ಮಂಗಳೂರು: ಸೋಮೇಶ್ವರ ಸಮುದ್ರ ತೀರದಿಂದ ನಿರಂತರ ಮರಳು ಕಳ್ಳತನ ವಾಗುತ್ತಿರುವ ಹಿನ್ನೆಲೆಯಲ್ಲಿ ಹಾಕಿದ್ದ ಸಿಸಿ ಕ್ಯಾಮರ ಮತ್ತು ತಂತಿ ತಡೆಬೇಲಿಯನ್ನು ಮರಳು ಕಳ್ಳರು ಧ್ವಂಸ ಮಾಡಿದ್ದಾರೆ.
ಮರಳು ಕಳ್ಳತನ ತಡೆಯಲು ಸೋಮೇಶ್ವರ ಸಮುದ್ರ ತೀರ ಕೋಟೆಪುರ ತಲಪಾಡಿ ಇನ್ನಿತರ ಪ್ರದೇಶಗಳಲ್ಲಿ ಜಿಲ್ಲಾಡಳಿತವು ಇಂಟರ್ನೆಟ್ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ.
ನಸುಕಿನ ಜಾವ 1ರಿಂದ 2ಗಂಟೆ ಸುಮಾರಿಗೆ ಸೋಮೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರವನ್ನು ಟಿಪ್ಪರ್ ಒಂದು ಹಿಮ್ಮುಖವಾಗಿ ಚಲಿಸಿ ಧ್ವಂಸ ಮಾಡಿದೆ.
ಮರಳು ಕಳ್ಳರು ಸಿಸಿ ಕ್ಯಾಮರಾವನ್ನು ಟಿಪ್ಪರ್ ಮುಖೇನ ಚಲಿಸಿ ಧ್ವಂಸ ಮಾಡಿದ ವಿಡಿಯೋ ವೈಫೈ ಮುಖೇನ ದಾಖಲಾಗಿದೆ.