News Kannada
Monday, January 30 2023

ಮಂಗಳೂರು

ಬೆಳ್ತಂಗಡಿ: ಸಾಲವನ್ನು ಮರುಪಾವತಿಸದೇ ಇದ್ದುದರಿಂದ ಕಟ್ಟಡ ಜಪ್ತಿ

Photo Credit : News Kannada

ಬೆಳ್ತಂಗಡಿ: ಮಿನಿ ವಿಧಾನ ಸೌಧದ ಬಳಿಯಿರುವ ವಿಘ್ನೇಶ್ ಸಿಟಿ ಕಟ್ಟಡ ನಿರ್ಮಾಣ ಮಾಡಲು ಮುಂಬಯಿ ಮೂಲದ ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿಸದೇ ಇದ್ದುದರಿಂದ ಕಟ್ಟಡವನ್ನು ಬ್ಯಾಂಕ್ ವಶಕ್ಕೆ ಮೇ 20 ರಂದು ಬೆಳಗ್ಗೆ 11 ಗಂಟೆಗೆ ಪಡೆದುಕೊಳ್ಳುವ ಬಗ್ಗೆ ನೋಟಿಸ್ ಜಾರಿಗೊಳಿಸಿದ್ದು ಈ ಬಗ್ಗೆ ಸಾಲ ವಸೂಲಾತಿ ಪ್ರಾಧಿಕಾರ ಸ್ವಲ್ಪ ಸಮಯದ ವರೆಗೆ ಜಪ್ತಿ ಮಾಡದಂತೆ ತಡೆಯಾಜ್ಞೆ ನೀಡಿದೆ.

ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಬಳಿ ಇರುವ ರವಿ ಕುಮಾರ್ ಎಂಬವರು “ವಿಘ್ನೇಶ್ ಕನ್ಟ್ರಕ್ಷನ್ ” ಪಿಡಬ್ಲ್ಯೂ ಗುತ್ತಿಗೆ ಮತ್ತು ಅರ್ಥ್ ಮೂವರ್ಸ್ ನಡೆಸುತ್ತಿರುವ ಇವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ವಿಘ್ನೇಶ್ ಸಿಟಿ “ಎಂಬ ಹೆಸರಿನ ಕಟ್ಟಡಕ್ಕೆ ಬ್ಯಾಂಕ್ ನಿಂದ ಸಾಲ ಪಡೆದಿದ್ದರು ಆದರೆ ಕಳೆದ ನಾಲ್ಕು ವರ್ಷಗಳಿಂದ ಬಡ್ಡಿ ಅಸಲು ಸೇರಿ ಸುಮಾರು ಆರುವರೇ ಕೋಟಿ ಹಣವನ್ನು ಬ್ಯಾಂಕ್ ಗೆ ಮರುಪಾವತಿ ಮಾಡದಿರುವುದರಿಂದ ಕಟ್ಟಡ ಜಪ್ತಿ ಮಾಡಲು ಬ್ಯಾಂಕಿಗೆ ಕೋರ್ಟ್ ಆದೇಶಿಸಿದ್ದು ಈ ಬಗ್ಗೆ ಅಂಗಡಿ ಕೋಣೆ ಬಿಡಲು ಎಲ್ಲಾ ಬಾಡಿಗೆ ಹೊಂದಿರುವ ಮಾಲಕರಿಗೆ ಮಂಗಳೂರು ಕೋರ್ಟ್ ಮುಖಾಂತರ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಹಚ್ಚಿ ಹೋಗಿದ್ದರು.

NKGSB co-op ಬ್ಯಾಂಕ್ ನಿಂದ ಸಾಲ:

ಮುಂಬಯಿ ಮೂಲದ NKGSB Co-op ಬ್ಯಾಂಕ್ ಲಿಮಿಟೆಡ್‌ ನ ಮಂಗಳೂರು ಶಾಖೆಯಿಂದ ಸುಮಾರು ನಾಲ್ಕುವರೆ ಕೋಟಿ ಕಟ್ಟಡಕ್ಕೆ ಸಾಲ ಪಡೆದು ಮರುಪಾವತಿಸದೇ ಇದುದರಿಂದ ಮಂಗಳೂರು ಪ್ರಿ ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್‌ನಿಂದ ಕಮೀಷನರ್ ನೇಮಿಸಿ ವಾರೆಂಟ್ ಹೊರಡಿಸಿದ್ದು ಎಲ್ಲಾ ಅಂಗಡಿ ಕೋಣೆ ಬಾಡಿಗೆದಾರರ ಅಂಗಡಿಯ ಮುಂದೆ ನೋಟಿಸ್ ಅಂಟಿಸಿತ್ತು .

ಮೇ 20 ಶುಕ್ರವಾರ ಕಟ್ಟಡ ಜಪ್ತಿ :

ಕೋರ್ಟ್ ಮುಖಾಂತರ ಶುಕ್ರವಾರ ಬೆಳಗ್ಗೆ11 ಗಂಟೆಗೆ ಕೋರ್ಟ್ ಕಮಿಷನರ್ ಮುಖಾಂತರ ಜಪ್ತಿ ಮಾಡಲಿದ್ದೇವೆ ನೀವಾಗಿ ಕೋಣೆಯನ್ನು ಖಾಲಿ ಮಾಡಿ ಹೋಗಿ ಇಲ್ಲವಾದರೆ ನಾವೇ ಎಲ್ಲವನ್ನೂ ಜಪ್ತಿ ಮಾಡುವ ಬಗ್ಗೆ ತಿಳಿಸಲಾಗಿತ್ತು .
ಈ ಬಗ್ಗೆ ಕಟ್ಟಡದ ಮಾಲಕರು ವಕೀಲರಾದ ಪ್ರಸಾದ್ ಕೆ.ಎಸ್ ಅವರ ಮೂಲಕ ಸಾಲ ವಸೂಲಾತಿ ಪ್ರಾಧಿಕಾರ (D R T) ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ತಾತ್ಕಾಲಿಕವಾಗಿ ಸ್ವಲ್ಪ ಸಮಯದವರೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.ಇದರಿಂದ ಅಂಗಡಿ ಹೊಂದಿರುವ ಬಾಡಿಗೆದಾರರು ಸ್ವಲ್ಪ ದಿನ ನಿಟ್ಟುಸಿರು ಬಿಡುವಂತಾಗಿದೆ. ಅದಲ್ಲದೇ ಈ ಬಗ್ಗೆ ಕಟ್ಟಡದ ಎಲ್ಲಾ ಬಾಡಿಗೆದಾರರು ಸಭೆ ಸೇರಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ಮಾಡುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

See also  ಮಂಗಳೂರು: ಪರ್ಸ್ ಮತ್ತು ಮೊಬೈಲ್ ಎಗರಿಸಿ ಪರಾರಿಯಾದ ಕಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು