ಬೆಳ್ತಂಗಡಿ: ಕೆಟ್ಟ ಆಲೋಚನೆಗಳನ್ನು ಹೋಗಲಾಡಿಸುವ ದೇವಸ್ವರೂಪಿಗಳ ಗೌರವಿಸುವ ದಿನವೇ ಶಿಕ್ಷಕರ ದಿನಾಚರಣೆ ಎಂದು ಶಾಸಕ ಹರೀಶ್ ಪೂಂಜ ಬಣ್ಣಿಸಿದರು.
ಬೆಳ್ತಂಗಡಿ ಶಿಕ್ಷಕರ ದಿನಾಚರಣೆ ಸಮಿತಿ, ತಾ.ಪಂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ.ಪಂ. ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಸೆ.5 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಸ್ವಾಮಿ ಕಲಾ ಭವನದಲ್ಲಿ ಹಮ್ಮಿಕೊಂಡ ಡಾ| ಸರ್ವಪಲ್ಲಿ ರಾಧಾ ಕೃಷ್ಣನ್‌ರವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮುಗ್ದ ಮನಸ್ಸುಗಳಲ್ಲಿ ಅಕ್ಷರವ ಬಿತ್ತಿ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಕಣ್ಣಿಗೆ ಕಾಣದ ದೇವರಿದ್ದರೆ ಅದು ಶಿಕ್ಷಕರು ಎಂದರು.
ಅಪಾರ ಸೇವಾ ಮನೋಭಾವದೊಂದಿಗೆ ಅದ್ಭುತ ಸಮಾಜ ರೂಪಿಸುವಲ್ಲಿ ಶಿಕ್ಷಕರು ಶಿಲ್ಪಿಗಳಾಗಿ ಅಕ್ಷರ ಕಲಿಸುವ ಬ್ರಹ್ಮ, ವಿಷ್ಣುವಿನ ರೂಪದಲ್ಲಿ ಜ್ಞಾನ, ಮಹೇಶ್ವರರ ರೂಪದಲ್ಲಿ ಕೆಟ್ಟ ಆಲೋಚನೆಗಳನ್ನು ಹೋಗಲಾಡಿಸುವ ದೇವಸ್ವರೂಪಿಗಳ ದಿನವೇ ಶಿಕ್ಷಕರ ದಿನಾಚರಣೆ ಎಂದು ಬಣ್ಣಿಸಿದರು.
ಉಜಿರೆ ಶ್ರೀ ಧ.ವಸತಿ ಪ.ಪೂ. ಕಾಲೇಜು ಪ್ರಾಚಾರ್ಯ ಡಾ| ಕೃಷ್ಣಮೂರ್ತಿ ಟಿ. ದಿಕ್ಸೂಚಿ ಭಾಷಣ ಮಾಡಿ, ಕ್ಷೇತ್ರ ಸಮನ್ವಯಾಧಿಕಾರಿ ಶಂಭುಶಂಕರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರುಗಳ ಸಂಘದ ಅಧ್ಯಕ್ಷ ವೆಂಕಟೇಶ ತುಳಪುಳೆ, ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ರಮೇಶ್ ಮಯ್ಯ, ಶಿ.ದಿ.ಸಮಿತಿ ನೋಡೆಲ್ ಹಾಗೂ ಕ್ಷೇತ್ರ ಸಮನ್ವಯಧಿಕಾರಿ ಸುಭಾಷ್ ಜಾದವ್, ಪ್ರೌ.ಶಾಲೆ ದೈ.ಶಿ.ಶಿ ಸಂಘ ಅಧ್ಯಕ್ಷ ಕೃಷ್ಣಾನಂದ ರಾವ್, ಪ್ರಾ.ಶಾಲೆ ದೈ.ಶಿ.ಶಿ. ಸಂಘ ಅಧ್ಯಕ್ಷ ಜಯರಾಜ್ ಜೈನ್, ಪ್ರಾ.ಶಾಲಾ ಶಿ. ಸಂಘದ ಅಧ್ಯಕ್ಷ ಕಿಶೋರ್, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ್ ಉಪಸ್ಥಿತರಿದ್ದರು.
ಅಗಲಿದ ಡಾ| ಬಿ. ಯಶೋವರ್ಮದವರಿಗೆ ಹಾಗೂ ವೃತ್ತಿಯಲ್ಲಿರುವಾಗಲೇ ಅಗಲಿದ ಶಿಕ್ಷಕರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಿ.ರಾಜಶೇಖರ ಅಜ್ರಿಯವರಿಂದ ಅವರ ಮಾತಾಪಿತರಾದ ದಿ| ಲಾಲಚಂದ್ರ ಹೆಗ್ಡೆ, ದಿ. ರಾಜಾವತಿಯಮ್ಮ ಹಾಗೂ ಪತ್ನಿ ದಿ। ಭಾರತಿಯವರ ಸಂಸ್ಕರಣೆಯಲ್ಲಿ ದತ್ತಿ ನಿಧಿ ಸಮರ್ಪಣೆ ನಡೆಯಿತು.
2021-22 ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು ಗೌರವಿಸಲಾಯಿತು. ವಿಶೇಷ ಚೇತನರಾಗಿದ್ದು ಕಳೆದ ಎಸೆಸೆಲ್ಸಿಯಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಎಸೆಸೆಲ್ಸಿಯಲ್ಲಿ 625 ಪೂರ್ಣಂಕ ಪಡೆದ 5 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಶಿಕ್ಷರುಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತೆ ಶಿಕ್ಷಕರುಗಳಿಗೆ ಬಹುಮಾನ ವಿತರಿಸಲಾಯಿತು.
ಸ್ವಾಭಿಮಾನಿ ಸಾರ್ವಜನಿಕ ಶಾಲೆ ರಾಜ್ಯದಲ್ಲಿ ಆಯ್ಕೆ ಮಾಡುವ ಪ್ರಸ್ತಾವನೆ ಸಲ್ಲಿಸಲಾಯಿತು.
ಶಿ ದಿ.ಸಮಿತಿ ಅಧ್ಯಕ್ಷ ಹಾಗೂ ತಾ.ಪಂ. ಇ.ಒ. ಕುಸುಮಾಧರ್ ಬಿ. ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಪ್ರಾಸ್ತಾಪಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ ಅವರು ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ವಿ.ಪ.ಸದಸ್ಯ ಎಸ್.ಎಲ್.ಭೋಜೆ ಗೌಡ ಅವರ ಸಂದೇಶ ವಾಚಿಸಿದರು. ನಿವೃತ್ತ ಶಿಕ್ಷಕರುಗಳ ಪರವಾಗಿ ಯಶೋಧರ ಸುವರ್ಣ, ಮೋನಪ್ಪ ಕೆ., ಅನಿಸಿಕೆ ವ್ಯಕ್ತಪಡಿಸಿದರು. ಗೇರುಕಟ್ಟೆ ಸ.ಪ್ರೌ.ಶಾಲೆ ದೈ.ಶಿ.ಶಿ. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಸಿ.ಆರ್.ಪಿ. ರಾಜೇಶ್ ಮತ್ತು ರಮೇಶ್, ಬಿ.ಐ.ಇ.ಆರ್.ಟಿ. ಜಗದೀಶ್, ದೈ.ಶಿ.ಶಿ. ಸಂಘ ಗ್ರೇಡ್-2 ಅಧ್ಯಕ್ಷ ರವಿರಾಜ ಗೌಡ, ಲೋಕೇಶ್ ಕುಂಟಿನಿ ಸಹಕರಿಸಿದರು.
ಸಮ್ಮಾನ
202-22 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಟ್ಟದಬೈಲು ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಎಡ್ವರ್ಡ್ ಡಿಸೋಜ, ದ.ಕ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬೊಳ್ಳುಕಲ್ಲು ಸ.ಹಿ.ಪ್ರಾ.ಶಾಲೆ ಸಹಶಿಕ್ಷಕ ಪಿ.ಶಿವಾನಂದ ಭಂಡಾರಿ, ಬಂಗಾಡಿ ಸ.ಹಿ.ಪ್ರಾ.ಶಾಲೆ ಸಹಶಿಕ್ಷಕ ಅಮಿತಾನಂದ ಹೆಗ್ಡೆ, ಗೇರುಕಟ್ಟೆ ಸ.ಪ್ರೌಢ ಶಾಲೆ ದೈ.ಶಿ.ಶಿಕ್ಷಕ ಅಜಿತ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಇದೇ ವೇಳೆ ನಿವೃತ್ತ 27 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.