News Kannada
Monday, December 05 2022

ಮನರಂಜನೆ

ಮಂಗಳೂರು: ಬಹು ನಿರೀಕ್ಷಿತ ಇಲ್ಲ್ ಒಕ್ಕೆಲ್ ಚಿತ್ರದ ಟ್ರೈಲರ್ ಬಿಡುಗಡೆ

Mangaluru: The trailer of the much-awaited film Il Okkel has been released.
Photo Credit : By Author

ಮಂಗಳೂರು: ಬಹು ನಿರೀಕ್ಷಿತ ಇಲ್ಲ್ ಒಕ್ಕೆಲ್ ಸಿನಿಮಾದ ಟ್ರೈಲರ್ ಮಂಗಳೂರು ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪಿಲಿನಲಿಕೆ ಕಾರ್ಯಕ್ರಮದಲ್ಲಿ  ಬಿಡುಗಡೆಗೊಂಡಿತು.

ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಪಿಲಿನಲಿಕೆ ಪ್ರತಿಷ್ಢಾನದ ಅಧ್ಯಕ್ಷ ಮಿಥುನ್ ರೈ ಚಿತ್ರದ ನಿರ್ದೇಶಕ  ಸಹ ನಿರ್ಮಾಪಕ  ಡಾ ಸುರೇಶ ಚಿತ್ರಾಪು, ನಿರ್ಮಾಪಕ ವಾಸುದೇವ್ ಎಸ್ ಚಿತ್ರಾಪು, ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್,  ಡಾ.ಪ್ರಿಯಾ ಹರೀಶ್ ಮತ್ತು ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು  ಉಪಸ್ಥಿತರಿದ್ದರು.

ಇಲ್ಲ್ ಒಕ್ಕೆಲ್ ಸಿನಿಮಾ ಅಕ್ಟೊಬರ್ ೨೧ ರಂದು   ತುಳುನಾಡಿನಾದ್ಯಂತ  ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಡಾ ಸುರೇಶ್ ಚಿತ್ರಾಪು ತಿಳಿಸಿದ್ದಾರೆ.

ಇದೊಂದು ಸಂಪೂರ್ಣ ಹಾಸ್ಯಮಯ  ಹಾರರ್ ಚಿತ್ರವಾಗಿದ್ದು ರಾಜ ಷ ಇದಕ್ಕೆ  ಸಂಗೀತವನ್ನು ನೀಡಿ ಟಿಪ್ಪು, ರಘು ದೀಕ್ಷಿತ್, ಮೈಂ ರಾಮ್ ದಾಸ್ ಅವರು ಹಾಡಿದ ಹಾಡುಗಳು  ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಮೋಡಿ ಮಾಡುತ್ತಿದೆ. ಅದ್ವಿತಿ ಶೆಟ್ಟಿ ಈ ಚಿತ್ರದ ನಾಯಕಿ.

ಚಿತ್ರದಲ್ಲಿ  ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ವಿ. ಜೆ. ವಿನೀತ್ ಕುಮಾರ್, ವಿಸ್ಮಯ ವಿನಾಯಕ್ ಉಮೇಶ್ ಮಿಜಾರು, ಸುನಿಲ್ ನೆಲ್ಲಿಗುಡ್ಡೆ, ಮೈಮ್ ರಾಮದಾಸ್,  ರಾಜೇಶ್  ಪೂಜಾರಿ, ರಾದೇಶ್ ಶೆಣೈ, ಚಂದ್ರಕಲಾ  ಮೋಹನ್, ರೂಪ ವರ್ಕಾಡಿ, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಮ್ ಕಟೀಲ್ ಹಾಗೂ ನಿರೀಕ್ಷ ಶೆಟ್ಟಿ ಅಭಿನಯಿಸಿದ್ದಾರೆ.

See also  ಚೆನ್ನೈ: ಯುಎಇನಲ್ಲಿ ಬಿಡುಗಡೆಗೆ ತಯಾರಾದ ಯುದ್ಧ ಪ್ರೇಮ ಕಥೆ 'ಸೀತಾ ರಾಮಂ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು