News Kannada
Tuesday, February 07 2023

ಮಂಗಳೂರು

ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಕಾಡಾನೆಗಳ ದಾಳಿ

Photo Credit :

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಸ್ಥಳೀಯರ ಕೃಷಿ ತೋಟಗಳಲ್ಲಿ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹೆಚ್ಚಿನ ಹಾನಿ ಉಂಟು ಮಾಡಿವೆ.

ಇಲ್ಲಿನ ಜನವಸತಿ ಪ್ರದೇಶದ ಸಮೀಪದ ತೋಟಗಳಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು ಪರಿಸರದ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ.

ಮೇ 13ರಂದು ಚಾರ್ಮಾಡಿಯ ಮಠದ ಮಜಲು ಪ್ರದೇಶದಲ್ಲಿ 4ರಿಂದ 5 ಕಾಡಾನೆಗಳು ಕೃಷಿ ಹಾನಿ ಉಂಟು ಮಾಡಿದ್ದವು. ಮುಂಡಾಜೆಯಲ್ಲಿ ಇದೇ ಆನೆಗಳ ಹಿಂಡು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಮೂರು ತಿಂಗಳ ಹಿಂದೆ ದುಂಬೆಟ್ಟು ಪರಿಸರದಲ್ಲಿ ಸುಮಾರು ಮೂರು ವಾರ ಕಾಲ ನಿರಂತರ ದಾಳಿ ನಡೆಸಿದ ಕಾಡಾನೆಗಳು ಇಲ್ಲಿನ ಕೃಷಿಕರ ನಿದ್ದೆಗೆಡಿಸಿದ್ದವು. ಬಳಿಕ ಅರಣ್ಯ ಇಲಾಖೆಯು ನಾಗರಹೊಳೆಯಿಂದ ಕಾಡಾನೆಗಳನ್ನು ಕಾಡಿಗಟ್ಟುವ ಪರಿಣಿತರನ್ನು ಕರೆಯಿಸಿ ಪರಿಶೀಲನೆ ನಡೆಸಿತ್ತು.

ಆದರೆ ಪರಿಣಿತರು ಸುಮಾರು ಒಂದು ವಾರ ಕಾಲ ಕಾರ್ಯಾಚರಣೆ ನಡೆಸಿದರು ಕಾಡಾನೆಗಳು ಪತ್ತೆಯಾಗದೆ ಬರಿಗೈಯಲ್ಲಿ ವಾಪಸಾಗಿದ್ದರು.ದುಂಬೆಟ್ಟು ಪ್ರದೇಶವು ಆನೆ ದಾಳಿ ಪೀಡಿತ ಪರಿಸರ ವಾಗಿದ್ದು ಇಲ್ಲಿ ಆಗಾಗ ಆನೆಗಳು ದಾಳಿ ನಡೆಸಿ ಹಾನಿ ಉಂಟು ಮಾಡುತ್ತಿವೆ.

ಗಸ್ತು ವ್ಯವಸ್ಥೆ
ಶನಿವಾರದ ಆನೆ ದಾಳಿ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ.ಪರಿಸರದ ಜನರ ಸಹಕಾರದಲ್ಲಿ ಇಲಾಖೆವತಿಯಿಂದ ವ್ಯವಸ್ಥೆಗೆ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

See also  ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಕಾರು, ಮಾನವೀಯತೆ ಮೆರೆದ ದ.ಕ. ಜಿಲ್ಲಾಧಿಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು