News Kannada
Sunday, October 02 2022

ಮಂಗಳೂರು

ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜು: ಪದವಿ ಆಂಗ್ಲ ಪಠ್ಯಕ್ರಮದ ವಿಶೇಷತೆ ಕುರಿತು ಕಾರ್ಯಗಾರ - 1 min read

Mangalore Besant Women's College: Special Workshop on Undergraduate English Syllabus
Photo Credit :

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಆಂಗ್ಲ ಭಾಷ ಪ್ರಾಧ್ಯಾಪಕರ ಸಂಘ, ಬೆಸೆಂಟ್ ಮಹಿಳಾ ಕಾಲೇಜು ಆಂಗ್ಲ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ವತಿಯಿಂದ ಓರಿಯೆಂಟ್ ಬ್ಲಾಕ್ ಸ್ವಾನ್ ಪ್ರೈವೆಟ್ ಲಿಮಿಟಿಡ್ ಸಹಯೋಗದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಪದವಿ ಆಂಗ್ಲ ಪಠ್ಯ ಕ್ರಮದ ವಿಶೇಷತೆಯ ಕುರಿತು ಒಂದು ದಿನದ ಕಾರ್ಯಗಾರ 29-06-2022 ರಂದು ಬೆಸೆಂಟ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ ಬೆಸೆಂಟ್ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ| ಸತೀಶ್ ಕುಮಾರ್ ಶೆಟ್ಟಿ ಅವರು ರಾಷ್ಟ್ರೀಯ ನೀತಿಯ ಮಹತ್ವವನ್ನು ತಿಳಿಸಿದರು.

ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕರು ಹಾಗೂ ವಿಮೆನ್ಸ್ ನ್ಯಾಷನಲ್ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಡಾ| ಮಂಜುಳಾ ಕೆ.ಟಿ ಅವರು ಸಮಾಜದಲ್ಲಿ ಸಹಬಾಳ್ವೆಯಿಂದ ಜೀವನ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಬಿಒಎಸ್. ಅಧ್ಯಕ್ಷರಾದ ಡಾ| ಪರಿಣಿತ “ಪ್ರಸ್ತುತ ಆಂಗ್ಲ ಭಾಷೆಯ ಪ್ರಾಮುಖ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಗಾರ ಅವಶ್ಯಕತೆ ಬಗ್ಗೆ ತಿಳಿಸಿದರು.

ಈ ವೇಳೆ ಮಂಗಳೂರು ವಿಶ್ವವಿದ್ಯಾನಿಲಯ ಸಹಾಯಕ ಪ್ರಾಧ್ಯಾಪಕರಾದ ಡಾ| ರಾಜಲಕ್ಷೀ ಎನ್.ಕೆ, ಬೆಸೆಂಟ್ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ| ಗೌತಮ್ ಜ್ಯೋತ್ಸ್ನಾ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು, ಕಾರ್ಕಳ, ಮೂಡಬಿದ್ರೆ, ಉಡುಪಿ, ಸುಬ್ರಹ್ಮಣ್ಯ, ಕೊಡಗು ಇತರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಿಂದ ೫೦ಕ್ಕೂ ಹೆಚ್ಚಿನ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಬೆಸೆಂಟ್ ಮಹಿಳಾ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಅಸೋಸಿಯೇಟ್ ಪ್ರೊಫೆಸರ್ ಪ್ರೀತಾ ಭಂಡಾರಿ ಸ್ವಾಗತಿಸಿದರು. ಆಂಗ್ಲ ಭಾಷ ಶಿಕ್ಷಕರ ಸಂಘದ ಅಧ್ಯಕ್ಷ ಡಾ|ವಿಕ್ಟರ್ ವಾಜ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ| ಗೌತಮ್ ಜ್ಯೋತ್ಸ್ನಾ, ಸರಸ್ವತಿ ನಿರೂಪಿಸಿದರು.

ಅಸೋಸಿಯೇಟ್ ಪ್ರೊಫೆಸರ್ ಮೀರಾ ಎಡ್ನಾ ಕೊಯಿಲ್ಹೋ, ಸಹಾಯಕ ಪ್ರಾಧ್ಯಾಪಕ ಗಿರೀಶ್ ಕುಮಾರ್, ಅತಿಥಿ ಉಪನ್ಯಾಸಕಿ ಸುಷ್ಮಾ ಮತ್ತಿತ್ತರು ಉಪಸ್ಥಿತರಿದ್ದರು.

See also  'ಲೆಟ್ಸ್ ಗೋ ಗ್ರೀನ್' ಮೇ 22ರಂದು ಎಲೆಕ್ಟ್ರಿಕ್ ವೆಹಿಕಲ್ ರ‍್ಯಾಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು