News Kannada
Friday, October 07 2022

ಮಂಗಳೂರು

ಬಂಟ್ವಾಳ: ಶಾಲೆಯಲ್ಲಿ ಮುರಿದ ಬೆಂಚು, ಬಾಗಿಲುಗಳನ್ನು ಬಳಸಿಕೊಂಡು ಹೊಸ ಪೀಠೋಪಕರಣ ತಯಾರಿ! - 1 min read

Photo Credit : By Author

ಬಂಟ್ವಾಳ: ವರ್ಷದಿಂದ‌ ವರ್ಷಕ್ಕೆ ಶಾಲೆಗಳಲ್ಲಿನ ಪೀಠೋಪಕರಣಗಳು‌ ಹಳೆಯದಾಗಿ ಸ್ಟೋರ್ ರೂಂ‌ ಸೇರುವುದು ಮಾಮೂಲಿ, ಆದರೆ ಬಂಟ್ವಾಳ ತಾಲೂಕಿನ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುರಿದ ಪೀಠೋಪಕರಣಗಳಿಂದಲೇ ಹೊಸ ಪೀಠೋಪರಣಗಳ ತಯಾರಿಸಿರುವ ಪ್ರಯೋಗವೊಂದು ಗಮನ ಸೆಳೆದಿದೆ.

ಬಂಟ್ವಾಳ ತಾಲೂಕಿನ ಮೂಡಂಬೈಲು ಸರ್ಕಾರಿ ಶಾಲೆಗೆ 90 ವರ್ಷದ ಇತಿಹಾಸವಿದ್ದು, ಶಾಲೆಯಲ್ಲಿದ್ದ ಮುರಿದ ಬೆಂಚು, ಬಾಗಿಲುಗಳನ್ನು ಬಳಸಿಕೊಂಡು ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರು ಹೊಸ ಪೀಠೋಪಕರಣಗಳನ್ನು ತಯಾರಿಸಿದ್ದಾರೆ.

ಶಾಲಾ ಮುಖ್ಯಶಿಕ್ಷಕ ಅರವಿಂದ ಕುಡ್ಲ ಅವರ ಯೋಚನೆಯಂತೆ ಹಳೆ ವಿದ್ಯಾರ್ಥಿಯಾಗಿರುವ ರಮೇಶ್ ಆಚಾರ್ಯರು ಸುಮಾರು 1ತಿಂಗಳ ಕಾಲ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಯಾರಿಗೂ ಬೇಡವಾಗಿದ್ದ ಮುರಿದ ಬೆಂಚ್ ಡೆಸ್ಕ್ ಬಾಗಿಲಿನ ಮರಗಳನ್ನು ಬಳಸಿಕೊಂಡು ಶಾಲೆಗೆ ಪೋಡಿಯಂ, ಪೇಪರ್ ರೀಡಿಂಗ್ ಡೆಸ್ಕ್, ಪುಸ್ತಕದ ಕಪಾಟು, ಕಿಚನ್ ಶೆಲ್ಫ್, ನಲಿ ಕಲಿ ಡೆಸ್ಕ್ ಅನ್ನು ತಯಾರಿಸಿಕೊಟ್ಟಿದ್ದಾರೆ.

ಶಾಲಾ ಮುಖ್ಯಶಿಕ್ಷಕ ಅರವಿಂದ ಕುಡ್ಲ ಅವರು ಹೇಳುವಂತೆ, ವಿಪ್ರೋ ಸಂಸ್ಥೆಯ ಮಹೋನ್ನತ ಯೋಜನೆಯ ಆಶಯದಂತೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಭಾಗವಾಗಿ, ರಮೇಶ್ ಆಚಾರ್ಯರನ್ನು ಸಂಪರ್ಕಿಸಿದಾಗ ಸಂತಸದಿಂದ ಒಪ್ಪಿಕೊಂಡು ನಮ್ಮ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

ರಮೇಶ್ ಆಚಾರ್ಯರು 1980 ರ ದಶಕದಲ್ಲಿ ನಮ್ಮ‌ಶಾಲೆಯಲ್ಲಿ ಕಲಿತವರು ಮಾತ್ರವಲ್ಲದೆ , ಅವರ ಮೂವರು ಮಕ್ಕಳೂ ನಮ್ಮ ಶಾಲೆಯಲ್ಲಿ‌ಕಲಿತವರು,ಕಿರಿಯವಳು ನಂಬಿಕಾ ಈಗ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ ಎಂದು ಅರವಿಂದ ಕುಡ್ಲ ವಿವರಿಸಿದರು.

ಶಾಲೆಯ 60 ವಿದ್ಯಾರ್ಥಿಗಳಿಗೆ ಹೊಸ ಡೆಸ್ಕ್ ಮತ್ತು ಬೆಂಚುಗಳನ್ನು ಪಡೆದ ನಂತರ, ಹಳೆಯ ಬೆಂಚುಗಳು ಮತ್ತು ಡೆಸ್ಕ್‌ಗಳನ್ನು ಇತರ ಬಿಸಾಡಿದ ಮರದ ವಸ್ತುಗಳನ್ನು ಸ್ಟೋರ್ ರೂಂನಲ್ಲಿ ಇರಿಸಲಾಗಿದ್ದು, ಈಗ ಅವುಗಳನ್ನು ಹೊಸ ರೂಪದಲ್ಲಿ ಬಳಕೆ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ಅರವಿಂದ‌ಕುಡ್ಲ.

ಸಮುದಾಯದ ಭಾಗವಹಿಸುವಿಕೆಯೊಂದಿಗೆ ಶಾಲೆ ಅತ್ಯುತ್ತಮ ರೀತಿಯಲ್ಲಿ ಮುನ್ನಡೆಯಬಹುದು ಎಂಬುವುದರ ಹಲವು‌ಪ್ರಯೋಗಗಳು ಮೂಡಂಬೈಲು ಸರ್ಕಾರಿ ಶಾಲೆಯಲ್ಲಿ ಸಾಕಾರಗೊಳ್ಳುತ್ತಿರುವುದು ಸಂತಸದ ಸಂಗತಿ.

See also  ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ : ಇಬ್ಬರ ಸಾವು, ಏಳುಜನರಿಗೆ ತೀವ್ರ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು