News Kannada
Thursday, August 11 2022

ಮಂಗಳೂರು

ಮಂಗಳೂರು: ಭಾ.ಜ.ಪ ದ ಹಿಂದೂ ವಿರೋಧಿ ನೀತಿ ಹಿಂದುಗಳ ಹತ್ಯೆಗೆ ಕಾರಣ ಎಂದ ಹಿಂದೂ ಮಹಾಸಭಾ - 1 min read

Mangaluru: Hindu Mahasabha blames BJP's anti-Hindu policies for killing Hindus

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಜಿಹಾದಿಗಳ ಕೌರ್ಯಕ್ಕೆ ಬಲಿಯಾದ ಹಿಂದೂ ಸಮುದಾಯದ ಪ್ರವೀಣ್ ನೆಟ್ಟಾರು ರವರ ಹತ್ಯೆಗೆ ಹಿಂದೂ ಮಹಾಸಭಾ ತೀವ್ರ ಕಳವಳವನ್ನು ಆತಂಕವನ್ನು ವ್ಯಕ್ತಪಡಿಸುತ್ತಿದ್ದು, ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ರಾಜ್ಯ ಸರಕಾರ, ತನ್ನದೇ ಆದ ಕಾರ್ಯಕರ್ತರಿಗೆ ರಕ್ಷಣೆಯನ್ನು ಕೊಡಲು ಅಸಾಧ್ಯವಾದರೆ, ನಾಡಿನ ರಕ್ಷಣೆ ಹೇಗೆ ಮಾಡಿಯಾರು? ಹಾಗೂ ರಾಜ್ಯದ ಬಹುಸಂಖ್ಯಾತ ಹಿಂದುಗಳ ರಕ್ಷಣೆ ಮಾಡುವವರು ಯಾರು? ಎಂದು  ಮಹಾಸಭಾ ಪ್ರಶ್ನಿಸುತ್ತಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತರ ಸಾವಿನ ತನಿಖೆ ಹಾಗೂ ನ್ಯಾಯ ಒವಗಿಸುವ ಬಗ್ಗೆ ಬಡಾಯಿ ಕೊಚ್ಚಿದ್ದ ಭಾರತೀಯ ಜನತಾ ಪಕ್ಷ ರಾಜ್ಯದ ಹಿಂದುಗಳಿಗೆ ಮೋಸವನ್ನು ಮಾಡಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಎಸ್ ಡಿ ಪಿ ಐ ಮತ್ತು PFI ಸಂಘಟನೆಗಳನ್ನ ನಿಷೇದಿಸುವಂತೆ ಚೀರಾಡಿ, ಈಗ ಸ್ವತಃ ತಾವು ಗೆದ್ದು ಮತಾಂದ ಸಂಘಟನೆಗಳನ್ನು ನಿಷೇಧಿಸದೆ ದಿವ್ಯ ಮೌನ ವಹಿಸಿರುವುದನ್ನು ನೋಡಿ ರಾಜ್ಯದ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ವೀರ್ಯತೆಯಿಂದ ಕೂಡಿರುವುದೇ, ಇಂತಹ ಸಂಘಟನೆಗಳನ್ನು ನಿಷೇಧಿಸದಿರುವುದಕ್ಕೆ ಕಾರಣ ಆದ್ದರಿಂದ, ದೇಶದೆಲ್ಲೆಡೆ ಹಿಂದೂ ಕಾರ್ಯಕರ್ತರ ಮಾರಣಹೋಮ ನಡೆಯುತ್ತಿದೆ.

ರಾಜ್ಯದಲ್ಲಿ ಅಂದು ಹರ್ಷರವರು ಹಾಗೂ ಇಂದು ಪ್ರವೀಣ್ ರವರ ಹತ್ಯೆ ನಡೆದುಹೋಗಿದೆ, ಭಾರತೀಯ ಜನತಾ ಪಕ್ಷ ತನ್ನ ಸ್ವಲಾಭಕ್ಕೆ ಬೆಳೆಸಿದ ಮತಾಂಧ ಶಕ್ತಿಗಳು ಇಂದು ಕೊಬ್ಬಿ ಗರ್ಜಿಸುತ್ತಿದ್ದರೂ, ಅಸಹಾಯಕರಾಗಿ ಏನು ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರವನ್ನು ನೋಡಿ ರಾಜ್ಯದ ಬಹು ಸಂಖ್ಯಾತ ಹಿಂದುಗಳು ಅಸಹ್ಯ ಪಡುತ್ತಿದ್ದಾರೆ.

ಆದ್ದರಿಂದ, ನಾಡಿನ ಸಮಸ್ತ ಹಿಂದೂ ಸಮುದಾಯಕ್ಕೆ ಹಿಂದು ಮಹಾಸಭಾ ಸ್ವಾತಂತ್ರ ಪೂರ್ವದಲ್ಲಿ ದೇಶ ರಕ್ಷಣೆ ಗೆ ಪರಕೀಯರ ವಿರುದ್ಧ ಕರೆಯನ್ನು ಕೊಟ್ಟಿತ್ತು, ಈಗ ಬರುವಂತಹ ಎಲ್ಲಾ ಸ್ಥಳೀಯ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಹಿಂದುಗಳಿಗೆ ದ್ರೋಹವೆಸಗಿದ ಭಾರತೀಯ ಜನತಾ ಪಕ್ಷದ ಸರಕಾರವನ್ನು ಕಿತ್ತೊಗೆದು, ಹಿಂದುಗಳ ಪಕ್ಷವಾದ ಹಿಂದೂ ಮಹಾಸಭಾವನ್ನು ಗೆಲ್ಲಿಸಿ, ಹಿಂದೂಗಳನ್ನು ಕಣಕಿದರೆ ಪರಿಣಾಮ ಏನಾದಿತು ಎಂದು ಮೋಸವೆಸಗಿದವರಿಗೆ ಪಾಠ ಕಲಿಸಬೇಕಾಗಿ ಕರೆಯನ್ನು ಕೊಡುತ್ತದೆ ಎಂದು ಹಿಂದೂ ಮಹಾ ಸಭಾದ ರಾಜ್ಯಾದ್ಯಕ್ಷ ರಾಜೇಶ್ ಪವಿತ್ರನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಧರ್ಮೆಂದ್ರ, ಹರ್ಷನಾಯಕ್ ಉಪಸ್ಥಿತರಿದ್ದರು.

See also  ಕುದ್ರೋಳಿ ಗಣೇಶ್ ರಿಗೆ ಜೆಸಿಐ ಕಮಲ ಪತ್ರ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು