ಮಂಗಳೂರು: ಕರಾವಳಿ ಭಾಗದಲ್ಲಿ ಈ ಭಾರೀ ಅತ್ಯಧಿಕ ಮಳೆ ಉಂಟಾಗಿ ಅಪಾರ ನಷ್ಟ ಉಂಟಾಗಿದೆ. ಮಳೆಯಿಂದ ಮನೆ, ಆಸ್ತಿ, ಜೀವ ಹಾನಿಯಾದ ಕುಟುಂಬಗಳಿಗೆ ಸರಕಾರ ತುರ್ತಾಗಿ ಪರಿಹಾರ ವಿತರಿಸುವ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಈ ವೇಳೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಜೊತೆಗಿದ್ದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2 ವರ್ಷದ ಹಿಂದೆ ಮಲ್ಲೂರು ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿದೆ. ಆದರೆ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಕಟ್ಟಲು ನೆರವು ನೀಡಲಾಗಿಲ್ಲ. ಸರಕಾರ ಯಾವುದೇ ಭೇದಭಾವ ಇಲ್ಲದೇ ಸಂತ್ರಸ್ತರ ಬೆಂಬಲಕ್ಕೆ ಬರಬೇಕು ಎಂದರು.