News Kannada
Wednesday, November 29 2023
ಮಂಗಳೂರು

ಬೆಳ್ತಂಗಡಿ: ತುಳು ಶಿವಳ್ಳಿ ಸಭಾ ವತಿಯಿಂದ ವಿವಿಧ ವಲಯಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ

Belthangady: Tulu Shivalli Sabha held consultation meeting with office bearers of various sectors
Photo Credit :

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಕನ್ಯಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಭಾಭವನದ ಲೋಕಾರ್ಪಣ ಕಾರ್ಯಕ್ರಮದ ಕುರಿತು ವಿವಿಧ ವಲಯದ ಪದಾಧಿಕಾರಿಗಳ ಸಮಾಲೋಚನಾ ಸಭೆಯು ಆ.28 ರಂದು ಕನ್ಯಾಡಿಯಲ್ಲಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ದೈವಜ್ಞರ ಸಲಹೆ ಹಾಗು ಪದಾಧಿಕಾರಿಗಳ ಒಮ್ಮತದ ಅಭಿಪ್ರಾಯದ ಮೇರೆಗೆ ನೂತನ ಸಭಾಭವನವನ್ನು ಅ 27 ಮತ್ತು 28 ರಂದು ವಿವಿಧ ಧಾರ್ಮಿಕ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸರಳವಾಗಿ ನಡೆಸಲು ನಿರ್ಣಯಿಸಲಾಯಿತು. ಕೋಶಾಧಿಕಾರಿ ಗಿರೀಶ್ ಕುದ್ರೆನ್ತಯ ಪರವಾಗಿ ಭಾಸ್ಕರ ರಾವ್ ಸಭಾಭವನದ ಇದುವರೆಗಿನ ಖರ್ಚು ವೆಚ್ಚಗಳ ಲೆಕ್ಕಪತ್ರ ಮಂಡಿಸಿ ರೂ 1. 42 ಕೋಟಿ ಒಟ್ಟು ಖರ್ಚಾಗಿದ್ದು ಎಲ್ಲ ವಲಯ ಹಾಗೂ ದಾನಿಗಳಿಂದ ರೂ 1. 06ಕೋಟಿ ಸಂಗ್ರಹವಾಗಿದ್ದು,ಇನ್ನೂ ಸುಮಾರು ರೂ 40 ಲಕ್ಷ ಅಗತ್ಯವಿರುತ್ತದೆ ಎಂದರು.

ಅ 27 ರಂದು ಸಂಜೆ ವಾಸ್ತು,ರಾಕ್ಷೋಘ್ನ ಮತ್ತು ಸುದರ್ಶನ ಹವನ ಮತ್ತು ಆ. 28 ರಂದು ಬೆಳಿಗ್ಗೆ ಗಣಹೋಮ , ಆಶ್ಲೇಷ ಬಲಿ ಹಾಗೂ ಚಂಡಿಕಾ ಹೋಮ ನಡೆಸಿ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಸಿ,ಮದ್ಯಾಹ್ನ 2 ರಿಂದ ಮಹಿಳಾ ಘಟಕದ ವಿವಿಧ ವಲಯಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಅನುಕೂಲವಾಗುವಂತೆ ವಿವಿಧ ಸಮಿತಿಗಳನ್ನು ರಚಿಸಿ ಸಂಚಾಲಕರು,ಸಹಸಂಚಾಲಕರು ಮತ್ತು ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು .

ವಿವಿಧ ಸಮಿತಿಗಳ ಪ್ರಧಾನ ಸಂಚಾಲಕರುಗಳಾಗಿ ರಾಮಕೃಷ್ಣ ಕಲ್ಲೂರಾಯ ಧರ್ಮಸ್ಥಳ.(ವೈದಿಕ ಸಮಿತಿ ), ಪರಾರಿ ವೆಂಕಟ್ರಮಣ ಹೆಬ್ಬಾರ್(ವ್ಯವಸ್ಥಾಪನಾ ಸಮಿತಿ ), ಶರತ್ ಕೃಷ್ಣ ಪಡುವೆಟ್ನಾಯ . ಉಜಿರೆ (ಸ್ವಾಗತ ಸಮಿತಿ), ಗಿರೀಶ ಕುದ್ರೆಂತ್ತಾಯ ಧರ್ಮಸ್ಥಳ.(ಆರ್ಥಿಕ ಸಮಿತಿ ), ಮುರಳೀಕೃಷ್ಣ ಆಚಾರ್ಯ ಉಜಿರೆ.(ವೇದಿಕೆ ಸಮಿತಿ ), ಸ್ವರ್ಣ ಶ್ರೀರಂಗ ನೂರಿತ್ತಾಯ ಉಜಿರೆ. (ಸಾಂಸ್ಕೃತಿಕ ಸಮಿತಿ ) , ಸುಬ್ರಹ್ಮಣ್ಯ ಬೈಪಡಿತ್ತಾಯ ಉಜಿರೆ.(ಆಹಾರ ಸಮಿತಿ), ಶ್ರೀಶ ಮುಚ್ಚಿನ್ನಾಯ ಬೆಳ್ತಂಗಡಿ. (ಸ್ವಯಂಸೇವಕ ಸಮಿತಿ), ಸಾಂತೂರು ಶ್ರೀನಿವಾಸ ತಂತ್ರಿ. ಉಜಿರೆ. (ಪ್ರಚಾರ,ಮಾಧ್ಯಮ ಸಮಿತಿ ) ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭಾಭವನದ ಉದ್ಘಾಟನೆಗೆ ಪರಮಪೂಜ್ಯ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಮುಖ್ಯ ಅತಿಥಿಗಳಾಗಿ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರನ್ನು ಆಮಂತ್ರಿಸಲು ನಿರ್ಧರಿಸಲಾಯಿತು . ಅಂತೆಯೇ ಶ್ರೀ ಅಯ್ಯಪ್ಪ ಹಾಗೂ ಪರಿವಾರ ದೇವರ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳನ್ನು ಮುಂದಿನ ಜನವರಿ ತಿಂಗಳ 26 ಮತ್ತು 27 ಕ್ಕೆ ನೆರವೇರಿಸಲು ದೈವಜ್ಞರ ಸೂಚನೆಯಂತೆ ನಿರ್ಣಯಿಸಲಾಯಿತು . ಸಮಿತಿಗಳ ಮುಂದಿನ ಕಾರ್ಯಯೋಜನೆಗಳ ಪ್ರಗತಿಯ ಕುರಿತು ಪ್ರತಿ ತಿಂಗಳು ಕಾರ್ಯಕಾರಿಣಿ ಸಭೆ ನಡೆಸಲು ಹಾಗೂ ಮುಂದಿನ ವಾರದಲ್ಲಿ ವಿವಿಧ ಸಮಿತಿಗಳ ಸಂಚಾಲಕರ ಸಭೆ ನಡೆಸುವುದೆಂದೂ ನಿರ್ಧರಿಸಿ,ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅವರು ಸರ್ವರ ಸಹಕಾರ ಕೋರಿದರು.

See also  ಲಾಯಿಲ, ಧರ್ಮಸ್ಥಳ, ಉಜಿರೆ, ಜಿಲ್ಲಾ ಪಂಚಾಯತ್ ಕ್ಷೇತ್ರವಾರು  ಸಂವಾದ ಸಭೆ

ವೇದಿಕೆಯಲ್ಲಿ ತಾಲೂಕು ಉಪಾಧ್ಯಕ್ಷ ನಾಗೇಶ್ ರಾವ್ ಮುಂಡ್ರು ಪ್ಪಾಡಿ,ಕಾರ್ಯ ದರ್ಶಿ ರಾಜಪ್ರಸಾದ್ ಪೊಲ್ನಾಯ ,ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ಪರಾರಿ ವೆಂಕಟ್ರಮಣ ಹೆಬ್ಬಾರ್, ಮಹಿಳಾ ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ, ಶೋಭಾ ಸುರೇಶ ಉಪಸ್ಥಿತರಿದ್ದರು. ಕಟ್ಟಡ ಸಮಿತಿ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ,ಪ್ರಸ್ತಾವಿಸಿದರು. ರಾಜಪ್ರಸಾದ್ ಪೊಲ್ನಾಯ ವಂದಿಸಿದರು. ತಾಲೂಕಿನ ಸದಸ್ಯರು ವಿಚಾರ ವಿನಿಮಯ ನಡೆಸಿ ಅಭಿಪ್ರಾಯ ಮಂಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು