News Kannada
Sunday, September 25 2022

ಮಂಗಳೂರು

ಬಂಟ್ವಾಳ: “ಆಶಾಕಿರಣ ಇಸ್ರೇಲ್” ಫ್ರೆಂಡ್ಸ್ ಗ್ರೂಪ್ ನ ವತಿಯಿಂದ ಬಡ ಕುಟುಂಬಕ್ಕೆ ಆರ್ಥಿಕ ನೆರವು - 1 min read

Bantwal: "Asha Kirana Israel" Friends Group provides financial assistance to a poor family
Photo Credit : By Author

ಬಂಟ್ವಾಳ: “ಆಶಾಕಿರಣ ಇಸ್ರೇಲ್” ಫ್ರೆಂಡ್ಸ್ ಗ್ರೂಪ್ ನ ವತಿಯಿಂದ ತಾಲೂಕಿನ ಮೂರು ಬಡ ಕುಟುಂಬಕ್ಕೆ ನೀಡಿದ ಆರ್ಥಿಕ ನೆರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸರ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.

ಬೆನ್ನು ನೋವಿನಿಂದ ಬಳುತ್ತಿರುವ ಸಜೀಪ ಮುನ್ನೂರು ಗ್ರಾಮದ ದಳಂದಿಲ ಕೃಷ್ಣ ಪೂಜಾರಿ, ಕ್ಯಾನ್ಸರ್ ನಿಂದ ಸಾವನ್ನಪ್ಪಿದ ನರಿಕೊಂಬು ಗ್ರಾಮದ ಶಂಭೂರು ಕೊಪ್ಪಳ ನಿವಾಸಿ ಶೇಖರ ಅವರ ಪತ್ನಿ ವಾರಿಜ , ವೀರಕಂಭ ಗ್ರಾಮದ ಕಂಪದಬೈಲು ನಿವಾಸಿ ಮಮತಾ ಅವರ ಪುತ್ರಿ ಅಂಗವಿಕಲ ಬಾಲಕಿ ಮಹಾಲಕ್ಷ್ಮಿ ಅವರಿಗೆ ಆರ್ಥಿಕ ನೆರವು ನೀಡಲಾಯಿತು.

ಇಸ್ರೇಲ್ ದೇಶದಲ್ಲಿ ದುಡಿಯುವ ಕರಾವಳಿಯ ಕನ್ನಡಿಗರ “ಆಶಾಕಿರಣ ಇಸ್ರೇಲ್ ” ಗ್ರೂಪ್ ನ ಮೂಲಕ ತವರೂರ ಬಡಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದೆ. “ಆಶಾಕಿರಣ ಇಸ್ರೇಲ್” ಇಸ್ರೇಲ್ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್ ಎಂಬ ಸಂಸ್ಥೆಯ ಮೂಲಕ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಆಯ್ದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ.50 ಸಾವಿರ ರೂ ಗಳನ್ನು ಹಂಚಿಕೆ ಮಾಡುತ್ತಿದೆ.

ದಿನಕರ್ ಪುತ್ರನ್ ಎಂಬ ಕನ್ನಡಿಗ ಇಸ್ರೇಲ್ ದೇಶದಲ್ಲಿ ದುಡಿಯುವ ಒಂದಷ್ಟು ಯುವಕರನ್ನು ‌ಒಂದುಗೂಡಿಸಿ ಅಮೂಲಕ ಆಶಾಕಿರಣ ಗ್ರೂಪ್ ರಚನೆ ಮಾಡಿದ್ದು,ಈ ಗ್ರೂಪ್ ಮೂಲಕ ತವರೂರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬಗಳಿಗೆ ವಿವಿಧ ರೀತಿಯ ಸಮಸ್ಯೆಗಳಿಗೆ ಸಹಕಾರ ನೀಡುವ ಉದ್ದೇಶ ಹೊಂದಿದ್ದರು.

ಹೊರ ದೇಶದಲ್ಲಿ ದುಡಿದು ಹಣ ಮಾಡುವುದು ಮಾತ್ರ ಉದ್ದೇಶವಾಗದೆ ಸಾಮಾಜಿಕವಾಗಿ ಹಿಂದುಳಿದ ಜನರ ಕಣ್ಣೀರೊರಸುವ ಕೆಲಸ ಮಾಡಬೇಕು, ಅ ಮೂಲಕ ಜನಸೇವೆ ಮಾಡಬೇಕು ಎಂಬ ಮಹದಾಸೆಯಿಂದ 8 ಜನರಿಂದ ಆರಂಭವಾದ ಈ ಗ್ರೂಪ್ ನಲ್ಲಿ ಪ್ರಸ್ತುತ 33 ಸದಸ್ಯರಿದ್ದಾರೆ.

ಆರೋಗ್ಯ, ಶಿಕ್ಷಣ, ಮನೆ, ಮದುವೆ ಹೀಗೆ ನಾನಾ ಸಮಸ್ಯೆ ಗಳಿಂದ ಬಳಲುತ್ತಿರುವ ಕನ್ನಡಿಗರ ಪಾಲಿಗೆ ನಾವು ಹೊರದೇಶದಲ್ಲಿ ದುಡಿದು ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಅರಂಭ ಮಾಡಿದ ಗ್ರೂಪ್ ನೂರಾರು ಜನರ ಬಾಳಿಗೆ ಬೆಳಕಾಗಿದೆ.

ಯೋಜನೆಗೆ ತುಂಬಿತು ಐದು ವರ್ಷ…

ದಿನಕರ್ ಪುತ್ರನ್ ಎಂಬವರ ಕನಸಿನ ಕೂಸು ಆಶಾಕಿರಣ ಗ್ರೂಪ್ ಇದು ಕೇವಲ 8 ಜನರ ಮೂಲಕ 5. ವರ್ಷಗಳ ಹಿಂದೆ ಇಸ್ರೇಲ್ ನಲ್ಲಿ ಆರಂಭವಾಯಿತು. ಆಬಳಿಕ ಸದಸ್ಯರ ಸಂಖ್ಯೆ 33 ಕ್ಕೆ ಏರಿತು. ಹಾಗಾಗಿ ಪ್ರತಿ ತಿಂಗಳು 50 ಸಾವಿರ ರೂ ಹಣವನ್ನು ಬಡವರಿಗೆ ಹಂಚಿಕೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಹೊಂದಿರುವ ಈ ಗ್ರೂಪ್ ಈವರಗೆ ಒಟ್ಟು 105 ಜನರಿಗೆ ಆರ್ಥಿಕ ನೆರವು ನೀಡಿದೆ.

See also  ಹೈದರಾಬಾದ್: ರಸ್ತೆ ಅಪಘಾತ, ಬ್ಯೂಟಿಷಿಯನ್ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು