ಮಂಗಳೂರು: ಮಧ್ಯಾಹ್ನ ವೇಳೆ ಸಮಾವೇಶಕ್ಕೆ ಬರಲೆಂದು ಗೋಲ್ಡ್ ಫಿಂಚ್ ಸಿಟಿ ದ್ವಾರದ ಬಳಿ ಬಿ ಆರ್ ಶೆಟ್ಟಿ ಬರುತ್ತಿದ್ದಂತೆ ಅವರ ಪರಿಚಯ ತಿಳಿಯದ ಪೋಲಿಸರು ಅವರನ್ನು ದ್ವಾರದ ಬಳಿ ತಡೆದು ಹಿಂದಕ್ಕೆ ಕಳುಹಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಬಿ ಆರ್ ಶೆಟ್ಟಿ ಅವರನ್ನು ಗಮನಿಸಿ ಸಮಾವೇಶದ ಸ್ಥಳಕ್ಕೆ ಬಿಡಲು ಪೊಲೀಸರನ್ನು ಕೇಳಿಕೊಂಡರು .
ಈ ವೇಳೆ ಸ್ಥಳದಲ್ಲಿದ್ದ ಕೆಲ ಕಾರ್ಯಕರ್ತರು ಪ್ರಧಾನಿ ಮೋದಿಯನ್ನು ದುಬೈಗೆ ಕರೆಸಿಕೊಂಡಿದ್ದು ಇವರೇ ಅವರನ್ನು ಒಳಗೆ ಬಿಡಿ ಎಂದು ವಿನಂತಿಸಿಕೊಂಡರು ,ಆದರೂ ಬಿಡದ ಪೊಲೀಸರು ಪ್ರವೇಶ ನೀಡಲು ನಿರಾಕರಿಸಿದರು.
ಇದನ್ನು ಗಮನಿಸಿದ ಬಿಜೆಪಿ ನಾಯಕರೋರ್ವರು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಗಣ್ಯರ ಗ್ಯಾಲರಿಗೆ ತೆರಳಲು ಅನುವು ಮಾಡಿಕೊಟ್ಟರು .ನಂತರ ಪ್ರೇಕ್ಷಕರ ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.