ಬೆಳ್ತಂಗಡಿ: ಭಜನಾ ಕಮ್ಮಟದಲ್ಲಿ ಭಜನಾ ತರಬೇತಿಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆಯವರ ಮಾರ್ಗದರ್ಶನದಲ್ಲಿ ಸೆ.19 ರಿಂದ 24 ನೇ ವರ್ಷದ ಭಜನಾ ಕಮ್ಮಟ ತರಬೇತಿಯು ಮಹೋತ್ಸವ ಸಭಾ ಭವನದಲ್ಲಿ ನಡೆಯುತ್ತಿದೆ.
174 ಭಜನಾ ಮಂಡಳಿಗಳಿಂದ 322 ಶಿಬಿರಾರ್ಥಿಗಳು ಭಜನೆಯಲ್ಲಿ ಭಾಗವಹಿಸಿರುತ್ತಾರೆ. ವಿಶೇಷವಾಗಿ 138 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ, ಕಳೆದ ಮೂರು ದಿನಗಳಲ್ಲಿ ರಾಗ ತಾಳಗಳ ಪರಿಚಯ ಹಾಗೂ ತರಗತಿಯನ್ನು ಶಿಕ್ಷಕಿ ಮನೋರಮಾ ತೋಳ್ಪಾಡಿತ್ತಾಯ, ಸಂಗೀತ ವಿದುಷಿ ಶ ಉಷಾ ಹೆಬ್ಬಾರ್ ಹಾಗೂ ಶ್ರೀಮತಿ ಸಂಗೀತ ಬಾಲಚಂದ್ರ ಉಡುಪಿ, ಯವರು ಭಜನಾ ತರಬೇತಿಯನ್ನು ನೀಡಿರುತ್ತಾರೆ. ಸೌಮ್ಯ ಸುಭಾಷ್ ಸಂಪ್ರದಾಯ ಹಾಡುಗಳ ತರಬೇತಿಯನ್ನು ನಡೆಸಿಕೊಟ್ಟರು. ಈ ದಿನ ಭಜನಾ ಕಮ್ಮಟದ ಮೂರನೆಯ ದಿನವಾಗಿದ್ದು ಪ್ರಥಮ ಬಾರಿಗೆ ಭಜನಾ ತರಬೇತಿಯಲ್ಲಿ ಹಿಮ್ಮೇಳದಲ್ಲಿ ಡೋಲಕ್, ಕೀ ಬೋರ್ಡ್‍ಗಳನ್ನು ಬಳಸಲಾಗಿದೆ.
ಸೆ.23 ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಜನಾ ಮಂಗಳೋತ್ಸವ ನಡೆಯಲಿದ್ದು ಅಂದಾಜು 500 ಮಂಡಳಿಗಳಿಂದ 6000 ಭಜಕರು ಭಾಗವಹಿಸುವ ನಿರೀಕ್ಷೆ ಇದೆ.
ಸೆ.19 ಮತ್ತು ಸೆ.20 ರಂದು ರಾಮಕೃಷ್ಣ ಕಾಟುಕುಕ್ಕೆ ಹಾಗೂ ಸೆ.20 ಮತ್ತು ಸೆ.21 ರಂದು ಉಪ್ಪುಂದ ರಾಜೇಶ್ ಪಡಿಯಾರ್ ಮೈಸೂರು, ಸೆ.21 ಮತ್ತು ಸೆ.22 ರಂದು ಶಂಕರ ಶ್ಯಾನುಭಾಗ್ ಬೆಂಗಳೂರು, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಿದ್ದಾರೆ.
ಪ್ರತಿದಿನ ಮದ್ಯಾಹ್ನ ಗಂಟೆ 12 ರಿಂದ 1.00 ರ ವರೆಗೆ ಉಪನ್ಯಾಸ ಕಾರ್ಯಕ್ರಮವಿದ್ದು, ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಇವರಿಂದ ಭಜನಾ ಮಂಡಳಿಗಳಲ್ಲಿ ಧಾರ್ಮಿಕ ಆಚರಣೆಗಳು, ಮನು ಹಂದಾಡಿ ಕುಂದಾಪ್ರ ಕನ್ನಡದ ಸಾಂಸ್ಕೃತಿಕ ರಾಯಭಾರಿ, ಇವರಿಂದ ಕುಂದಾಪ್ರ ಕನ್ನಡ-ಗ್ರಾಮ್ಯ ಭಾಷೆಯ ಹಾಸ್ಯ ಮಾತುಗಾರಿಕೆ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಮ್ಮಟದ ಮೊದಲನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ|| ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆಯ ‘ಯಡವಟ್ಟು ರಾಜ’ ಎಂಬ ನಾಟಕ ಧರ್ಮಸ್ಥಳದ ರಂಗಶಿವ ಕಲಾ ಬಳಗದವರಿಂದ ಪ್ರದರ್ಶಿಸಲ್ಪಿಟ್ಟಿತು.
ಎರಡನೆ ಹಾಗೂ ಮೂರನೆಯ ದಿನ ಧರ್ಮಸ್ಥಳದ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನಗೊಂಡಿತು. ಹಾಗೂ ರಂಗಶಿವ ಕಲಾ ಬಳಗ ಧರ್ಮಸ್ಥಳ ಇವರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.
ಕಮ್ಮಟದ ಸಂಧರ್ಭದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀ ಮೋಹನದಾಸ ಸ್ವಾಮೀಜಿ, ಡಾ|| ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.