News Kannada
Wednesday, August 10 2022

ಮಂಗಳೂರು

ಸುರತ್ಕಲ್: ಫಾಝಿಲ್ ಹತ್ಯೆ ಪ್ರಕರಣ ಸಂಬಂಧಿಸಿ ಆರು ಮಂದಿ ಆರೋಪಿಗಳ ಬಂಧನ - 1 min read

Surathkal: Six accused arrested in Fazil murder case

ಸುರತ್ಕಲ್: ಕಳೆದ ವಾರ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಜುಲೈ 28ರ ರಾತ್ರಿ ಫಾಝಿಲ್ ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದ ಪೊಲೀಸರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, “ಫಾಝಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂದು ಬೆಳಗ್ಗೆ ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ. ಅವರು ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ” ಎಂದಿದ್ದಾರೆ.

ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡದಿದ್ದ ಪೊಲೀಸರು, ಇಂದು ಬೆಳಗ್ಗೆ ಪಣಂಬೂರು ಎಸಿಪಿ ಕಚೇರಿಯಲ್ಲಿ ಕಮಿಷನರ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಿದ್ದರು.

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಟಿ:

ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಪಂಗಡಗಳ ಬಗ್ಗೆ ಸುದ್ದಿ ಹರಡಿತ್ತು. ಆದರೆ ಇದು ಅವನ ವೈಯಕ್ತಿಕ ವಿಚಾರಕ್ಕೆ ‌ನಡೆದ ಹತ್ಯೆ ಅಲ್ಲ. ಪ್ರೇಮ ಪ್ರಕರಣ ಅಥವಾ ಒಳಪಂಗಡದ ಗಲಾಟೆಗೆ ನಡೆದ ಹತ್ಯೆ ಅಲ್ಲ. ಪ್ರಕರಣ ನಡೆದ ‌ಬಳಿಕ ಕೆಲ ರೌಡಿಶೀಟರ್ ಗಳು ನಾವೇ ಅಂತ ಹೇಳಿಕೊಂಡು ತಿರುಗಾಡಿದ್ದಾರೆ.ಇವರ ಬಗ್ಗೆ ಮುಂದಿನ ದಿನಗಳಲ್ಲಿ ವಿಚಾರಣೆ ‌ನಡೆಸಲಾಗುವುದು. ಫಾಜಿಲ್ ಹತ್ಯೆಗೂ ಮೊದಲು ಗೆಳೆಯನ ಜೊತೆ ಶಾಪಿಂಗ್ ಮಾಡಿದ್ದಾನೆ. ಸುರತ್ಕಲ್ ನ ಮೊಬೈಲ್ ಶಾಪ್ ಮತ್ತು ಪಕ್ಕದ ಅಂಗಡಿಗೂ ಹೋಗಿದ್ದಾನೆ.

ಫಾಝಿಲ್ ಹತ್ಯೆ ಪ್ರಕರಣದ ಆರು ಜನ ಪ್ರಮುಖ ಆರೋಪಿಗಳನ್ನು ‌ಬಂಧಿಸಿದ್ದೇವೆ. ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್( 29), ಮೋಹನ್(23) ಮತ್ತು ಗಿರೀಶ್(27) ಬಂಧಿತರು.

ಅಜಿತ್ ಕ್ರಾಸ್ತಾ ಎಂಬರಿಗೆ ಸೇರಿದ ಇಯಾನ್ ಕಾರು ಮತ್ತು‌ ಮಾಲೀಕರನ್ನು ವಶಕ್ಕೆ ‌ಪಡೆಯಲಾಗಿದೆ. ಅಜಿತ್ ಗೆ ಘಟನೆ ಬಗ್ಗೆ ಗೊತ್ತಿದ್ದರೂ ಅವರಿಗೆ ಕಾರು ಕೊಟ್ಟಿದ್ದಾರೆ. ಮೂರು ದಿನಕ್ಕೆ 15 ಸಾವಿರ ಕೊಡೋ ಭರವಸೆ ಕೊಟ್ಟಿದ್ದರು. ಅಜಿತ್ ಹಣದ ಆಸೆಗೆ ಕಾರು ಗುರುತು ಮರೆಮಾಚಲು ಹೇಳಿ ಕಾರು ಕೊಟ್ಟಿದ್ದಾರೆ ಎಂದರು.

 

See also  ಮಂಗಳೂರು: ಕಾನೂನು ಚೌಕಟ್ಟುಗಳಡಿ ಪ್ರವೀಣ್‌ ಹತ್ಯೆಯ ಕಾರ್ಯಾಚರಣೆ ನಡೆಯಲಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು