ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 19.05.2022 ರಂದು ಪೌರ ಕಾರ್ಮಿಕರ ನೇರ ನೇಮಕಾತಿ ಕುರಿತಂತೆ ತಮ್ಮ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಮೇರೆಗೆ ಪಾಲಿಕೆಯ ಎಲ್ಲಾ ವಾರ್ಡ್ ಗಳ ಪೌರ ಕಾರ್ಮಿಕರು/ಹೊರಗುತ್ತಿಗೆ ಕಾರ್ಮಿಕರು ಕಾರ್ಯ ನಿರ್ವಹಿಸಿರುವುದಿಲ್ಲ, ಆದ ಕಾರಣ ಪಾಲಿಕೆಯ ಕಡೆಯಿಂದ ದಿನಾಂಕ:19.05.2022 ರಂದು ಹಸಿ ತ್ಯಾಜ್ಯ ಸಂಗ್ರಹಣೆಯಲ್ಲಿ ವ್ಯತ್ಯಯವಾಗಿದ್ದು ಕೆಲವೊಂದು ಸ್ಥಳಗಳಲ್ಲಿ ಹಸಿತ್ಯಾಜ್ಯ ಸಂಗ್ರಹಿಸಲಾಗಿರುವುದಿಲ್ಲ.
ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಂತಹ ಸ್ಥಳಗಳಲ್ಲಿ ದಿನಾಂಕ 20-05.2022 ಶುಕ್ರವಾರದಂದು ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಹಸಿತ್ಯಾಜ್ಯವನ್ನು ಹಾಗೂ ಅಪರಾಹ್ನದಿಂದ ಮರುದಿನ (ಶನಿವಾರದ) ಮಧ್ಯಾಹ್ನದವರೆಗೆ ಒಣತ್ಯಾಜ್ಯವನ್ನು ಸಂಗ್ರಹಿಸಲಾಗುವುದು ಹಾಗೂ ನಂತರ ಎಂದಿನಂತೆ ಹಸಿತ್ಯಾಜ್ಯವನ್ನು ಸಂಗ್ರಹಿಸುವ ಬಗ್ಗೆ ಕ್ರಮವಹಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.