News Kannada
Friday, September 29 2023
ಮಂಗಳೂರು

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪಕ್ಷದ ವಿರುದ್ಧ ನೆಟ್ಟಿಗರು ಆಕ್ರೋಶ

BJP releases list of 170-180 candidates today, puttur, Sullia, Byndoor MLAs not given tickets
Photo Credit : Facebook Wikimedia

ಸುಳ್ಯ: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಸಂಘ ಪರಿವಾರದ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನಮಗೆ ರಕ್ಷಣೆ ಸಿಗುತ್ತಿಲ್ಲ. ಅಮಾಯಕ ಹಿಂದೂ ಯುವಕರ ಕೊಲೆ ನಿಲ್ಲುತ್ತಿಲ್ಲ’ ಎಂಬುದು ಅವರ ಸಿಟ್ಟಿಗೆ ಕಾರಣವಾಗಿದೆ. ಇದರ ಜೊತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವಕರು ಬಿಜೆಪಿ ಪಕ್ಷದ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.

ದಕ್ಷಿಣ ಕನ್ನಡದ ಸಂಸದರೂ ಆಗಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌, ಸಚಿವ ಎಸ್‌.ಅಂಗಾರ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಪ್ರವೀಣ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಾರಿನಲ್ಲಿ ಬಂದು, ಇಳಿಯಲು ಮುಂದಾದಾಗ ಪಕ್ಷದ ಕಾರ್ಯಕರ್ತರು ತಡೆದು ಆಕ್ರೋಶ ಹೊರಹಾಕಿದರು.

ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಪಕ್ಷದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷ, ಸಿಎಂ, ಗೃಹಸಚಿವರು ರಾಜೀನಾಮೆ ಕೊಟ್ಟರೆ ಒಳಿತು. ಬಿಜೆಪಿಯಲ್ಲಿ ಪಕ್ಷದ ಬಗ್ಗೆ ನಿಷ್ಠೆ ತೋರುವ ಕಾರ್ಯಕರ್ತರಿಗೆ ಭದ್ರತೆಯೇ ಇಲ್ಲ.

ರಾಜ್ಯಾಧ್ಯಕ್ಷರು ನಳಿನ್ ಕುಮಾರ ಕಟೀಲ್ ಪ್ರವೀಣ ನೆಟ್ಟಾರ ಕೊಲೆ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಬಿಜೆಪಿ ಪಕ್ಷದ ನಾಯಕತ್ವ ಷಂಡರ ಆಡಳಿತದಿಂದ ಮುಕ್ತವಾಗಲಿ. ಮಾನ ಮರ್ಯಾದೆ ಇದ್ರೆ ಮೊದ್ಲು ರಾಜೀನಾಮೆ ಕೊಡು ನೀನು ಮತ್ತು ಗೃಹ ಸಚಿವ ಇಬ್ಬರು ಕೊಡಬೇಕು. ನಿಮ್ಮಗಳಿಗೆ ಕಂಡವರ ಮನೆ ಮಕ್ಕಳ ನೋವು ಅರ್ಥ ಆಗಲ್ಲ ಇಂಥ ಸ್ಥಿತಿ ನಿಮ್ಮ ಮನೆ ಮಕ್ಕಳಿಗೆ ಬಂದರೆ ಏನು ಮಾಡ್ತೀರಾ. ಕಿಂಚಿತ್ತಾದರೂ ಸ್ವಾಭಿಮಾನ ಇದ್ರೆ ಇಬ್ರು ರಾಜೀನಾಮೆ ಕೊಡಿ.

ಎಷ್ಟು ಹಿಂದೂ ಹಂತಕರಿಗೆ ಶಿಕ್ಷೆ ಕೊಟ್ಟಿದ್ದಿರಾ, ಮಿಸ್ಟರ್ ನಳೀನ್ ಕಟೀಲ್ ಅವರೆ ನಿಮಗೆಲ್ಲಾ ಯಾಕೆ ಬೇಕು ರಾಜ್ಯಾಧ್ಯಕ್ಷ ಹುದ್ದೆ. ಕಟೀಲು ಸಾಕು ನಿಲ್ಲಿಸಿ ನಿಮ್ಮ ಪಿಟೀಲು,. ಧೈರ್ಯ ಇದ್ದರೆ ಶಂಖ ನಾದ ಮೊಳಗಿಸಿ ಢಮರುಗ ಬಾರಿಸಿ ಇಲ್ಲ ಅಂದರೆ ಈಗಲೇ ವಿಧಾನ ಸಭೆ ವಿಸರ್ಜನೆ ಮಾಡಿ ಚುನಾವಣಾ ಕಣಕ್ಕೆ ಬನ್ನಿ ಆಗ ಗೊತ್ತಾಗುತ್ತದೆ ನಿಮ್ಮ ಯೋಗ್ಯತೆ, ನೀವು ರಾಜಿನಾಮೆ ನೀಡಿ ಚುನಾವಣೆ ಎದುರಿಸಲು ಸಿದ್ಧರಾಗಿ ಆಗ ಗೊತ್ತಾಗುತ್ತದೆ ನಿಮ್ಮ ಮೌಲ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ ನೆಟ್ಟಾರು ಅವರ ಬರ್ಬರ ಕೊಲೆ ಹಿಂದುತ್ವದ ಕೊಲೆಯಾಗಿದೆ, ರಾಜಕೀಯ ದುರುದ್ದೇಶಕ್ಕೆ ಯುವ ಪೀಳಿಗೆ ಬಲಿಯಾಗುತ್ತಿರುವುದು ದುರಂತ, ಬಿಜೆಪಿ ಪಕ್ಷದ ದುರ್ಬಲ ಆಡಳಿತ ವ್ಯವಸ್ಥೆ ಗೆ ಪ್ರವೀಣ ಹತ್ಯೆ ಕೈಗನ್ನಡಿ ಆಗಿದೆ, ಇದಕ್ಕೆ ಹೊಣೆ ಯಾರು?

ಈವಾಗ ತಪ್ಪಿಸಿಕೊಳ್ಳಲಿ, ಮುಂದೊಂದು ದಿನ ವೋಟ್ ಕೇಳಲು ನಮ್ಮ ಮನೆ ಬಾಗಿಲಿಗೆಯೇ ಬರಬೇಕು ಅಲ್ವಾ. ಅವಾಗ  ಉತ್ತರ ಕೊಡುತ್ತೇವೆ. ಬಿಜೆಪಿ ಪಕ್ಷ ನಿಮ್ಮಂತ ಷಂಡರ ಕೈಯಲ್ಲಿದೆ ಇರುವುದೇ ಇದಕ್ಕೆ ಕಾರಣ. ಕೊಲೆಗೆ ಏನಕೌಂಟರ್ ಮಾಡಿಸಿ ಭಯ ಹುಟ್ಟುತ್ತೆ. ಅವರನ್ನು ಜೈಲಲ್ಲಿ ಇಟ್ಟರೆ ಇಂತ ಘಟನೆಗಳು ಆಗುತ್ತಲೇ ಇರುತ್ತವೆ.

See also  ಸರ್ಕಾರಿ ಶಾಲೆಗಳಲ್ಲಿ ಬಿಜೆಪಿ ಪಕ್ಷದ ಹಲವು ನಾಯಕರ ಮಕ್ಕಳು ಓದಿದ್ದಾರೆ: ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಯೋಗಿ ಆದಿತ್ಯನಾಥ್ ರಂತಹ ಎದೆಗಾರಿಕೆಯುಳ್ಳ ಕಠೋರ ಹಿಂದುತ್ವವಾದಿಯ ಅವಶ್ಯಕತೆ ಕರ್ನಾಟಕಕ್ಕೆ ತಕ್ಷಣ ಬೇಕಾಗಿದ್ದಾರೆ
ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು