ಮಂಗಳೂರು : ಆರೋಗ್ಯ ಇಲಾಖೆ ಅಧಿಕಾರಿಯ ಕಾಮಪುರಾಣ ಬಯಲಾಗಿದೆ ಕಚೇರಿಯ ಸಿಬ್ಬಂದಿ ಜತೆ ವೆದ್ಯಾಧಿಕಾರಿ ತುಂಬ ಸಲುಗೆಯಿಂದ ಫೋಟೋ ಹಾಗೂ ವಿಡಿಯೋ ಬಹಿರಂಗವಾಗಿದ್ದು ಕಾಮುಕ ವೈದ್ಯನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿ ಬಂದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ
ಕಚೇರಿಯ 9ಮಹಿಳಾ ಸಿಬ್ಬಂದಿಗಳ ಜೊತೆ ವೈದ್ಯಾಧಿಕಾರಿ ಚೆಲ್ಲಾಟವಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ ಅದೂ ಹಾಡುಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಸಿಬ್ಬಂದಿಗಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾರಂತೆ.
ಆಯುಷ್ ನ ನೋಡಲ್ ಆಫಿಸರ್ ಹಾಗೂ ಕುಷ್ಟ ರೋಗ ವಿಭಾಗದ ಆರೋಗ್ಯಾಧಿಕಾರಿ ಡಾಕ್ಟರ್ ರತ್ನಾಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಇರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ ಮಹಿಳಾ ಸಿಬ್ಬಂದಿಗಳ ಜತೆ ನಿತ್ಯ ಚೆಲ್ಲಾಟ ನಡೆಯುತ್ತಿತ್ತು ಒಂದುವೇಳೆ ಸಹಕಾರ ನೀಡದಿದ್ದರೆ ಸಿಬ್ಬಂದಿಗೆ ಟಾರ್ಚರ್ ಮಾಡುತ್ತಾರೆಂಬ ಆರೋಪವಿದೆ ಅಲ್ಲದೆ ಮಹಿಳಾ ಸಿಬ್ಬಂದಿಯನ್ನು ಟ್ರಿಪ್ಗಳಿಗೆ ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ .ಈ ವಿಚಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ಬಂದ ಬಳಿಕ ಆರೋಪಿ ವೈದ್ಯ ರತ್ನಾಕರ್ ವಿರುದ್ಧ ತನಿಖೆ ನಡೆಸಿ ವೈದ್ಯರ ಅಮಾನತು ಮಾಡಲಾಗಿದೆ