ಮಂಗಳೂರು: ನ್ಯೂಸ್ ಕರ್ನಾಟಕ ನಿಮ್ಮ ಮುಂದೆ ಪ್ರಸ್ತುತಪಡಿಸಲಿದೆ, ‘ಕರ್ನಾಟಕ ರತ್ನಕ್ಕೊಂದು ಪುನೀತ ನಮನ – ನೆನಪಿನ ದೋಣಿಯಲ್ಲಿ ರಾಜಕುಮಾರ, ನೇರ ಶ್ರದ್ಧಾಂಜಲಿ ಕಾರ್ಯಕ್ರಮ ಮೂಲಕ ಡಿಸೆಂಬರ್ 2 ಗುರುವಾರ ಸಂಜೆ 7 ಗಂಟೆಗೆ ಪ್ರಸಾರ ಗೊಂಡಿದೆ.
ಸಂಗೀತ ಸಂಜೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಮತ್ತು ಪ್ರಖ್ಯಾತ ಗಾಯಕಿ ಮಾಲಿನಿ ಕೇಶವ ಪ್ರಸಾದ್ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾವಿದರಾದ ದೀಪಕ್ ಜಯಶೀಲನ್ ಅವರು ಕೀಬೋರ್ಡ್ನಲ್ಲಿ, ಪ್ರಜ್ವಲ್ ತಬಲಾದಲ್ಲಿ ಮತ್ತು ರಾಜೇಶ್ ಭಾಗವತ್ ರಿದಂ ಪ್ಯಾಡ್ನಲ್ಲಿ ಸಹಕಾರ ನೀಡಿರುವುದು ಗಾಯಕರ ಹಾಡಿಗೆ ಇನ್ನಷ್ಟು ಮೆರಗು ನೀಡಿದೆ.
ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ ಮೂಡಿಬಂದು ಗಾಯಕ ಅಜಯ್ ವಾರಿಯರ್ ಕಂಠದಿಂದ ಅದ್ಭುತವಾಗಿ ಪುನೀತ್ ರಾಜಕುಮಾರ್ ಹಾಗೂ ಡಾ. ರಾಜಕುಮಾರ್ ನಟನೆಯ ಹಾಗೂ ಪುತ್ರರಾದ ಶಿವ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ನಟನೆಯ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.
ಈ ಸಂದರ್ಭದಲ್ಲಿ ಗಾಯಕ ಅಜಯ್ ವಾರಿಯರ್ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ನಟನೆಯ ಅತ್ಯದ್ಭುತ ಸಿನಿಮಾ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡಿನ ಮೂಲಕ ಕಾರ್ಯಕ್ರಮವು ಪ್ರಾರಂಭಗೊಂಡಿತು. ಹೀಗೆ ರಾಜಕುಮಾರ್ ಪುತ್ರರು ಮತ್ತು ರಾಜಕುಮಾರ್ ನಟನೆಯ ಖ್ಯಾತ ಹಾಡುಗಳನ್ನು ಹಾಡಿದ್ದಾರೆ..ಖ್ಯಾತ ರೇಡಿಯೋ ಜಾಕಿ ಪ್ರಸನ್ನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.