News Kannada
Tuesday, October 04 2022

ಮಂಗಳೂರು

ಮಂಗಳೂರು: ಜಿಎಸ್ ಟಿ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿದ್ದೇವೆ ಎಂದ ಮುಹಮ್ಮದ್ ಕುಞಿ - 1 min read

Mangaluru: We will soon stage a massive protest against GST, says Muhammed Kunhi
Photo Credit : News Kannada

ಮಂಗಳೂರು:  ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿದ್ದಾಯ್ತು. ಇದೀಗ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು ನಾಚಿಕೆಗೇಡು ಎಂದು ಜೆಡಿಎಸ್ ಹಿರಿಯ ಮುಖಂಡ ಮುಹಮ್ಮದ್ ಕುಞಿ ಕಿಡಿಕಾರಿದ್ದಾರೆ.

ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಇನ್ಮುಂದೆ ಹೆಣಕ್ಕೂ, ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕಬಹುದು ಇವರು. ಈ ರೀತಿ ಆದ್ರೆ ಜನಸಾಮಾನ್ಯರು ಯಾವ ರೀತಿ ಜೀವನ ನಡೆಸಬೇಕು..? ಹಾಲು, ಮಜ್ಜಿಗೆ, ಮೊಸರು ಹೇಗೆ ಖರೀದಿ ಮಾಡೋದು..? ಹೀಗಾಗಿ ಇದನ್ನು ನಾವು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅವತ್ತು ಮೋದಿ ಮೋದಿ ಎಂದು ಜನರು ವೋಟ್ ಹಾಕಿದ್ರು. ಈ ಸಲ ಮೋದಿ ಮೋದಿ ಅಂದ್ರೆ ಯಾರೂ ವೋಟ್ ಕೊಡಲ್ಲ ಅಂದ್ರು. ಇನ್ನು ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ.

‌ಜನ ಎಚ್ಚರಗೊಂಡಿದ್ದಾರೆ. ಹೀಗಾಗಿ ನಾವು ಜನರಿಗೆ ನ್ಯಾಯ ದೊರಕಿಸಿಕೊಡಲು ಪಕ್ಷವನ್ನು ಬಲವಾಗಿ ಸಂಘಟಿಸಲಿದ್ದೀವಿ ಅಂದ್ರು. ಶೀಘ್ರದಲ್ಲೇ ಜಿಎಸ್ ಟಿ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಜೆಡಿಎಸ್ ಮಾಡಲಿದೆ ಎಂದ್ರು.

See also  ಮೈಸೂರು: ಜಯದೇವ ಆಸ್ಪತ್ರೆಯಲ್ಲಿ 4ನೇ ಕ್ಯಾಥ್‌ಲ್ಯಾಬ್ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು