ಮಂಗಳೂರು: ಹೆಸರಾಂತ ಚಿನ್ನಾಭರಣ ಮಳಿಗೆ ಆಗಿರುವ ಮುಳಿಯ ಜುವೆಲ್ಸ್ ವತಿಯಿಂದ ನಗರದ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮಂಡ್ ಆಭರಣ ಪ್ರದರ್ಶನದ ಅಂಗವಾಗಿ ಮಹಿಳೆಯರು ಫ್ಯಾಷನ್ ಶೋವನ್ನ ನಡೆಸಿಕೊಟ್ಟರು.
ಫ್ಯಾಷನ್ ಶೋನಲ್ಲಿ ಮುಳಿಯ ಜುವೆಲ್ಸ್ ನ ವಿವಿಧ ಶೈಲಿಯ ಚಿನ್ನಾಭರಣಗಳನ್ನ ಹಾಕಿಕೊಂಡು ಸಖತ್ ಆಗಿ ಮಿಂಚುತ್ತಿದ್ರು. ತಮ್ಮದೇ ಸ್ಟೈಲ್‌ಲ್ಲಿ ವಾಕ್ ಮಾಡಿದ ಮಾಡೆಲ್‌ಗಳು ಎಲ್ಲರ ಗಮನ ಸೆಳೆದ್ರು.
ಇನ್ನು ಕಲರ್‌ಫುಲ್ ಬಟ್ಟೆ ಧರಿಸಿದ್ದ ಮಾಡೆಲ್‌ಗಳು ಮನಮೋಹಕ ಚಿನ್ನಾಭರಣ ತೊಟ್ಟು ಹೆಜ್ಜೆ ಹಾಕಿದ್ದು ನೋಡುಗರನ್ನ ಮಂತ್ರ ಮುಗ್ಧಗೊಳಿಸಿದ್ರು.
ಈ ವೇಳೆ ಮುಳಿಯ ಸಂಸ್ಥೆ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್, ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ್, ಕಿಸ್ನ ಡೈಮಂಡ್ ಚಾನೆಲ್ ನ ಪಾಲುದಾರರಾದ ಪ್ರಕಾಶ್ ಸಿಂಥ್ರೆ, ಇಷಾ ಮುಳಿಯ, ಸಲಹೆಗಾರ ವೇಣುಶರ್ಮ, ನಾಮದೇವ ಮಲ್ಯ, ಸಂಜೀವ ಸೇರಿದಂತೆ ಈ ವೇಳೆ ಉಪಸ್ಥಿತರಿದ್ದರು.
ಸೆ.8ರಿಂದ 11ರತನಕ ಮುಳಿಯ ಜುವೆಲ್ಸ್ ಚಿನ್ನಾಭರಣ ಹಾಗೂ ಡೈಮಂಡ್ ಪ್ರದರ್ಶನ, ಮಾರಾಟ ನಡೆಯಲಿದೆ.