News Kannada
Wednesday, March 29 2023

ಮಂಗಳೂರು

ಕರಾವಳಿಯ ಸಕಲ ಸೌಕರ್ಯಗಳ ‘ರೋಹನ್ ಎಸ್ಟೇಟ್’ ವಸತಿ ಬಡಾವಣೆ ಪಕ್ಷಿಕೆರೆಯಲ್ಲಿ ಲೋಕಾರ್ಪಣೆ

Photo Credit :

ಕರಾವಳಿಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆಯು ಪಕ್ಷಿಕೆರೆ ಸಮೀಪ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ 372 ವಸತಿ ನಿವೇಶನಗಳ ಬೃಹತ್ ವಸತಿ ಬಡಾವಣೆಯನ್ನು 32 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದೆ.

ಹಳೆಯಂಗಡಿ – ಕಿನ್ನಿಗೋಳಿ ರಸ್ತೆಯಲ್ಲಿನ ಪಕ್ಷಿಕೆರೆಯ ಸುಂದರ, ಪ್ರಶಾಂತ ಪರಿಸರದಲ್ಲಿ ಅತ್ಯಂತ ಆಕರ್ಷಕ, ಸಕಲ ಸೌಲಭ್ಯಗಳಿಂದ ಕೂಡಿದ ವಸತಿ ಬಡಾವಣೆ ನಿರ್ಮಾಣಗೊಂಡಿದೆ. ನಗರ ಜೀವನ ಶೈಲಿಯ ಅನುಭವದ ಜತೆಗೆ ಹಳ್ಳಿಯ ಜೀವನವÀನ್ನು ಅನುಭವಿಸುವ ಅದ್ಭುತ ಪರಿಕಲ್ಪನೆಯ ಆಧಾರದಲ್ಲಿ ಬಡಾವಣೆ ನಿರ್ಮಾಣಗೊಂಡಿದ್ದು, 100% ಕಾಮಗಾರಿ ಮುಗಿದಿದ್ದು, ಗ್ರಾಹಕರು ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡಬಹುದಾಗಿದೆ.

ಮಂಗಳೂರು ಸಮೀಪದ ಪಕ್ಷಿಕೆರೆಯ ಎಸ್.ಕೋಡಿ ಜಕ್ಷನ್‌ನಿಂದ ಕೇವಲ 100 ಮೀಟರ್ ದೂರದ ಸ್ವಚ್ಛಂದ ಪರಿಸರದಲ್ಲಿ ‘ರೋಹನ್ ಎಸ್ಟೇಟ್’ ನಿರ್ಮಾಣಗೊಂಡಿದೆ. ಹಳೆಯಂಗಡಿ- ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲೇ ರೋಹನ್ ಎಸ್ಟೇಟ್ ಇದ್ದು, ಕಟೀಲು ದೇವಸ್ಥಾನ, ಪಕ್ಷಿಕೆರೆ ಚರ್ಚ್, ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳು ಸಮೀಪದಲ್ಲಿವೆೆ. ಹಳೆಯಂಗಡಿ ರಾಷ್ಟಿçÃಯ ಹೆದ್ದಾರಿ ಜಂಕ್ಷನ್‌ನಿAದ ಕೇವಲ 4 ಕಿಲೋ ಮೀಟರ್ ಹಾಗೂ ಕಿನ್ನಿಗೋಳಿ ಪೇಟೆಯಿಂದಲೂ ಕೇವಲ ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ.

3.5 ಸೆಂಟ್ಸ್ನಿAದ 10 ಸೆಂಟ್ಸ್ ವರೆಗಿನ ಸೈಟ್‌ಗಳು ಲಭ್ಯವಿದ್ದು ಒಂದಕ್ಕೊAದು ಹೊಂದಿಕೊAಡ ಸೈಟ್‌ಗಳನ್ನು ಕೂಡಾ ಗ್ರಾಹಕರು ಖರೀದಿಸಬಹುದಾಗಿದೆ. ಇಡೀ ಬಡಾವಣೆಗೆ ಅಗಲವಾದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು ಸುವ್ಯವಸ್ಥಿತ ಒಳಚರಂಡಿ, ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಬಡಾವಣೆಗೆಂದೇ ನಿರ್ಮಿಸಿದ ಪ್ರತ್ಯೇಕ ಕುಡಿಯುವ ನೀರಿನ ಸಂಪರ್ಕದ ಜತೆಯಲ್ಲೇ ಭವಿಷ್ಯದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಪೂರೈಸುವ ಕುಡಿಯುವ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುವಂತೆ ಪ್ರತಿಯೊಂದು ಸೈಟ್‌ಗೆ ಪ್ರತ್ಯೇಕ ನೀರಿನ ಪೈಪ್ ಲೈನ್ ಜೋಡಿಸಲಾಗಿದೆ.

ಇಡೀ ಲೇ ಔಟ್‌ಗೆ ಕಣ್ಗಾವಲಾಗಿ 12 ಕಡೆಗಳಲ್ಲಿ ಹೈ ರೆಸಲ್ಯೂಶನ್ ಸಿಸಿ ಕ್ಯಾಮರಾ, ವಾಕಿಂಗ್ ಮಾಡಲು ಸುಮಾರು 5 ಕಿ.ಮೀ. ಇಂಟರ್‌ಲಾಕ್ ಹಾಕಲಾಗಿರುವ ಫೂಟ್‌ಪಾತ್, ಬ್ಯಾಡ್ಮಿಂಟನ್ ಕೋರ್ಟ್, ಮಕ್ಕಳಿಗಾಗಿ ಆಟದ ಮೈದಾನ… ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದ ಸುಸಜ್ಜಿತ ವಸತಿ ಬಡಾವಣೆ ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ನಿರ್ಮಾಣಗೊಂಡಿದೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬೇಕಾದಲ್ಲಿ 35 ಲಕ್ಷದಿಂದ 75 ಲಕ್ಷ ರುಪಾಯಿ ಒಳಗೆ ನಿವೇಶನ ಸಹಿತ ಮನೆಯನ್ನು ನಿರ್ಮಾಣ ಮಾಡಿ ಕೊಡಲಾಗುವುದು. ಅನುಭವಿ ವಿನ್ಯಾಸಗಾರರ ತಂಡವು ಮನೆಯನ್ನು ವಿನ್ಯಾಸ ಮಾಡಿಕೊಡಲಿದ್ದು ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಆರು ತಿಂಗಳಿನಲ್ಲಿ ಸುದೃಢ ಮನೆಯನ್ನು ನಿರ್ಮಾಣ ಮಾಡಿಕೊಡಲಿದೆ. ಈ ಅವಕಾಶವನ್ನು ಕೂಡಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಈಗಾಗಲೇ 3.5 ಸೆಂಟ್ಸ್ ಸ್ಥಳದಲ್ಲಿ 35 ಲಕ್ಷದ ಮೊಡೆಲ್ ಮನೆಯನ್ನು ನಿರ್ಮಿಸಲಾಗಿದ್ದು, ವೀಕ್ಷಣೆಗೆ ಲಭ್ಯವಿದೆ. ಬಡಾವಣೆಯಲ್ಲಿ ಮದುವೆ ಮತ್ತಿತರ ಪಾರ್ಟಿಗಳನ್ನು ನಡೆಸಲು ಬೇಕಾದ ಅತ್ಯುತ್ತಮ ಸ್ಥಳಾವಕಾಶವಿದ್ದು ಮಕ್ಕಳಿಗಾಗಿ ಆಟಿಕೆಗಳನ್ನೊಳಗೊಂಡ ದೊಡ್ಡದಾದ ಪ್ಲೇ ಏರಿಯಾ ರಚಿಸಲಾಗಿದೆ. ಇಡೀ ಬಡಾವಣೆಗೆ ಮೆರಗು ನೀಡುವಂತಹ ಬೃಹತ್ ಪಾರ್ಕ್ ಇದ್ದು, ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ ಇದೆ. ಕೂಡಲೇ ಮನೆ ಕಟ್ಟುವವರಿಗೆ ಯಾವುದೇ ರೀತಿಯ ಇಲೆಕ್ಟಿçಕ್ ಡೆಪಾಸಿಟ್ ಆಗಲಿ, ನೀರಿನ ಡೆಪಾಸಿಟ್ ಆಗಲಿ ನೀಡುವ ಪ್ರಮೇಯವಿಲ್ಲದೆ, ಆರು ತಿಂಗಳೊಳಗೆ ಮನೆಯನ್ನು ಪೂರ್ತಿಗೊಳಿಸಬಹುದಾಗಿದೆ.

