ಬೆಳ್ತಂಗಡಿ: ಉಜಿರೆ ರಾಮನಗರದ ಆದರ್ಶ ಸೇವಾ ಸಮಿತಿ, ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಸೇವಾ ಟ್ರಸ್ಟ್ (ರಿ), ಮತ್ತು ಮಿಯಾರ್ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮತ್ತು ಬೊಲ್ಮನಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಉಚಿತ ನೇತ್ರ ಪರಿಕ್ಷೆ ಮತ್ತು ಚಿಕಿತ್ಸಾ ಶಿಬಿರ ಮೇ 20 ರಂದು ಪುದುವೆಟ್ಟು ಮೀಯಾ ರು ಶ್ರೀ ಗುರು ನಾರಾಯಣ ಬಿಲ್ಲವ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9.30 ರಿಂದ ಮದ್ಯಾಹ್ನ 1 ರ ವರೆಗೆ ನಡೆಯಲಿದೆ.
ಶಿಬಿರದಲ್ಲಿ ನೇತ್ರ ತಜ್ಞರಿಂದ ಕಣ್ಣಿನ ಪರೀಕ್ಷೆ ,ಚಿಕಿತ್ಸೆ ಮತ್ತು ಸಲಹೆ ನೀಡಲಾಗುವುದು .ಕಣ್ಣಿನ ಪೋರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಮಂಗಳೂರಿನ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಮಾಡಲಾಗುವುದು. ಕನ್ನಡಕದ ಅವಶ್ಯಕತೆಯಿದ್ದವರಿಗೆ ರಿಯಾಯತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.