News Kannada
Saturday, December 10 2022

ಮಂಗಳೂರು

ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿಯ ಬಂಧನ

Photo Credit :

ಬಂಟ್ವಾಳ : ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ನಡೆದ ಸಹೋದರರ ಮಧ್ಯೆ ಜಗಳ ನಡೆದು ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಐತಪ್ಪ ನಾಯ್ಕ್(45) ಬಂಧಿತ ಆರೋಪಿ.ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಬಾಲಪ್ಪ ನಾಯ್ಕ್ ಅವರು ಮಂಗಳವಾರ ಸಂಜೆ ತರವಾಡು ಮನೆಗೆ ತನ್ನ ತಾಯಿ ಜತೆ ಬಂದಿದ್ದರು.

ಮಂಗಳವಾರ ಹೊಸ ಮನೆಯಲ್ಲಿ ಗೊಂದೋಳು ಪೂಜೆ ನಡೆಯುತ್ತಿದ್ದು, ಈ ವೇಳೆ ಸಹೋದರರಿಬ್ಬರೂ ತಕಾರಾರು ಇರುವ ಜಾಗದಲ್ಲಿ ಬೆಳೆದ ಭತ್ತ ಫಸಲಿನಲ್ಲಿ ಪಾಲು ಕೇಳಿದ ವಿಚಾರವಾಗಿ ಜಗಳ ಉಂಟಾಗಿದೆ.

ಜಗಳ ತಾರಕ್ಕಕ್ಕೇರಿ ಅಣ್ಣ ತಮ್ಮನನ್ನು ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ , ಅಡಿಷನಲ್ ಎಸ್‌ಪಿ ಕುಮಾರಚಂದ್ರ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ  ರವರುಗಳ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್‌.ಈ ನೇತೃತ್ವದಲ್ಲಿ ಪಿ ಎಸ್ ಐ ಮಂಜುನಾಥ ಟಿ, ಪ್ರೊಭೆಷನರಿ.ಪಿ ಎಸ್ ಐ ಗಳಾದ ಧನಂಜಯ, ಬಿ.ಸಿ, ಜಯಶ್ರೀ ಪ್ರಭಾಕರ್ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

See also  ಯೇಸು ತನ್ನ ಹಿಂದೆ ಬರುವ ಯಾರನ್ನೂ ತಿರಸ್ಕರಿಸುವುದಿಲ್ಲ; ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು