News Kannada
Friday, December 02 2022

ಮಂಗಳೂರು

ಗರ್ಡಾಡಿ ನಂದಿಬೆಟ್ಟ ಬಳಿ ಕೆ.ಎಸ್. ಆರ್. ಟಿ. ಸಿ. ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ

Photo Credit : News Kannada

ಬೆಳ್ತಂಗಡಿ: ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟ ಬಳಿ ಕೆ.ಎಸ್. ಆರ್. ಟಿ. ಸಿ. ಬಸ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರು  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.

ಮೃತರನ್ನು ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ದಿl ಮರ್ಹೂಮ್ ಅಬ್ದುರ್ರಝಾಕ್ ಅವರ ಪುತ್ರರಾದ ಹಮ್ಮಬ್ಬ ಸಿರಾಜ್( 28 )ಮತ್ತು ಕಜುತುಬುದ್ದೀನ್ ಸಾದಿಕ್( 32) ಎಂಬುವರೆಂದು ಗುರುತಿಸಲಾಗಿದೆ.

ಗುರುವಾರವಷ್ಟೇ ವೇಣೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು  ಸ್ಥಳೀಯ ಗೋಳಿಯಂಗಡಿಯ ಸಾರ್ವಜನಿಕರು ಇನ್ನಿತರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದರು. ಕಳೆದ ಐದು ತಿಂಗಳ ಹಿಂದೆ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ.  ಮೃತರು ತಾಯಿ, 8 ಸಹೋದರರು, 6 ಸಹೋದರಿಯರನ್ನು ಅಗಲಿದ್ದಾರೆ.

See also  ಬಂಟ್ವಾಳದಲ್ಲಿ ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದ ಯು.ಟಿ.ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು