ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘವು 2021-22 ಸಾಲಿನಲ್ಲಿ 183 ಕೋಟಿ ರೂ. ವ್ಯವಹಾರ ನಡೆಸಿದ್ದು, 30.05 ಕೋಟಿ ರೂ ಸಾಲ ನೀಡಿದೆ. 25.75 ಕೋಟಿ ರೂ ಸಾಲ ಮರುಪಾವತಿ ಆಗಿದ್ದು, 27.86 ಕೋಟಿ ರೂ ಸದಸ್ಯರಿಂದ ಸಾಲ ಬರಬೇಕಾಗಿದ್ದು, ಪ್ರಸಕ್ತ ವರ್ಷದಲ್ಲಿ 3921791 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಬಿ.ಅವರು ತಿಳಿಸಿದರು.
ಅವರು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆ ಯಲ್ಲಿ ಮಾತನಾಡಿದರು. ಪೈಪೋಟಿಯ ಮಾರುಕಟ್ಟೆಯಲ್ಲಿ ತಮ್ಮದೇ ರೀತಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ, ಬ್ಯಾಂಕ್ ಅಭಿವೃದ್ಧಿಗೆ ನೌಕರರು ಹಾಗೂ ಸದಸ್ಯರ ಕೊಡುಗೆ ಅಪಾರ, ಮುಂದಿನ ದಿನಗಳಲ್ಲಿ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲು ಗ್ರಾಹಕರು ಹಾಗೂ ಸದಸ್ಯರು ಸಹಕಾರ ನೀಡಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕ ರುಗಳಾದ ಎಂ ಮಹಾಬಲ ಶೆಟ್ಟಿ, ರಾಮಚಂದ್ರ ಗೌಡ, ವಿಠಲ ಪೂಜಾರಿ ಪುಂಡಿಬೈಲು, ವಿದ್ಯಾವತಿ ಪ್ರಮೋದ್ ಕುಮಾರ್, ಎ.ಲಕ್ಮೀ ವಿ.ಪ್ರಭು, ಎಂ.ಕರುಣೇಂದ್ರ, ಹರೀಶ್, ಮನೋಹರ ಕೆ.ಎಸ್.ಶೇಖರ್, ಕೆ.ಪ್ರಕಾಶ್, ಬಿ.ಸದಾಶಿವ ಶೆಣೈ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಸ್ವಾಗತಿಸಿ, ಉಪಾಧ್ಯಕ್ಷ ಕೆ.ಭವಾನಿ ಶಂಕರ್ ವಂದಿಸಿದರು.