News Kannada
Thursday, October 05 2023
ಮಂಗಳೂರು

ಬೆಳ್ತಂಗಡಿ: ಉಜಿರೆಯ ದಿ ಓಷ್ಯನ್ ಪರ್ಲ್ ಹೋಟೆಲ್ ಉದ್ಘಾಟನೆ

Belthangady: Inauguration of The Ocean Pearl Hotel in Ujire
Photo Credit : By Author

ಬೆಳ್ತಂಗಡಿ: ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳ ಉಜಿರೆ ಶ್ರೇಷ್ಠ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಇಬ್ಬರು ಖ್ಯಾತ ಉದ್ಯಮಿಗಳಾದ ಜಯರಾಮ ಬನನ್ ಹಾಗೂ ಶಶಿಧರ ಶೆಟ್ಟಿ ಅವರು ಲಾಭದ ಉದ್ದೇಶವಿಲ್ಲದೆ ತಾಯ್ನಾಡಿನಲ್ಲಿ ಸೇವೆ ನೀಡುವ ದೃಷ್ಟಿಯಿಂದ ನಿರ್ಮಿಸಿರುವ ಹೋಟೆಲ್ ಉದ್ಯಮ ಉಜಿರೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಶುಕ್ರವಾರ ಉಜಿರೆಯ ಧರ್ಮಸ್ಥಳ ರಸ್ತೆಯ ಲಲಿತ್ ನಗರ ಬಳಿ ಕಾಶಿ ಪ್ಯಾಲೆಸ್ ನಲ್ಲಿ ನಿರ್ಮಾಣಗೊಂಡಿರುವ ದಿ ಓಷ್ಯನ್ ಪರ್ಲ್ ಹೋಟೆಲ್ ಉದ್ಯಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದಕ ಹಾಗೂ ಉಡುಪಿ ಜಿಲ್ಲೆಗಳು ಹೋಟೆಲ್ ಉದ್ಯಮದಲ್ಲಿ ಪ್ರಖ್ಯಾತಿಗಳಿಸಿವೆ. ತುಳುನಾಡಿನ ಮಂದಿ ಎಲ್ಲಿದ್ದರೂ ಶ್ರೇಷ್ಠ ಸಾಧನೆ ಮಾಡುವ ವ್ಯಕ್ತಿತ್ವ ಉಳ್ಳವರು. ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಗೊಳ್ಳಲಿದ್ದು ಇಲ್ಲಿನ ನಾನಾ ಭಾಗಗಳಲ್ಲಿ ಇಂತಹ ಹೋಟೆಲ್ ಗಳು ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದರು.

ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿರುವ ಉಜಿರೆ ಪ್ರದೇಶಕ್ಕೆ ಇಂತಹ ಹೋಟೆಲ್ ಒಂದರ ನಿರ್ಮಾಣ ಅಗತ್ಯವಾಗಿತ್ತು. ಬೃಹತ್ ನಗರಗಳಲ್ಲಿನ ಹೋಟೆಲ್ ಗಳಲ್ಲಿರುವ ಸೌಕರ್ಯವನ್ನು ಉಜಿರೆಗೆ ಪರಿಚಯಿಸಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಉಜಿರೆಯ ಮೂಲಕ ಬರುವ ಸಾಮಾನ್ಯ ಪ್ರವಾಸಿಗರಿಂದ ಹಿಡಿದು ದೇಶದ ಶ್ರೇಷ್ಠ ವ್ಯಕ್ತಿಗಳಿಗೂ ಬೇಕಾದ ವ್ಯವಸ್ಥೆಯನ್ನು ಹೊಂದಿರುವ ಹಾಗೂ ಸ್ಥಳೀಯರ ಅಗತ್ಯತೆಗೆ ಬೇಕಾದ ಸೇವೆ ನೀಡುವ ಉದ್ದೇಶದಿಂದ ನಿರ್ಮಾಣವಾಗಿರುವ ಈ ಹೋಟೆಲ್ ಮಾದರಿಯಾಗಿದೆ ಎಂದು ಹೇಳಿದರು.

ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿ ಇಲ್ಲಿ ಮಿತ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ಸಿಗಲಿದೆ. ಅವಕಾಶಗಳು ಬೆಳವಣಿಗೆಗೆ ಕಾರಣ ಎಂಬ ಧ್ಯೇಯದೊಂದಿಗೆ ಇಲ್ಲಿನ ಸಂಪೂರ್ಣ ಕಾಮಗಾರಿಯನ್ನು ಸ್ಥಳೀಯರಿಂದಲೇ ಮಾಡಿಸಲಾಗಿದೆ. ಹಾಗೂ ಇಲ್ಲಿನ ಶೇ.80ಕ್ಕಿಂತ ಅಧಿಕ ಉದ್ಯೋಗಿಗಳು ಸ್ಥಳೀಯರೇ ಆಗಿದ್ದಾರೆ ಎಂದು ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನಂತ ಅಸ್ರಣ್ಣ, ಸಚಿವ ಕೃಷ್ಣ ಪಾಲೇಮಾರ್ ಕಾಶಿ ಅಮ್ಮ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್, ಎಸ್‌ ಡಿಎಂಇ ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ಯಶೋವರ್ಮ, ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಡಾ.ವೈ. ಭರತ್ ಶೆಟ್ಟಿ,ಯು.ರಾಜೇಶ್ ನಾಯ್ಕ್, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಗಾಯತ್ರಿ, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.

See also  ಕಾಂಗ್ರೆಸ್ ಭ್ರಷ್ಟಾಚಾರ ಕರ್ಮಕಾಂಡ ಬಯಲಾಗಿದೆ: ನಳಿನ್ ಕುಮಾರ್ ಕಟೀಲ್

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿವೇಕ್ ರೈ, ಓಷ್ಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ನ ಅಧ್ಯಕ್ಷ ಜಯರಾಮ ಬನನ್, ಉಪಾಧ್ಯಕ್ಷ ಗಿರೀಶ್ ಬಿ. ಎನ್, ಜನರಲ್ ಮ್ಯಾನೇಜರ್ ಶಿವಕುಮಾರ್, ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ನಿತ್ಯಾನಂದ ಮಂಡಲ್ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ಶಶಿಧರ ಶೆಟ್ಟಿ ಹಾಗೂ ಕುಟುಂಬಸ್ಥರು ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ವಂದಿಸಿದರು.

ಗುರುವಾರ ರಾತ್ರಿ ಜರಗಿದ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವೀ. ಹೆಗ್ಗಡೆಯವರು ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು