ಪುತ್ತೂರು: ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಿ ಮುಂದಿನ ಆರು ತಿಂಗಳೊಳಗೆ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪಶುಸಂಗೋಪಾನ ಸಚಿವ ಪ್ರಭು ಚೌಹಾನ್ ಹೇಳಿದರು.
ಕೊಯಿಲ ಪಶುವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಟ್ಟಡ ಕಾಮಾಗರಿಗೆ ಸರ್ಕಾರದ ಕಡೆಯಿಂದ ಅರ್ಥಿಕ ಸಹಕಾರಕ್ಕೆ ಕೊರತೆಯಾಗಿಲ್ಲ. ಹಂತ ಹಂತವಾಗಿ ಅನುದಾನ ಬಿಡಗಡೆಗೊಳಿಸಲಾಗಿದೆ. ಕಾಮಾಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು.
ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು ಈ ಬಗ್ಗೆ ಕಾಮಾಗಾರಿ ಲೋಪವಾಗಿದೆಯೆ ಎಂದು ಇಂಜಿನಿಯಾರ್‌ಗಳ ಮೂಲಕ ಪರಿಶೀಲಿಸಲಾಗುವುದು. ಲೋಪವಾದಲ್ಲಿ ಸರಿಪಡಿಸಿಕೊಡುವ ತನಕ ಬಿಲ್ಲು ಪಾವತಿ ತಡೆಹಿಡಿಯಲಾಗುವುದು ಎಂದರು.
ಮಂಗಳೂರಿನಲ್ಲಿ ಪಶು ಪಾಲಿಕ್ಲಿನಿಕ್ ಕಟ್ಟಡದಲ್ಲಿ ಸಣ್ಣ ಪುಟ್ಟ ಕೆಲಸಗಳು ಬಾಕಿಯಿವೆ. ಇದನೆಲ್ಲ ಶೀಘ್ರದಲ್ಲಿ ಮುಗಿಸಿ ಉದ್ಘಾಟನೆಗೊಳಿಸಲಾಗುವುದು. ಪ್ರತೈಕ ರಾಜ್ಯ ಬೇಕೆನ್ನುವ ಸಚಿವ ಉಮೇಶ್ ಕತ್ತಿ ಹೇಳಿಕೆ ಅವರ ವೈಯಕ್ತಿಕವಾದ ಅಭಿಪ್ರಾಯ . ಅವರ ಹೇಳಿಕೆಗೂ ಸರ್ಕಾರಕ್ಕೂ ಸಂಬಂದವಿಲ್ಲ. ಸರ್ಕಾರದ ಮುಂದೆ ಪ್ರತ್ಯೇಕ ರಾಜ್ಯ ಮಾಡುವ ಇರಾದೆಯಿಲ್ಲ. ಕರ್ನಾಟಕ ರಾಜ್ಯವಾಗಿಯೇ ಉಳಿಯಲಿದೆ ಎಂದರು.
ಈ ಸಂದರ್ಭದಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಪ್ರಶಾಂತ್ ಆರ್ ಕೆ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಉಪಾಧ್ಯಕ್ಷೆ ಕಮಾಲಕ್ಷಿ ಪಾಜಳಿಕೆ , ಪಶು ಸಂಗೋಪಾನ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.