ಮಂಗಳೂರು: ದ.ಕ ಜಿಲ್ಲೆದ್ಯಾಂತ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ಪಂಜಿಕಲ್ಲಿನಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ರೆ. ಮಂಗಳೂರು ವಿಮಾನ ನಿಲ್ದಾಣ ರನ್ ವೇ ಸಮೀಪ ಗುಡ್ಡ ಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಂಗಳೂರು ನಗರದ ಪಡೀಲ್ ಕಣ್ಣೂರು ಸಮೀಪ ಬೊಳ್ಳೂರು ಗುಡ್ಡೆ ಬಳಿ ಭೂಕುಸಿತ ಸಂಭವಿಸಿ ಅವರಣಗೋಡೆಯೊಂದು ಕುಸಿದು ಬಿದ್ದು ಹಲವು ಮನೆಗಳು ಅಪಾಯದಲ್ಲಿದೆ. ಇನ್ನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದ.ಕ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.