ಬೆಳ್ತಂಗಡಿ: ತಾಲೂಕಿನಾದ್ಯಂತ ಗುರುವಾರ ಮುಂಜಾನೆಯಿಂದ ರಾತ್ರಿವರೆಗೆ ಸತತವಾಗಿ ಮಳೆಸುರಿಯುತ್ತಿದ್ದು ನದಿಗಳು ದಡ ಮೀರಿ ಹರಿಯತೊಡಗಿವೆ. ಮುಖ್ಯವಾಗಿ ನೇತ್ರಾವತಿ, ಮೃತ್ಯುಂಜಯ, ಪಲ್ಗುಣಿ ನದಿಗಳು ಭೋರ್ಗರೆದು ಹರಿಯುತ್ತಿವೆ.
ಮಳೆಯಿಂದಾಗಿ ಮಚ್ಚಿನ ಗ್ರಾಮದ ಮರಿಯಮ್ಮ ಅವರ ಮನೆ ಭಾಗಶಃ ಕುಸಿದು ಹಾನಿಯಾಗಿದೆ. ವೇಣೂರಿನ ಅಬೂಬಕ್ಕರ್ ಸಿದ್ದಿಕಿ ಅವರ ಮನೆಪಕ್ಕದ ಬಾವಿ ಕುಸಿದು ಮನೆಗೆ ಅಪಾಯತಂದೊಡ್ಡಿದೆ.
ವೇಣೂರು ಸುದೆರ್ದು ನಿವಾಸಿ ರೇವತಿಯವರ ಹಟ್ಟಿ ಧರಾಶಾಯಿಯಾಗಿ ಗಬ್ದದ ದನವೊಂದು ಮೃತಪಟ್ನಟಿದೆ. ಹಟ್ಟಿಯಲ್ಲಿದ್ದ ಇನ್ನುಳಿದ 3 ದನಗಳು ಅಪಾಯದಿಂದ ಪಾರಾಗಿದೆ. ಗಬ್ಬದ ದನದ ಮೇಲೆ ಮಹಡಿ ಬಿದ್ದು ಮೃತಪಟ್ಟಿದೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೃತ ದನದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಉಮೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.