ಮಿಸಿದೆ. ಐಎಸ್‌ಓ 9000: 2015 ಸಂಸ್ಥೆಯಾದ ಇದು ಕ್ರಿಸಿಲ್ ನಿಂದ ‘ಡಿಎ2′ ರಿಯಲ್ ಎಸ್ಟೇಟ್ ಡೆವಲಪರ್ ರೇಟಿಂಗ್ ಅನ್ನು ಪಡೆದುಕೊಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Subscribe to our Brand New YouTube Channel

Subscribe Newsletter

Get latest news karnataka updates on your email.