News Kannada
Wednesday, October 04 2023
ಮಂಗಳೂರು

ಬೆಳ್ತಂಗಡಿ: ವಿಶ್ವ ಕರ್ಮಯಜ್ಞ, ಪೂಜೆ ಹಾಗೂ ಪಾಕಶಾಲಾ ಉದ್ಘಾಟನಾ ಸಮಾರಂಭ

Belthangady: Vishwa Karmayajna and Pooja and Culinary School Inauguration Ceremony
Photo Credit : By Author

ಬೆಳ್ತಂಗಡಿ: ವಿಶ್ವಕರ್ಮಭ್ಯುದಯ ಸಭಾ ಲಾಯಿಲ – ಬೆಳ್ತಂಗಡಿ ಇದರ ವತಿಯಿಂದ ಶ್ರೀ ಕಾಲಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ, ಶಿವಪ್ರಸಾದ ಪುರೋಹಿತ್ ಸವಣಾಲು ಇವರ ಪೌರೋಹಿತ್ವದಲ್ಲಿ ವಿಶ್ವ ಕರ್ಮಯಜ್ಞ ಮತ್ತು ಪೂಜೆ ಹಾಗೂ ಪಾಕಶಾಲಾ ಉದ್ಘಾಟನಾ ಸಮಾರಂಭವು ಲಾಯಿಲದ ಸಂಘದ ಸಭಾಭವನದಲ್ಲಿ ಸೆ.೧೭ರಂದು ಜರುಗಿತು.

ಪಾಕಶಾಲೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಎಂದರೆ ಹೊಸದನ್ನು ಸೃಷ್ಟಿಸಬಲ್ಲ ಅದ್ಭುತ ಶಕ್ತಿ ಇರುವವರು ಎಂದರ್ಥ ನಮ್ಮ ಪುರಾಣಗಳು, ಮಹಾಭಾರತದ ಗ್ರಂಥಗಳಲ್ಲೂ ವಿಶ್ವಕರ್ಮರ ವಿಷಯ ಪ್ರಸ್ತಾಪವಾಗುತ್ತದೆ. ಅಷ್ಟು ಇತಿಹಾಸ ಈ ಸಮಾಜಕ್ಕೆ ಇದೆ. ಇಡೀ ಜಗತ್ತಿಗೆ ಶಿಲ್ಪಕಲೆ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ವಿಶ್ವಕರ್ಮರು ಶ್ರಮ ಜೀವಿಗಳು, ವಿಶ್ವ ಪರಂಪರೆಯಲ್ಲಿ ಗುರುತಿಸಿ ಜಾಗತೀಕ ಮನ್ನಣೆ ದೊರೆಯಬೇಕಾಗಿದ್ದ, ಬೇಲೂರು, ಹಳೆಬೀಡು, ಶ್ರವಣಬೆಳಗೋಳ ಸೇರಿದಂತೆ ಭಾರತ ದೇಶದಲ್ಲಿ ಆನೇಕ ಅದ್ಬುತ ಶಿಲ್ಪಕಲೆಗಳನ್ನು ಬ್ರಿಟೀಷರು ಮರೆಮಾಚಿದ್ದರಿಂದ ಅವುಗಳು ಬೆಳಕಿಗೆ ಬರಲು ಸಾಧ್ಯವಾಗಿಲ್ಲ. ಈ ಶಿಲ್ಪಕಲೆಯನ್ನು ಕೆತ್ತಿದವರು ವಿಶ್ವಕರ್ಮರು, ಆನೇಕ, ದೇವಸ್ಥಾನ, ಗುಡಿ,ಗೋಪುರಗಳು, ಮನೆಗಳಲ್ಲಿ ಅವರ ಕಲಾ ಶಿಲ್ಪಗಳು ಮೇಲೈಸುತ್ತಿದೆ. ಜಗತ್ತಿನ ವಿಶೇಷ ಆಕರ್ಷಣೆಯಾದ ಸ್ಪರ್ಣ ಶ್ರೀಲಂಕೆಯನ್ನು ಸೃಷ್ಟಿದವರು ಕೂಡಾ ವಿಶ್ವಕರ್ಮರಾಗಿದ್ದಾರೆ. ಇಂದಿನ ಆಧುನಿಕ ಕಾಲದ ತ್ರಿಡಿ ಇಮೇಜನ್ನು ಸಾವಿರಾರು ವರ್ಷಗಳ ಹಿಂದಿಯೇ ವಿಶ್ವಕರ್ಮರು ಕಲ್ಲಿನಲ್ಲಿ ಕೆತ್ತಿ ಮಾಡಿ ತೋರಿಸಿದ್ದಾರೆ ಎಂದು ವಿಶ್ವಕರ್ಮರ ಸಾಧನೆಗಳನ್ನು ತಿಳಿಸಿದರು.

ವಾಸ್ತುಶಿಲ್ಪ ಮಹಾವಿಶ್ವವಿದ್ಯಾಲಯ ಮಾಡುವ ಕನಸು ವಿಶ್ವಕರ್ಮ ಸಮಾಜದ ಸ್ವಾಮೀಜಿಯವರಲ್ಲಿದೆ. ಕೆಲ ದಿನಗಳ ಹಿಂದೆ ಅವನ್ನು ಭೇಟಿಯಾದಾಗ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅವರ ಶಿಷ್ಯನಾಗಿ ಇದು ಈಡೇರಿಸಿಕೊಡುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಇದೆ ಎಂದು ಶಾಸಕರು ಈಗಾಗಲೇ ವಿಶ್ವಕರ್ಮ ಸಮುದಾಯ ಭವನ ನಿಮಾರ್ಣಕ್ಕೆ ರೂ.೫೦ ಲಕ್ಷ ವನ್ನು ನೀಡಿದ್ದು, ಸಭಾಂಗಣಕ್ಕೆ ಇಂಟರ್‌ಲಾಕ್ ವ್ಯವಸ್ಥೆಯನ್ನು ಇನ್ನು ಎರಡು ತಿಂಗಳ ಒಳಗೆ ಮಾಡಿಸಿಕೊಡುತ್ತೇನೆ. ಅಲ್ಲದೆ ಮುಂದೆ ನಡೆಯಲಿರುವ ಸಮುದಾಯ ಭವನ, ಅನ್ನಛತ್ರ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆ ವಹಿಸಿ, ಮುಂದೆ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಿಗೆ ಸರ್ವರ ಸಹಕಾರ ಕೋರಿದರು. ಮುಖ್ಯ ಅತಿಥಿಗಳಾಗಿ ನವೋದಯ ವಿಶ್ವಬ್ರಾಹ್ಮಣ ಸಂಘ ಅಂಡಿಂಜೆ ಇದರ ಅಧ್ಯಕ್ಷ ಪ್ರಭಾಕರ ಆಚಾರ್ಯ, ವಿಸ್ತೃತ ಕಟ್ಟಡ ಸಮಿತಿ ವಿಶ್ವಕರ್ಮಾಭ್ಯುದಯ ಸಭಾ ಬೆಳ್ತಂಗಡಿ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಗಾಯತ್ರಿ ಮಹಿಳಾ ಮಂಡಳಿ ಬೆಳ್ತಂಗಡಿ ಅಧ್ಯಕ್ಷ ವಸಂತಿ ಮೋಹನ ಆಚಾರ್ಯ ಭಾಗವಹಿಸಿ, ಶುಭ ಕೋರಿದರು.

ಸನ್ಮಾನ ಕಾರ್ಯಕ್ರಮ: ಈ ಸಂದರ್ಭದಲ್ಲಿರಾಷ್ಟ್ರ ಪ್ರಶಸ್ತಿ ಪುರಸ್ಕೃತ , ಶಿಕ್ಷಕರು ದಿವಾಕರ ಆಚಾರ್ಯ,  ಗಾಯತ್ರಿ ವಿಶ್ವಕರ್ಮ ಮ.ಮಂಡಳಿ ಮಾಜಿ ಅಧ್ಯಕ್ಷರು ರೀತಾ ವೈ ಆಚಾರ್ಯ, ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಆಚಾರ್ಯ, ಸವಣಾಲು ಶಿಕ್ಷಣ ಸಾರಥಿ -೨೦೨೨ ಪ್ರಶಸ್ತಿ ಪುರಸ್ಕೃತ ರಾಜೇಶ್ ಆಚಾರ್ಯ, ಪಂ.ಇಂ.ಉ ವಿಭಾಗ ಬೆಳ್ತಂಗಡಿ ಇದರ ಗುಮಾಸ್ತ ಸರಸ್ವತಿ ನಿರಂಜನ ಆಚಾರ್ಯ ಕೈಪ್ಲೋಡಿ, ಅತೀ ಚಿಕ್ಕ ಡಾಟ್ ಮಂಡಲ ರಚನೆ ಮೂಲಕ ವಿಶ್ವದಾಖಲೆ ಮಾಡಿದ ಕು.ಸುರಕ್ಷಾ ಕನ್ನಾಜೆ, ಸಿ ಎ ಬ್ಯಾಂಕ್ ನಿರ್ದೇಶಕರು ಕೆ ನಾರಾಯಣ ಆಚಾರ್ಯ ಹೆಟ್ಲೊಟ್ಟು, ಸ್ಪಂದನ ಚಾನೆಲ್ ನಿರೂಪಕಿ ಕೀರ್ತಿ ಎಸ್ ಕೊಕ್ರಾಡಿ, ಆಶಾ ಸತೀಶ್ ಆಚಾರ್ಯ, ಮಂಜುನಾಥ ಆಚಾರ್ಯ ಅಳದಂಗಡಿ ಇವರನ್ನು ಸಭಾದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶಾಸಕರು ಸನ್ಮಾನಿಸಿದರು. ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಮಾಜ ಬಾಂಧವನ್ನು ಸ್ಮರಣಿಕೆ ನೀಡಿ ಗುರುತಿಸಲಾಯಿತು.

See also  ಉಜಿರೆ ಎಸ್.ಡಿ.ಎಂ ನಲ್ಲಿ ಬಿಪಿನ್ ರಾವತ್‌ರಿಗೆ ಭಾವಪೂರ್ಣ ಶ್ರದ್ಧಾಂಜಲಿ

ವೇದಿಕೆಯಲ್ಲಿ ಕಾರ್ಯದರ್ಶಿ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಸಹ ಕಾರ್ಯದರ್ಶಿ ಸದಾನಂದ ಆಚಾರ್ಯ ಸುಲ್ಕೇರಿಮೊಗ್ರು, ಕೋಶಾಧಿಕಾರಿ ಯೋಗೀಶ ಆಚಾರ್ಯ ಸವಣಾಲು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ನೈಕುಳಿ ಉಪಸ್ಥಿತರಿದ್ದರು.

ಗಾಯತ್ರಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಸೀತಾರಾಮ ಆಚಾರ್ಯ ವೇಣೂರು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರು, ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು