ಮಂಗಳೂರು: ರೈಲು ಹಳಿಗೆ ಕಬ್ಬಿಣದ ತುಂಡು ಇಟ್ಟ ಪ್ರಕರಣ ತಮಿಳುನಾಡು ಮೂಲದ ಮಹಿಳೆ ಬಂಧನ.
ರೈಲು ಹಳಿಯಲ್ಲಿ ಕಾಂಕ್ರೀಟ್ ತುಂಡುಗಳು ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಮೂಲದ ಮಹಿಳೆಯನ್ನು ರೈಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವಿಲ್ಲುಪುರ ಮೂಲದ ಕನಕವಲ್ಲಿ ಬಂದಿತೆ.
ಈಕೆ ಗುಜುರಿ ಹೆಕ್ಕುವ ಕಾಯಕ ನಡೆಸುತ್ತಿದ್ದು ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳಿನಿಂದ ಸಿಮೆಂಟ್ ಬೇರ್ಪಡಿ ಸುವ ಉದ್ದೇಶದಿಂದ ರೈಲು ಹಳಿಯಲ್ಲಿ ಇಟ್ಟಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .
ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿದರುವುದನ್ನು ಒಪ್ಪಿಕೊಂಡಿದ್ದಾಳೆ.
ಆಗಸ್ಟ್21 ರಂದು ಕಾಸರಗೋಡು ಕಾಂಞಂಗಾಡ್ ಮಧ್ಯೆ ಹಾದುಹೋಗುವ ಹಳ್ಳಿಗಳಲ್ಲಿ ಕೋಟಿಕುಳಂ ಬೇಕಲ ನಡುವೆ ಈ ದುಷ್ಕೃತ್ಯ ನಡೆಸಲಾಗಿತ್ತು. ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು ಬೀಮ್ ಕಂಡುಬಂದಿತ್ತು ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು ಆಕೆಯ ವಿರುದ್ಧ ಗಂಭೀರ ಆರೋಪ ಹೊರಿಸಿದರೂ ಆಕೆ ಕನಿಷ್ಠ 3ವರ್ಷಗಳ ಕಠಿಣ ಜೈಲು ಶಿಕ್ಷೆಯಾಗಬಹುದು . ಕನಕವಲ್ಲಿ ಅವರ ಉದ್ದೇಶಗಳು ದುರುದ್ದೇಶದಿಂದ ಕೂಡಿರಲಿಲ್ಲ ಎಂದು ಹೇಳುತ್ತಾರೆ .
ಇದು ವಿಧ್ವಂಸಕ ಯತ್ನವಲ್ಲ ಆದರೆ ಕನಗವಲ್ಲಿ ಅವರು ಮುಗ್ಧ ಮನಸ್ಸಿನಿಂದ ವೇಗವಾಗಿ ಬರುವ ರೈಲನ್ನು ಬಳಸಿ ಲೋಹದ ತುಂಡನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಬೇಕಲ ಠಾಣಾ ಅಧಿಕಾರಿ ವಿಪಿನ್ ಯುಪಿ ಹೇಳಿದ್ದಾರೆ.
ಕೇವಲ ಎರಡನೇ ತರಗತಿಯವರೆಗೆ ಓದಿರುವ ಕನಗವಲ್ಲಿ 5ವರ್ಷದ ಬಾಲಕನ ತಾಯಿಯಾಗಿದ್ದು ಗುಜುರಿ ಹೆಕ್ಕುವ ಕೆಲಸ ಮಾಡುತ್ತಿದ್ದಾರೆ . ಕಾಂಕ್ರಿಟ್ ಬೇಸ್ ಕತ್ತರಿಸಿ ಸಾವಿರ ರೂಪಾಯಿ ಮೌಲ್ಯದ ಲೋಹದ ತುಂಡನ್ನು ಮನೆಗೆ ತೆಗೆದುಕೊಂಡು ಹೋಗುವುದು ಅವಳ ಮನಸ್ಸಿನಲ್ಲಿತ್ತು ಎನ್ನಲಾಗಿದೆ.