ಕರ್ನಾಟಕ ಸರಕಾರದ ರೇರಾ ಮಾನ್ಯತೆ ಪಡೆದಿದ್ದು, ಎಲ್ಲಾ ಬ್ಯಾಂಕುಗಳಿAದ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಲಾಗಿದೆ.
ಮಳೆ ನೀರಿನ ಕೊಯಿಲು, ಓವರ್‌ಹೆಡ್ ಟ್ಯಾಂಕ್, ಬೋರ್‌ವೆಲ್, ಓಪನ್‌ವೆಲ್ ಹಾಗೂ ಪಂಚಾಯತ್ ವತಿಯಿಂದ ಕೂಡಾ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ರೀತಿಯ ನೀರಿನ ಸಮಸ್ಯೆಯು ಬಾರದಂತೆ ಕ್ರಮವನ್ನು ವಹಿಸಲಾಗಿದೆ.

See also  ಅರಸಿನಮಕ್ಕಿ ಉದಯಶಂಕರ ಕೆ. ಇವರಿಗೆ ಈ ವರ್ಷದ "ಉಂಡೆಮನೆ" ಪ್ರಶಸ್ತಿ

ಡಿಸೆಂಬರ್ ತಿಂಗಳ 21ರಿಂದ ಪ್ರತಿ ದಿನ, ಎರಡು ವಾರಗಳ ಅವಧಿಗೆ ಪಂಪ್‌ವೆಲ್ – ಕಪಿತಾನಿಯೊ ಮುಖ್ಯ ರಸ್ತೆಯಲ್ಲಿರುವ ರೋಹನ್ ಕಾರ್ಪೊರೇಶನ್ ಆಫೀಸಿನಿಂದ ಪಕ್ಷಿಕೆರೆಯ ‘ರೋಹನ್ ಎಸ್ಟೇಟ್’ಗೆ ಬೆಳಿಗ್ಗೆ 11.00ಗಂಟೆ, ಮಧ್ಯಾಹ್ನ 3.00ಗಂಟೆ ಮತ್ತು ಸಂಜೆ 5.00 ಗಂಟೆಗೆ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಆಸಕ್ತ ಗ್ರಾಹಕರು ರೋಹನ್ ಕಾರ್ಪೊರೇಶನ್ ಕಛೇರಿಗೆ ಬಂದಲ್ಲಿ ಪಕ್ಷಿಕೆರೆಗೆ ಹೋಗಿ ಬರುವ ವ್ಯವಸ್ಥೆಯನ್ನು ಮಾಡಲಾಗುವುದು.

ರೋಹನ್ ಕಾರ್ಪೊರೇಶನ್ ಸಂಸ್ಥೆ ಕಳೆದ 28 ವರ್ಷಗಳಲ್ಲಿ ನಿವೇಶನ, ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ ನಿರ್ಮಾಣ ವ್ಯವಹಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಈಗಾಗಲೇ ಬೆಲ್ಲಿಸ್ಸಿಮಾ, ಹಿಲ್ ಕ್ರೆಸ್ಟ್, ಇನ್‌ಫಿನಿಟಿ, ಮಿಕಾಸಾ, ಬಿಯಾಂಕಾ, ವೆಂಚುರಾ, ಪ್ರಿಮೆರೊ, ಪೀಟರ್ಸ್ ಕೋಟ್, ದಾಯ್ಜಿವರ್ಲ್ಡ್ ರೆಸಿಡೆನ್ಸಿ, ಎಕ್ಸೋಟಿಕಾ, ಲುಮಿನಸ್, ಕೆಟಲೋನಿಯಾ ಮುಂತಾದ 23 ಅತ್ಯುತ್ತಮ ವಸತಿ ಸಮುಚ್ಚಯಗಳು ಗ್ರಾಹಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

ಕದ್ರಿ ಕಂಬಳ ರಸ್ತೆಯಲ್ಲಿನ 14 ಮಹಡಿಗಳ ಹೈ ಕ್ರೆಸ್ಟ್ ಐಶಾರಾಮಿ ವಸತಿ ಸಂಕೀರ್ಣವೂ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದ್ದು ಕೆಲವೇ ಫ್ಲಾö್ಯಟ್‌ಗಳು ಖರೀದಿಗೆ ಲಭ್ಯವಿವÉ. ಪಂಪ್‌ವೆಲ್ ಕಪಿತಾನಿಯೊ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೋಹನ್ ಸ್ಕೆ÷್ವÃರ್ ವಾಣಿಜ್ಯ, ಹೋಟೇಲ್ ಮತ್ತು ಐಶಾರಾಮಿ ವಸತಿ ಸಮುಚ್ಚಯದ ಕೆಲಸವು ಶೀಘ್ರಗತಿಯಲ್ಲಿ ನಡೆಯುತ್ತಿದೆ. ಜೆಪ್ಪಿನ ಮೊಗರಿನಲ್ಲಿರುವ ಝೋರಿಯನ್ ವಸತಿ ಸಮುಚ್ಚಯ ಪೂರ್ಣಗೊಂಡಿದ್ದು ಕೆಲವೇ ಫ್ಲಾö್ಯಟ್‌ಗಳು ಖರೀದಿಗೆ ಲಭ್ಯವಿವೆ. ಲಾಲ್‌ಬಾಗ್‌ನ ಎಂ. ಜಿ ರಸ್ತೆಯಲ್ಲಿನ ಸಿಟಿ ಸ್ಕೆ  ವಾಣಿಜ್ಯ ಕಟ್ಟಡವು ಸಂಪೂರ್ಣಗೊAಡು ಕೆಲವೇ ವಾಣಿಜ್ಯ ಸ್ಥಳಗಳು ಖರೀದಿಗೆ ಲಭ್ಯವಿವೆ.

ಮಾಸಿಕ ಕಂತು
ಗ್ರಾಹಕರು ಕೇವಲ 10 ಸಾವಿರ ರುಪಾಯಿ ಪಾವತಿಸಿ ತಮಗೆ ಬೇಕಾದ ನಿವೇಶನಗಳನ್ನು ಬುಕ್ ಮಾಡಬಹುದಾಗಿದೆ. ಬಾಕಿ ಮೊತ್ತವನ್ನು ತಿಂಗಳ ಮಾಸಿಕ ಕಂತಿನಲ್ಲಿ ಪಾವತಿಸಬಹುದಾಗಿದೆ. ಅದೇ ರೀತಿ ನಿವೇಶನ ಖರೀದಿಸಿ, ಮನೆ ನಿರ್ಮಾಣ ಮಾಡುವುದಿದ್ದಲ್ಲಿ 25 ಸಾವಿರ ರುಪಾಯಿ ಪಾವತಿಸಿ ಬುಕ್ ಮಾಡಿ, ಉಳಿದ ಮೊತ್ತವನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಒಂದು ವೇಳೆ ಗ್ರಾಹಕರು ನಿವೇಶನ ಮತ್ತು ಮನೆ ಖರೀದಿಗೆ ಬ್ಯಾಂಕ್‌ನಿAದ ಸಾಲ ಪಡೆದುಕೊಳ್ಳುವುದಿದ್ದಲ್ಲಿ ಡೌನ್‌ಪೇಮೆಂಟ್ ಮೊತ್ತವನ್ನು ಗ್ರಾಹಕರು ಮಾಸಿಕ ಕಂತಿನ ಆಧಾರದಲ್ಲಿ ಪಡೆದುಕೊಳ್ಳಬಹುದಾಗಿದೆ.

ಗೃಹ ಸಾಲಕ್ಕೆ ಸಂಬAಧಿಸಿದAತೆ ಈಗಾಗಲೇ ಹಲವಾರು ಬ್ಯಾಂಕ್‌ಗಳಿAದ ಲೀಗಲ್ ಓಪೀನಿಯನ್ ಪಡೆದುಕೊಳ್ಳಲಾಗಿದ್ದು, ಗ್ರಾಹಕರು ಗೃಹ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ.

ಪ್ರಸ್ತುತ ಬಹುತೇಕ ಗ್ರಾಹಕರು ಮನೆ, ನಿವೇಶನ ಖರೀದಿ ಸಂದರ್ಭ ವಾಸ್ತು ಪ್ರಕಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತರಾದ್ದರಿಂದ, ವಾಸ್ತು ಸರಿಯಿಲ್ಲದ ಕಡೆಗಳಲ್ಲಿ ಗ್ರಾಹಕರು ಖರೀದಿ ಹಾಗೂ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಆದರೆ ರೋಹನ್ ಎಸ್ಟೇಟ್‌ನಲ್ಲಿ ನಿರ್ಮಾಣವಾದ ಎಲ್ಲಾ ನಿವೇಶನಗಳು ವಾಸ್ತು ಪ್ರಕಾರ ಇದ್ದು ಮನೆ ಕಟ್ಟಲು ಬಯಸುವ ಗ್ರಾಹಕರು ವಾಸ್ತು ಅನುಕೂಲಕ್ಕೆ ತಕ್ಕಂತೆ ಮನೆಯನ್ನು ನಿರ್ಮಿಸ ಬಹುದಾಗಿದೆ. ಪ್ರತಿ ಸೆಂಟ್ಸಿಗೆ ರುಪಾಯಿ 4 ಲಕ್ಷ ಬೆಲೆಯಿದ್ದು, ಸೀಮಿತ ಅವಧಿಗೆ 3.50 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುವುದು.

See also  ಮಂಗಳೂರು: ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ, ಐವರು ಸಾವು

ಹಸಿರಿಗೆ ವಿಶೇಷ ಒತ್ತು
ವಸತಿ ಬಡಾವಣೆಯಲ್ಲಿ ಸೈಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೊದಲೇ ಸುಸಜ್ಜಿತ 10 ಗಾರ್ಡನ್‌ಗಳನ್ನು ನಿರ್ಮಾಣ ಮಾಡಲಾಗಿದ್ದು ಇಡೀ ಎಸ್ಟೇಟ್‌ನ ರಸ್ತೆಗಳ ಉದ್ದಕ್ಕೂ ಹಸಿರೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಎಲ್ಲಾ ಖಾಲಿ ಜಾಗಗಳಲ್ಲಿ ಹಚ್ಚ ಹಸಿರು ಕಂಗೊಳಿಸುವAತೆ ಮಾಡಲಾಗಿದೆ. ಹತ್ತು ಹಲವು ಹಣ್ಣು ಹಂಪಲುಗಳ ಗಿಡಗಳನ್ನು ಇಡೀ ಬಡಾವಣೆಯಲ್ಲಿ ನೆಡಲಾಗಿದೆ. ಶುದ್ಧ ಗಾಳಿಯು ಬಡಾವಣೆಯಾದ್ಯಂತ ಬೀಸುತ್ತಿದ್ದು ನಿವಾಸಿಗರಿಗೆ ಹೊಸ ರೀತಿಯ ಜೀವನದ ಅನುಭವವು ಆಗಲಿದೆ.

ನೀರು ಸಂಸ್ಕರಣಾ ಘಟಕ
ಇಡೀ ಬಡಾವಣೆಯಲ್ಲಿ ಸಂಗ್ರಹವಾದ ಕೊಳಚೆ ನೀರನ್ನು ಎಲ್ಲೆಂದರಲ್ಲಿ ಬಿಡದೆ ಅವುಗಳನ್ನು ಶುದ್ಧೀಕರಿಸುವ ಸುಸಜ್ಜಿತ ಎಸ್‌ಟಿಪಿ ಘಟಕವನ್ನು ಬಡಾವಣೆಯಲ್ಲಿ ನಿರ್ಮಿಸಲಾಗಿದೆ. ಇದರಿಂದಾಗಿ ಕೊಳಚೆ ನೀರು ಬಡಾವಣೆಯಲ್ಲಿ ಹರಿದಾಡಿ ದುರ್ವಾಸನೆ ಬೀರುವ ಯಾವುದೇ ಪ್ರಮೇಯವು ಸೃಷ್ಟಿಯಾಗುವುದಿಲ್ಲ. ಅಲ್ಲದೆ ಪ್ರತಿ ಮನೆಗಳಿಗೆ ಡ್ರೆÊನೇಜ್ ಪೈಪ್ ಅಳವಡಿಸಿ ಕೊಳಚೆ ನೀರನ್ನು ಬಿಡಲು ಸೂಕ್ತ ಪೈಪ್‌ಗಳ ಜೋಡಣೆ ಮತ್ತು ವ್ಯವಸ್ಥೆ ಮಾಡಲಾಗಿದೆ.

ಎಸ್‌ಟಿಪಿ ಪ್ಲಾ÷್ಯಂಟ್‌ನಲ್ಲಿ ಶುದ್ಧೀಕರಿಸಿದ ನೀರನ್ನು ಪುನರ್ ಬಳಕೆ ಮಾಡಲು ಕೂಡಾ ವಿಶೇಷ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ಪೈಪ್‌ಲೈನ್ ಹಾಕಿ, ಬಡಾವಣೆಯ ಇಡೀ ಗಾರ್ಡನ್‌ಗೆ ಬಳಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಶುದ್ಧ ಕುಡಿಯುವ ನೀರು ಹಾಳಾಗದಂತೆ ಎಚ್ಚರ ವಹಿಸಲಾಗಿದೆ.
ಹೆಚ್ಚಿನ ವಿವರಗಳಿಗೆ www.rohancorporation.in ವೆಬ್‌ಸೈಟನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು